ವಿಕ ಸುದ್ದಿಲೋಕ ಕಲಬುರಗಿ ಇಲ್ಲಿನ ನ್ಯೂ ರಾಘವೇಂದ್ರ ಕಾಲೊನಿಯಲ್ಲಿವೆಂಕಟೇಶ್ವರ(ಬಾಲಾಜಿ) ದೇವಸ್ಥಾನ ಟ್ರಸ್ಟ್ ವತಿಯಿಂದ ಬುಧವಾರ ವೆಂಕಟೇಶ್ವರ ದೇವಸ್ಥಾನದ 38ನೇ ವರ್ಧಂತಿ ಉತ್ಸವ ಅದ್ಧೂರಿಯಾಗಿ ನಡೆಯಿತು. ಬೆಳಗ್ಗೆ ಸುಪ್ರಭಾತ, ವೆಂಕಟೇಶ್ವರ ಸ್ತೋತ್ರ, ಅಷ್ಟೋತ್ತರ ಪಾರಾಯಣ, 108 ಕಲಶಗಳಿಂದ ಕುಂಭಾಭಿಷೇಕ, ಪವಮಾನ ಹೋಮ, ವಿಷ್ಣು ಸಹಸ್ರನಾಮ ಹೋಮ, ಸತ್ಯನಾರಾಯಣ ಪೂಜೆ, ಲಕ್ಷ್ಮೇ ವೆಂಕಟೇಶ್ವರ ರಥೋತ್ಸವ, ಪಂಡಿತರಿಂದ ಪ್ರವಚನ ಮಂಗಳ, ತೀರ್ಥ ಪ್ರಸಾದ, ಮಹಾಮಂಗಳಾರತಿ ನಡೆಯಿತು. ಅರ್ಚಕ ಶ್ರೀನಿವಾಸಾಚಾರ್ಯ, ಜಯತೀರ್ಥ ಟೆಂಗಳಿ, ಬಾಬಣ್ಣ ಮೈನಾಳ, ವಿದ್ಯಾಸಾಗರ ಡಿ.ಕೆ., ಶ್ರೀನಿವಾಸರಾವ, ಮೋಹನ್ ರಾವ್ , ಪ್ರಲ್ಹಾದ ಭಟ್ , ನಾರಾಯಣರಾವ, ನಾಗೇಶ, ವಿಜಯಾಬಾಯಿ ಹಾಗೂ ಭಕ್ತರು ಇದ್ದರು.

