ವಿಕಸುದ್ದಿಲೋಕ ಹುಕ್ಕೇರಿ: ಸುಂದರವಾದ ಬದುಕು ಕಟಿ

Contributed bypressbasu78@gmail.com|Vijaya Karnataka

ಹಿಡಕಲ್‌ಡ್ಯಾಮಿನ ಶ್ರೀ ಬಸವೇಶ್ವರ ಪದವಿಪೂರ್ವ ಕಾಲೇಜಿನಲ್ಲಿ2025-26ನೇ ಸಾಲಿನ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು. ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ಮಾತನಾಡಿ, ಪಿಯುಸಿ ಹಂತವು ವಿದ್ಯಾರ್ಥಿಗಳ ಬದುಕಿನಲ್ಲಿ ಮಹತ್ತರವಾದ ಘಟ್ಟ ಎಂದರು. ಗುರುಗಳನ್ನು ಗೌರವಿಸುವಂತೆ ಹಾಗೂ ಸಕಾರಾತ್ಮಕ ವಿಚಾರಗಳನ್ನು ಸ್ವೀಕರಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಲಾಯಿತು.

guidance for students stepping into the crucial pu phase

ವಿಕ ಸುದ್ದಿಲೋಕ ಹುಕ್ಕೇರಿ

ಸುಂದರವಾದ ಬದುಕು ಕಟ್ಟಿಕೊಳ್ಳಲು ಜೀವನದಲ್ಲಿಒಳ್ಳೆಯ ನಿರ್ಧಾರ ತೆಗೆದುಕೊಳ್ಳುವುದು ಬಹಳ ಮುಖ್ಯ. ಅದರಲ್ಲೂಪಿಯುಸಿ ಹಂತವು ವಿದ್ಯಾರ್ಥಿಗಳ ಜೀವನದ ಅತ್ಯಂತ ಮಹತ್ತರವಾದ ಘಟ್ಟವಾಗಿದೆ ಎಂದು ಘೋಡಗೇರಿಯ ಶ್ರೀ ಶಿವಾನಂದ ಮಠದ ಪೂಜ್ಯ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ಅಭಿಮತ ವ್ಯಕ್ತಪಡಿಸಿದರು.

ತಾಲೂಕಿನ ಹಿಡಕಲ್ಡಾ್ಯಂನ ಶ್ರೀ ಬಸವೇಶ್ವರ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿಆಯೋಜಿಸಲಾಗಿದ್ದ 2025-26ನೇ ಸಾಲಿನ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಗುರುಗಳನ್ನು ಗೌರವಿಸಿ: ವಿದ್ಯಾರ್ಥಿಗಳು ಜೀವನದಲ್ಲಿನಕಾರಾತ್ಮಕ ವಿಚಾರಗಳನ್ನು ನಿರ್ಲಕ್ಷಿಸಿ, ಸಕಾರಾತ್ಮಕ ವಿಚಾರಗಳನ್ನು ಮಾತ್ರ ಸ್ವೀಕರಿಸಬೇಕು. ಹೃದಯ ವೈಶಾಲ್ಯತೆ ಮತ್ತು ಸದ್ಗುಣಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ, ತಮಗೆ ವಿದ್ಯೆ ನೀಡಿದ ಗುರುಗಳನ್ನು ಸದಾ ಗೌರವಿಸಬೇಕು ಎಂದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಶಿಕ್ಷಣ ಪ್ರೇಮಿ ಗುರಪ್ಪ ತಳವಾರ ಅವರು ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕಾಗಿ ಅನೇಕ ಏಳು-ಬೀಳುಗಳ ನಡುವೆಯೂ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ರೀತಿ ಅನನ್ಯವಾದುದು ಎಂದು ಶ್ಲಾಘಿಸಿದರು.

ಪ್ರತಿಭೆಗಳಿಗೆ ಪುರಸ್ಕಾರ: ಸಮಾರಂಭದ ಅಧ್ಯಕ್ಷತೆಯನ್ನು ಸುಲ್ತಾನಪೂರ ಎಸ….ಬಿ.ಇ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗುರಪ್ಪ ತಳವಾರ ವಹಿಸಿದ್ದರು. ಆರ್ .ಪಿ. ನಾಯಕ ಅವರು ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಾದ ಸುಪ್ರಿಯಾ ಹರಿಜನ ಹಾಗೂ ತೇಜಸ್ವಿನಿ ವಡ್ಡರ ಅವರು ಕಾಲೇಜಿನ ದಿನಗಳ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿವಿವಿಧ ಕ್ಷೇತ್ರಗಳಲ್ಲಿಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಾರಿತೋಷಕಗಳನ್ನು ವಿತರಿಸಿ ಗೌರವಿಸಲಾಯಿತು.

ಗಣ್ಯರ ಉಪಸ್ಥಿತಿ: ಕಾರ್ಯಕ್ರಮದಲ್ಲಿಸಂಸ್ಥೆಯ ಉಪಾಧ್ಯಕ್ಷ ಸುನೀಲ ತಳವಾರ, ಸಾಹಿತಿ ಮಹೇಶ ದೇಶಪಾಂಡೆ, ಪ್ರಾಚಾರ್ಯ ಆರ್ .ಎಸ…. ನಾಶಿಪುಡಿ, ನಿವೃತ್ತ ಪ್ರಾಚಾರ್ಯ ಎಂ.ಎಲ…. ಮಗದುಮ್ಮ, ನಿವೃತ್ತ ಉಪನ್ಯಾಸಕ ಎ.ಎಲ…. ದಳವಾಯಿ ಉಪಸ್ಥಿತರಿದ್ದರು.

ಹಾಗೆಯೇ ಉಪನ್ಯಾಸಕರುಗಳಾದ ಎಸ….ಸಿ. ಪಾಟೀಲ, ಆರ್ .ಜಿ. ಹವಾಲ್ದಾರ, ಎ.ಬಿ. ಗುರಕನವರ, ಆರ್ .ಆರ್ . ಹಿರೇಮನಿ, ಎಸ….ಎ. ಮಲನಾಯಕ, ವ್ಹಿ.ಎಸ…. ತಳವಾರ ಮತ್ತು ಸಿಬ್ಬಂದಿಗಳಾದ ಎಂ.ಡಿ. ಮಗದುಮ್ಮ, ಎಂ.ಆರ್ . ಬಾಗೇವಾಡಿ, ಬಿ.ಜಿ. ಕಾಂಬಳೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಫೋಟೋ ಶೀರ್ಷಿಕೆ: (ಫೋಟೋ ಶೀರ್ಷಿಕೆ 4 ಹುಕ್ಕೇರಿ 03): ಹುಕ್ಕೇರಿ ತಾಲೂಕಿನ ಹಿಡಕಲ್ಡಾ್ಯಮಿನ ಶ್ರೀ ಬಸವೇಶ್ವರ ಪದವಿಪೂರ್ವ ಕಾಲೇಜಿನಲ್ಲಿಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಪೂಜ್ಯ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ಉದ್ಘಾಟಿಸಿದರು.

ವಿಕಸುದ್ದಿಲೋಕ ಹುಕ್ಕೇರಿ: ಸುಂದರವಾದ ಬದುಕು ಕಟ್ಟಿಕೊಳ್ಳಲು ಜೀವನದಲ್ಲಿಒಳ್ಳೆಯ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಪಿಯುಸಿ ವಿದ್ಯಾರ್ಥಿಗಳ ಬದುಕಿನಲ್ಲಿಮಹತ್ತರವಾದಘಟ್ಟವಾಗಿದೆಎಂದುಘೋಡಗೇರಿಯ ಶ್ರೀ ಶಿವಾನಂದ ಮಠದ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ಹೇಳಿದರು.

ಅವರು ತಾಲೂಕಿನ ಹಿಡಕಲ್ ಡ್ಯಾಮಿನಲ್ಲಿಶ್ರೀ ಬಸವೇಶ್ವರ ಸ್ವತಂತ್ರ ಪದವಿಪೂರ್ವಕಾಲೇಜುನಲ್ಲಿನಡೆದ 2025-26ನೇ ಸಾಲಿನ ಪಿಯುಸಿ ದ್ವೀತಿಯ ವರ್ಷ ವಿದ್ಯಾರ್ಥಿಗಳ ಬಿಳ್ಕೊಡುವ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದ ಸಾನಿದ್ಯ ವಹಿಸಿ ಮಾತನಾಡಿದರು.

ನಕಾರಾತ್ಮಕ ವಿಚಾರಗಳನ್ನು ನಿಲ್ರ್ಯಕ್ಷಿಸಿ ಸಕಾರಾತ್ಮಕ ವಿಚಾರಗಳು ಸ್ವೀಕರಿಸಿ ಜೀವನ ಸಾಗಿಸಬೇಕು. ಹೃದಯ ವೈಶಾಲತೆ ಸದ್ಗುಣಗಳನ್ನು ಬೆಳಸಿಕೊಂಡು ವಿಧ್ಯೆದಾರೆಎರೆದ ಗುರುಗಳನ್ನು ಗೌರವಿಸಬೇಕೇಂದು ಹೇಳಿದರು.

ಶಿಕ್ಷಣ ಪ್ರೇಮಿಗಳಾದ ಗುರಪ್ಪ ತಳವಾರ ಅವರುಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಒಳ್ಲೆಯ ಶಿಕ್ಷಣ ಸಿಗಬೇಕೆಂಬ ನಿಟ್ಟಿನಲ್ಲಿಈ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿ ಅನೇಕ ಏಳು ಬೀಳುಗಳ ನಡುವೆಛಲದಿಂದ ಈ ಶಿಕ್ಷಣ ಸಂಸ್ಥೆಯನ್ನು ಬೆಳಸಿ ಉಳಿಸಿಕೊಂಡು ಬಂದಿದ್ದಾರೆ. ಅವರ ಶೈಕ್ಷಣಿಕ ಸೇವೆಯುಅನನ್ಯವಾದದುಎಂದು ಮಲ್ಲಯ್ಯ ಸ್ವಾಮಿಗಳು ಹೇಳಿದರು.

ಸಮಾರಂಭದಅಧ್ಯಕ್ಷತೆಯನ್ನು ಸುಲ್ತಾನಪೂರಎಸ್ .ಬಿ.ಇ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷಗುರಪ್ಪ ತಳವಾರ ವಹಿಸಿದರು. ಆರ್ ,ಪಿ ನಾಯಕ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಾದ ಸುಪ್ರೀಯಾ ಹರಿಜನ, ತೇಜಸ್ವೀನಿ ವಡ್ಡರತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಾರಿತೋಷಕಗಳನ್ನು ವಿತರಿಸಲಾಯಿತು.

ಸಂಸ್ಥೆಯಉಪಾಧ್ಯಕ್ಷರಾದ ಸುನೀಲ ತಳವಾರ, ಸಾಹಿತಿಗಳಾದ ಮಹೇಶ ದೇಶಪಾಂಡೆ ಪ್ರಾಚಾರ್ಯಆರ್ .ಎಸ. ನಾಶಿಪುಡಿ,ನಿವೃತ್ತ ಪ್ರಾಚಾರ್ಯಎಂ.ಎಲ್ . ಮಗದುಮ್ಮ, ನಿವೃತ್ತಉಪನ್ಯಾಸಕಎ.ಎಲ್ . ದಳವಾಯಿ, ಉಪನ್ಯಾಸಕರಾದ ಎಸ್ .ಸಿ. ಪಾಟೀಲ, ಆರ್ .ಜಿ. ಹವಾಲ್ದಾರ, ಎ.ಬಿ. ಗುರಕನವರ, ಆರ್ .ಆರ್ . ಹಿರೇಮನಿ, ಎಸ್ .ಎ. ಮಲನಾಯಕ, ವ್ಹಿ.ಎಸ್ . ತಳವಾರ, ಸಿಬ್ಬಂದಿಗಳಾದ ಎಂ.ಡಿ.ಮಗದುಮ್ಮ, ಎಂ.ಆರ್ . ಬಾಗೇವಾಡಿ, ಬಿ.ಜಿ. ಕಾಂಬಳೆ, ಉಪಸ್ಥಿತರಿದ್ದರು.

ಪೊಟೊ ಶಿರ್ಷಿಕೆ 4 ಹುಕ್ಕೇರಿ 03

ಹುಕ್ಕೇರಿ ತಾಲೂಕಿನ : ಹಿಡಕಲ್ ಡ್ಯಾಮಿನ ಬಸವೇಶ್ವರ ಪಿಯುಕಾಲೇಜಿನಲ್ಲಿವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭ ಪೂಜ್ಯ ಶ್ರೀ ಮಲಯ್ಯ ಮಹಾಸ್ವಾಮಿಗÙ ಉದ್ಘಾಟಿಸಿದರು.