ಮುಂಬಡ್ತಿಗೆ ಕೌನ್ಸೆಲಿಂಗ್ ಇಂದು ಕಲಬುರಗಿ: ಜಿಲ್ಲಾ ವ್ಯಾಪ್ತಿಯಲ್ಲಿಕಾರ್ಯ ನಿರ್ವಹಿಸುತ್ತಿರುವ ಕನ್ನಡ/ ಉರ್ದು ಮಾಧ್ಯಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಸ್ಥಾನ ಮುಂಬಡ್ತಿ ನೀಡುವ ಸಂಬಂಧ ಫೆ.5 ರಂದು ಬೆಳಗ್ಗೆ 10 ಗಂಟೆಗೆ ಸ್ಥಳ ನಿಯುಕ್ತಿಗೆ ಡಿಡಿಪಿಐ ಕಚೇರಿಯಲ್ಲಿಕೌನ್ಸೆಲಿಂಗ್ ಹಮ್ಮಿಕೊಳ್ಳಲಾಗಿದೆ ಎಂದು ಡಿಡಿಪಿಐ ಶಂಕ್ರಮ್ಮ ಡವಳಗಿ ತಿಳಿಸಿದ್ದಾರೆ. ಕೆಡಿಪಿ ಸಭೆ ನಾಳೆ ಕಲಬುರಗಿ: ಜೇವರ್ಗಿ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಫೆ.6ರಂದು ಬೆಳಗ್ಗೆ 11 ಗಂಟೆಗೆ ಪಟ್ಟಣದ ಮಿನಿ ವಿಧಾನ ಸೌಧದಲ್ಲಿರುವ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿನಡೆಯಲಿದೆ. ಕೆಕೆಆರ್ ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯ್ ಧರ್ಮಸಿಂಗ್ ಅಧ್ಯಕ್ಷತೆ ವಹಿಸಲಿದ್ದು, ತಾಲೂಕು ಮಟ್ಟದ ಎಲ್ಲಅಧಿಕಾರಿಗಳು ಹಿಂದಿನ ಸಭೆಯ ಅನುಪಾಲನಾ ವರದಿಯೊಂದಿಗೆ ಸಭೆಗೆ ಹಾಜರಾಗುವಂತೆ ತಾಪಂ ಇಒ ಪ್ರಕಟಣೆಯಲ್ಲಿತಿಳಿಸಿದ್ದಾರೆ. ಇಂದು ವಿದ್ಯುತ್ ವ್ಯತ್ಯಯ ಕಲಬುರಗಿ: ದುಬೈ ಕಾಲೊನಿಯ ಫೀಡರ್ ಗಳ ವ್ಯಾಪ್ತಿಯಲ್ಲಿನಿರ್ವಾಹಣಾ ಕೆಲಸ ಕಾರ್ಯ ಕೈಗೊಳ್ಳುವ ಪ್ರಯುಕ್ತ ಫೆ.5ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿವ್ಯತ್ಯಯ ಉಂಟಾಗಲಿದೆ. ದುಬೈ ಕಾಲೋನಿ ಫೀಡರ್ : ಎಮ್ ಜಿಟಿಟಿ, ಆಶ್ರಯ ಕಾಲೊನಿ, ಜಿಡಿಎ, ಕಸ್ತೂರಿ ನಗರ, ಸ್ವಾರ್ಗೆಟ್ ನಗರ, ಸುವರ್ಣ ನಗರ ಜಿಡಿಎ, ವೈಷ್ಣವಿ ದೇವಿ ಮಂದಿರ ಸುತ್ತ ಪ್ರದೇಶ, ಚಿಂಚೋಳ್ಳಿ ಕ್ರಾಸ್ , ಬೀರಲಿಂಗೇಶ್ವರ ಮಂದಿರ ಏರಿಯಾ, ಶಿವಲಿಂಗೇಶ್ವರ ಮಂದಿರ ಸುತ್ತಲಿನ ಪ್ರದೇಶ, ಆಯುರ್ವೇದಿಕ ಆಸ್ಪತ್ರೆ, ಸರಕಾರಿ ಆಸ್ಪತ್ರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

