ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ

Contributed bykrishna.kolchar@timesgroup.com|Vijaya Karnataka

ತೊಕ್ಕೊಟ್ಟು ಬಳಿ ಒಂಬತ್ತು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸರು ಆಶೀಶ್ ಪೂಜಾರಿ ಎಂಬಾತನನ್ನು ಬಂಧಿಸಿದ್ದಾರೆ. ಹಣ ಮತ್ತು ತಿಂಡಿ ಆಮಿಷವೊಡ್ಡಿ ಬಾಲಕನನ್ನು ಕರೆದೊಯ್ದು ಆರೋಪಿ ಕೃತ್ಯ ಎಸಗಿದ್ದಾನೆ. ಅಶ್ಲೀಲ ವಿಡಿಯೋ ತೋರಿಸಿ ಅಸಭ್ಯ ಕೃತ್ಯಗಳಿಗೆ ಪ್ರೇರೇಪಿಸಿರುವುದು ಬೆಳಕಿಗೆ ಬಂದಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

sexual assault on minor konaje police arrest suspect

ವಿಕ ಸುದ್ದಿಲೋಕ ತೊಕ್ಕೊಟ್ಟು

ಒಂಬತ್ತು ವರ್ಷದ ಬಾಲಕನನ್ನು ಹಣ ಹಾಗೂ ತಿಂಡಿ ನೀಡುವ ನೆಪದಲ್ಲಿಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿಕೋಟೆಕಾರು ಮಡ್ಯಾರ್ ನ ಆಶೀಶ್ ಪೂಜಾರಿ (33) ಎಂಬಾತನನ್ನು ಕೊಣಾಜೆ ಪೊಲೀಸರು ಬಂಧಿಧಿಸಿದ್ದಾರೆ.

ಆರೋಪಿ ಲಾಜಿಸ್ಟಿಕ್ ಸಂಸ್ಥೆಯಲ್ಲಿಕೆಲಸ ಮಾಡುತ್ತಿದ್ದು ಬಾಲಕನಿಗೆ ಅಶ್ಲೀಲ ವಿಡಿಯೋ ತೋರಿಸಿ ಅಸಭ್ಯ ಕ್ರಿಯೆಗಳಿಗೆ ಪ್ರೇರೇಪಿಸಿರುವುದು ಬೆಳಕಿಗೆ ಬಂದಿದೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿಪೋಕ್ಸೊ ಕಾಯಿದೆಯ ಸೆಕ್ಷನ್ 4, 6, 12 ಹಾಗೂ ಬಿಎನ್ ಎಸ್ ಕಾಯಿದೆಯ ಸೆಕ್ಷನ್ 75 ಅಡಿಯಲ್ಲಿಪ್ರಕರಣ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಫೋಟೋ 18ಉಳ್ಳಾಲ… ಆಶೀಷ… ಪೂಜಾರಿ