ಪುಸ್ತಕ ಓದುವುದರಿಂದ ಮಸ್ತಕ ಶುದ್ಧ

Contributed bysubedarcb@gmail.com|Vijaya Karnataka

ಶಿರೋಳದ ಶ್ರೀಯಚ್ಚರಸ್ವಾಮಿ ಗವಿಮಠದಲ್ಲಿ 28ನೇ ಮಾಸಿಕ ಶಿವಾನುಭವಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು. ಅಭಿನವ ಶ್ರೀಯಚ್ಚರ ಮಹಾಸ್ವಾಮಿಗಳು 'ವಿವೇಕದ ಬಾಗಿಲು' ಪುಸ್ತಕ ಬಿಡುಗಡೆಗೊಳಿಸಿದರು. ಪುಸ್ತಕ ಓದುವ ಹವ್ಯಾಸ ಮರೆತು ಮೊಬೈಲ್ ಗೀಳಿನಿಂದ ಸಾಹಿತ್ಯ ಲೋಕ ತಬ್ಬಲಿ ಮಾಡುತ್ತಿರುವುದು ಶೋಚನೀಯ ಎಂದು ಶ್ರೀಗಳು ಕಳವಳ ವ್ಯಕ್ತಪಡಿಸಿದರು. ಯುವ ಸಾಹಿತಿ ಸುನೀಲ ಕಳಸದ ರಚಿಸಿದ ಈ ಪುಸ್ತಕ ಯುವಕರಿಗೆ ಉತ್ತಮ ಮಾರ್ಗದರ್ಶಕ ಎಂದು ಉಪನ್ಯಾಸಕ ವೀರನಗೌಡ ಮರಿಗೌಡ್ರ ಹೇಳಿದರು.

an inspirational message for book lovers

4 ಎನ್ ಆರ್ ಡಿ-6

ಮಾಸಿಕ ಶಿವಾನುಭವಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ (ಬಾಕ್ಸ್ )

ಪುಸ್ತಕ ಓದುವುದರಿಂದ ಮಸ್ತಕ ಶುದ್ಧ (ಹೆಡ್ )

ವಿಕ ಸುದ್ದಿಲೋಕ ನರಗುಂದ

ಜಗತ್ತಿನಲ್ಲಿಪುಸ್ತಕಕ್ಕಿಂತ ಒಳ್ಳೆಯ ಸ್ನೇಹಿತ ಮತ್ತೊಂದಿಲ್ಲ. ಪುಸ್ತಕ ಓದುವುದರಿಂದ ಮಸ್ತಕ ಶುದ್ಧವಾಗುವುದರ ಜತೆಗೆ ಜ್ಞಾನ ವೃದ್ಧಿಸುತ್ತದೆ. ಆದರೆ, ಇತ್ತೀಚೆಗೆ ಜನರು ಓದುವ ಹವ್ಯಾಸವನ್ನೇ ಮರೆತು ಮೊಬೈಲ್ ಗೀಳಿನಿಂದ ಸಾಹಿತ್ಯ ಲೋಕ ತಬ್ಬಲಿ ಮಾಡುತ್ತಿರುವುದು ಶೋಚನೀಯ ಸಂಗತಿ ಎಂದು ಶಿರೋಳ ಯಚ್ಚರಸ್ವಾಮಿ ಗವಿಮಠದ ಅಭಿನವ ಶ್ರೀ ಯಚ್ಚರ ಮಹಾಸ್ವಾಮಿಗಳು ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ಶಿರೋಳದ ಶ್ರೀಯಚ್ಚರಸ್ವಾಮಿ ಗವಿಮಠದಲ್ಲಿಇತ್ತೀಚೆಗೆ ಹಮ್ಮಿಕೊಂಡಿದ್ದ ಶ್ರೀಮಠದ 28ನೇ ಮಾಸಿಕ ಶಿವಾನುಭವಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಇಂದಿನ ಆಧುನಿಕ ಯುಗದಲ್ಲಿಯೂ ಗ್ರಾಮೀಣ ಭಾಗದ ಯುವ ಸಾಹಿತಿ ಸುನೀಲ ಕಳಸದ ಅವರು, ವಿವೇಕದ ಬಾಗಿಲು ಎಂಬ ಪುಸ್ತಕವನ್ನು ರಚಿಸಿ ಬಿಡುಗಡೆಗೊಳಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಉಪನ್ಯಾಸಕ ವೀರನಗೌಡ ಮರಿಗೌಡ್ರ ಮಾತನಾಡಿ, ವಿವೇಕದ ಬಾಗಿಲು ಓದುಗರ ವಿವೇಕವನ್ನು ಬಡಿದೆಬ್ಬಿಸುತ್ತದೆ. ಈ ಪುಸ್ತಕ ಯುವಕರಿಗೆ ಅತ್ಯುತ್ತಮ ಮಾರ್ಗದರ್ಶಕ ಪುಸ್ತಕ ಎಂದು ಹೇಳಿದರು.

ಸಾಹಿತಿ ಸುನೀಲ ಕಳಸದ ಸನ್ಮಾನ ಸ್ವೀಕರಿಸಿ ಮಾತನಾಡಿ, ನನಗೆ ಪುಸ್ತಕ ಬರೆಯಲು ಅನುಭವ ತುಂಬಿದ್ದು ಶಿರೋಳದ ಶ್ರೀ ಯಚ್ಚರಸ್ವಾಮಿ ಗವಿಮಠದ ವೇದಿಕೆ. ಶ್ರೀಮಠದಲ್ಲಿನಡೆಯುತ್ತಿದ್ದ ಪುರಾಣ ಪ್ರವಚನ, ಜಾತ್ರಾ ಮಹೋತ್ಸವ ಕಾರ್ಯಕ್ರಮಗಳಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಶ್ರೀಮಠದ ಅಧ್ಯಾತ್ಮಿಕ ಅನುಭವದಿಂದಲೇ ನನಗೆ ಪುಸ್ತಕ ಬರೆಯಲು ಸಾಧ್ಯವಾಯಿತು ಎಂದು ತಿಳಿಸಿದರು.

ಅಧ್ಯಾತ್ಮಿಕ ಚಿಂತಕ ಬಾಪೂಗೌಡ ತಿಮ್ಮನಗೌಡ್ರ, ಪ್ರಾಚಾರ್ಯ ಎಂ.ವಿ.ಪಾಗಿ, ಶಿಕ್ಷಕ ವಿನಾಯಕ ಶಾಲದಾರ ಮಾತನಾಡಿದರು. ಮಲ್ಲಪ್ಪ ಚಿಕ್ಕನರಗುಂದ, ಬಸವರಾಜ ಕುಪ್ಪಸ್ತ, ಮೈಲಾರೆಪ್ಪ ಹೂಗಾರ, ನಿಂಗಪ್ಪ ಕಳಸದ, ಶ್ರೀಕಾಂತ ದೊಡಮನಿ ಉಪಸ್ಥಿತರಿದ್ದರು.

ಫೋಟೊ: 4 ಎನ್ ಆರ್ ಡಿ-6:

ನರಗುಂದ ತಾಲೂಕು ಶಿರೋಳ ಗ್ರಾಮದಲ್ಲಿನಡೆದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿಅಭಿನವ ಶ್ರೀಯಚ್ಚರ ಮಹಾಸ್ವಾಮಿಗಳು ವಿವೇಕದ ಬಾಗಿಲು ಪುಸ್ತಕ ಬಿಡುಗಡೆಗೊಳಿಸಿದರು.