ಬ್ರಹ್ಮಾನಂದ ಎ.ನಿಡಗುಂದಾ, ಕಲಬುರಗಿ ಚಿh್ಟahಞa್ಞa್ಞd.a್ಟa್ಝಜಿಃಠಿಜಿಞಛಿsಟ್ಛಜ್ಞಿdಜಿa.್ಚಟಞ ಅಬಕಾರಿ ಇಲಾಖೆ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ, ಗ್ರಾಮೀಣ ಭಾಗದ ಬಹುತೇಕ ಎಲ್ಲಗ್ರಾಮಗಳಲ್ಲಿಯೂ ಅಕ್ರಮ ಮದ್ಯ ಮಾರಾಟ ಜೋರಾಗಿದೆ ಎಂಬ ಆರೋಪಗಳು ಬಲಗೊಂಡಿವೆ. ಕಳೆದ ನಾಲ್ಕು ವರ್ಷಗಳಲ್ಲಿ7,000ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿರುವುದೇ ಈ ಸಮಸ್ಯೆಯ ಗಂಭೀರತೆ ತೋರಿಸುತ್ತದೆ. ರಾಜ್ಯ ಸರಕಾರಕ್ಕೆ ಪ್ರಮುಖ ಆದಾಯ ಮೂಲವಾಗಿರುವ ಅಬಕಾರಿ ಇಲಾಖೆ, ಅಕ್ರಮ ಮದ್ಯ ಮಾರಾಟದಿಂದಾಗಿ ಇತ್ತ ಸರಕಾರಕ್ಕೆ ಆದಾಯ ನಷ್ಟವಾಗುತ್ತಿದ್ದು, ಅತ್ತ ಸಾರ್ವಜನಿಕರ ಆರೋಗ್ಯ ಹಾಗೂ ಸಾಮಾಜಿಕ ಜೀವನದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಈ ಅಕ್ರಮಕ್ಕೆ ಕಡಿವಾಣ ಹಾಕಲು ಇಲಾಖೆ ಪ್ರಯತ್ನಿಸುತ್ತಿದ್ದರೂ ಸಮಸ್ಯೆ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತಿಲ್ಲ. ಗೂಡಂಗಡಿಗಳಲ್ಲೇ ಸಿಗುತ್ತಿದೆ ಮದ್ಯ: ಗ್ರಾಮೀಣ ಭಾಗದ ಮುಖ್ಯ ಪಟ್ಟಣಗಳಿಂದ ದೂರವಿರುವ ಗ್ರಾಮಗಳನ್ನು ಟಾರ್ಗೆಟ್ ಮಾಡಿ ಅಕ್ರಮ ಮದ್ಯ ಮಾರಾಟ ನಡೆಸಲಾಗುತ್ತಿದೆ. ಗೂಡಂಗಡಿಗಳು, ಮಾಂಸಾಹಾರಿ ಹೋಟೆಲ್ ಗಳು, ಕಿರಾಣಿ ಅಂಗಡಿಗಳಲ್ಲೂಮದ್ಯ ಮಾರಾಟ ನಡೆಯುತ್ತಿರುವುದು ಕಂಡುಬರುತ್ತಿದೆ. ಬೈಕ್ ಗಳ ಮೇಲೆ ಗ್ರಾಮಗಳಿಗೆ ಮದ್ಯ: ಹತ್ತಾರು ಗ್ರಾಮಗಳ ಸಮೂಹವಿರುವ ದೊಡ್ಡ ಹಳ್ಳಿಗಳಲ್ಲಿಲೈಸೆನ್ಸ್ ಹೊಂದಿರುವ ಬಾರ್ ಗಳಿದ್ದರೂ, ಬಸ್ ಸಂಪರ್ಕವೇ ಇಲ್ಲದ ಗ್ರಾಮಗಳಿಗೂ ಮದ್ಯ ಮಾತ್ರ ಸರಾಗವಾಗಿ ತಲುಪುತ್ತಿದೆ. ಇದಕ್ಕಾಗಿ ಅಕ್ರಮ ಮಾರಾಟಗಾರರು ಸಪ್ಲೈ ಚೈನ್ ರೂಪಿಸಿಕೊಂಡಿದ್ದಾರೆ. ಗ್ರಾಮಗಳಿಗೆ ನೇರವಾಗಿ ಅಧಿಕೃತ ಮದ್ಯ ಪೂರೈಕೆ ಇಲ್ಲದ ಕಾರಣ, ಮೂರು-ನಾಲ್ಕು ಬಾಕ್ಸ್ ಮದ್ಯವನ್ನು ಬೈಕ್ ಗಳ ಮೂಲಕ ಸಾಗಿಸಲಾಗುತ್ತಿದೆ. ಯಾವುದೇ ಅಡೆತಡೆ ಇಲ್ಲದೆ ಕಡಿಮೆ ವೆಚ್ಚದಲ್ಲಿಮದ್ಯ ಸರಬರಾಜಾಗುತ್ತಿದ್ದು, ಗ್ರಾಮಗಳಲ್ಲಿಪ್ರತಿ ಬಾಟಲಿಗೆ ಗ್ರಾಹಕರಿಂದ 20-30 ಹೆಚ್ಚುವರಿ ದರ ವಸೂಲಿ ಮಾಡಲಾಗುತ್ತಿದೆ.

