*ಸಂಘಟನೆಯಲ್ಲಿತೊಡಗಿಸಿಕೊಳ್ಳಲು ಸಲಹೆ

Contributed bymaheshmadahalli.vk@gmail.com|Vijaya Karnataka

ಗುಂಡ್ಲುಪೇಟೆ ತಾಲೂಕಿನ ಚನ್ನಂಜಯ್ಯನಹುಂಡಿ ಗ್ರಾಮದಲ್ಲಿ ರೈತ ಸಂಘದ ನಾಮಫಲಕ ಅನಾವರಣಗೊಂಡಿತು. ರೈತ ಸಂಘದ ತಾಲೂಕು ಅಧ್ಯಕ್ಷ ಹಂಗಳ ದಿಲೀಪ್ ಅವರು ಯುವಕರು ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ಹೋರಾಡಲು ಸಂಘಟಿತರಾಗುವಂತೆ ತಿಳಿಸಿದರು. ರೈತ ಕುಲ ಉಳಿಯಲು ಇದು ಅತ್ಯಗತ್ಯ ಎಂದು ಹೇಳಿದರು.

farmer organization strategies for rural youth

ವಿಕ ಸುದ್ದಿಲೋಕ ಗುಂಡ್ಲುಪೇಟೆ

ಕೃಷಿ ಸೇರಿ ಸರಕಾರದ ವಿವಿಧ ಇಲಾಖೆಗಳ ಸೇವೆ ಪಡೆದುಕೊಳ್ಳಲು ಮತ್ತು ಬದಲಾದ ಸನ್ನಿವೇಶದಲ್ಲಿರೈತರು ಉಳಿಯಲು ಗ್ರಾಮೀಣ ಪ್ರದೇಶದ ಯುವಕರು, ಮುಖಂಡರು ಹೆಚ್ಚಿನ ರೀತಿಯಲ್ಲಿ ರೈತ ಸಂಘಟನೆ ಯಲ್ಲಿತೊಡಗಿಸಿಕೊಳ್ಳಬೇಕು ಎಂದು ರೈತ ಸಂಘಟನೆ ತಾಲೂಕು ಅಧ್ಯಕ್ಷ ಹಂಗಳ ದಿಲೀಪ್ ತಿಳಿಸಿದರು.

ತಾಲೂಕಿನ ಚನ್ನಂಜಯ್ಯನಹುಂಡಿ ಗ್ರಾಮದಲ್ಲಿರೈತ ಸಂಘದ ಗ್ರಾಮ ಘಟಕದ ನಾಮಫಲಕ ಅನಾವರಣಗೊಳಿಸಿ,‘‘ರೈತರಿಗೆ ಕಾರ್ಯಕರ್ತರಿಗೆ ಹಸಿರು ಶಾಲಿನ ದೀಕ್ಷೆ ನೀಡಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರಕಾರ ರೈತರು ಬೆಳೆದ ಬಹುತೇಕ ಬೆಳೆಗಳಿಗೆ ಬೆಂಬಲ ಬೆಲೆ ನೀಡದೆ ಮೋಸ ಮಾಡುತ್ತಿವೆæ. ವಿವಿಧ ರೈತ ವಿರೋಧಿ ಕಾಯಿದೆಗಳನ್ನು ಜಾರಿಗೊಳಿಸುವ ಹುನ್ನಾರ ನಡೆಸುತ್ತಿವೆ. ಇಂತಹ ಕೆಟ್ಟ ಬೆಳವಣಿಗೆಗಳ ವಿರುದ್ಧ ಹೋರಾಟ ಮಾಡಿ ರೈತ ಕುಲ ಉಳಿಯುವಂತೆ ಮಾಡಲು ಎಲ್ಲರೂ ಸಂಘಟಿತರಾಗಬೇಕು,’’ ಎಂದು ಸಲಹೆ ನೀಡಿದರು.

ಸಂಘಟನಾ ಕಾರ್ಯದರ್ಶಿ ಶಿವಕುಮಾರ್ , ಜಿಲ್ಲಾಸಂಘಟನಾ ಕಾರ್ಯದರ್ಶಿ ಕುಮಾರಸ್ವಾಮಿ, ಕಾರ್ಯಧ್ಯಕ್ಷ ಮಹದೇವಪ್ಪಪುತ್ತನಪುರ, ಉಪಾಧ್ಯಕ್ಷ ಮಾಧು, ಕೊಳ್ಳೇಗಾಲ ತಾಲೂಕು ಉಪಾಧ್ಯಕ್ಷ ಗೌಡೇಗೌಡ, ಜಿಲ್ಲಾಸಂಘಟನಾ ಕಾರ್ಯದರ್ಶಿ ಮಹದೇವಪ್ರಸಾದ್ , ಕಾರ್ಯದರ್ಶಿ ಬೊಮ್ಮನಹಳ್ಳಿಲೋಕೇಶ, ಜಿಲ್ಲಾ ಕಾಯಂ ಆಹ್ವಾನಿತ ಶಿವಮಲ್ಲುಹೊನ್ನೇಗೌಡನಹಳ್ಳಿ, ನಿಟ್ರೆ ಮಹದೇವಶೆಟ್ಟಿ, ಸ್ವಾಮಿ, ಲೋಕೇಶ್ , ಬಸವೇಶ್ , ಉಮೇಶ್ , ರಾಜೇಶ್ ಮಹೇಶ್ , ಪುತ್ತನಪುರ ಶಿವಕುಮಾರ್ , ಹಂಗಳಲೋಕೇಶ್ , ಕಬ್ಬಹಳ್ಳಿಮೂರ್ತಿ, ಚಾಮರಾಜನಗರ ಸಂತೋಷ್ ಹಾಗೂ ಚನ್ನಂಜಯ್ಯನಹುಂಡಿ ರೈತ ಮುಖಂಡರು ಮತ್ತು ಗ್ರಾಮಸ್ಥರು ಹಾಜರಿದ್ದರು.

ಸಿಎಚ್ ಎನ್ 2ಜಿಪಿಟಿ4

ಗುಂಡ್ಲುಪೇಟೆ ತಾಲೂಕಿನ ಚನ್ನಂಜಯ್ಯನಹುಂಡಿ ಗ್ರಾಮದಲ್ಲಿಕರ್ನಾಟಕ ರಾಜ್ಯ ರೈತ ಸಂಘ ಗ್ರಾಮ ಘಟಕದ ನಾಮಫಲಕವನ್ನು ಸಂಘಟನೆ ತಾಲೂಕು ಅಧ್ಯಕ್ಷ ಹಂಗಳ ದಿಲೀಪ್ ಅನಾವರಣಗೊಳಿಸಿದರು.