ವಿಕ ಸುದ್ದಿಲೋಕ ಸಂಕೇಶ್ವರ
ಬೆಳಗಾವಿಯ ಹಿರಿಯ ವಕೀಲ ದಿನೇಶ ಪಾಟೀಲ ಅವರನ್ನು ರಾಜ್ಯ ಸರಕಾರ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ಇತ್ತೀಚೆಗೆ ನೇಮಕಗೊಳಿಸಿದ ನಿಮಿತ್ತ ಅವರು ನಿಡಸೋಸಿ ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದರು.
ಜಗದ್ಗುರು ಪಂಚಮ ಡಾ. ಶ್ರೀ ಶಿವಲಿಂಗೇಶ್ವರ ಸ್ವಾಮಿಗಳು ಮಾತನಾಡಿ, ‘‘ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಅವರ ಶೈಕ್ಷಣಿಕ ಸಾಧನೆ, ವೃತ್ತಿಪರ ಕೊಡುಗೆ, ಸಮಾಜ ಸೇವೆ, ನಾನಾ ಕ್ಷೇತ್ರಗಳಲ್ಲಿಅವರ ಕೊಡುಗೆ ಹಾಗೂ ಅವರ ಬಹುಮುಖ ವ್ಯಕ್ತಿತ್ವ ಪರಿಗಣಿಸಿ ಈ ನೇಮಕಾತಿ ಮಾಡಲಾಗಿದೆ. ಇದು ಈ ಭಾಗದ ವೀರಶೈವ ಲಿಂಗಾಯತ ಸಮುದಾಯದ ಕಾನೂನ ತಜ್ಞರೊಬ್ಬರಿಗೆ ಸರಕಾರ ನೀಡಿದ ಬಹುದೊಡ್ಡ ಜವಾಬ್ದಾರಿ,’’ ಎಂದು ಶ್ಲಾಘಿಸಿದರು.
ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಸ್ .ಸಿ.ಕಮತೆ ಹಾಗೂ ಶ್ರೀಮಠದ ಭಕ್ತಾದಿಗಳು ಉಪಸ್ಥಿತರಿದ್ದರು.
- 1ಎಸ್ ಎನ್ ಕೆ4
ನಿಡಸೋಸಿ ಜಗದ್ಗುರು ಪಂಚಮ ಡಾ. ಶಿವಲಿಂಗೇಶ್ವರ ಸ್ವಾಮಿಗಳು ದಿನೇಶ ಪಾಟೀಲ ಅವರನ್ನು ಸತ್ಕರಿಸಿದರು.

