ವಿಕ ಸುದ್ದಿಲೋಕ ಉಡುಪಿ
ಉಡುಪಿ ಬನ್ನಂಜೆಯಲ್ಲಿನಿಟ್ಟೂರಿಗೆ ಹೋಗುವ ಒಳರಸ್ತೆ ಸಂಪರ್ಕ ಜಾಗದಲ್ಲಿರಾಷ್ಟ್ರೀಯ ಹೆದ್ದಾರಿಯ ವಿಭಾಜಕವನ್ನು ತೆರೆದಿಡಲಾಗಿದ್ದು, ಇದು ಅಪಘಾತಕ್ಕೆ ಕಾರಣವಾಗುತ್ತಿದೆ. ಇದನ್ನು ಕೂಡಲೇ ಮುಚ್ಚುವಂತೆ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಘಟಕ ಆಗ್ರಹಿಸಿದೆ.
ವೇದಿಕೆಯ ಗೌರವಾಧ್ಯಕ್ಷ ಅನ್ಸಾರ್ ಅಹ್ಮದ್ ಬುಧವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ಬುಧವಾರ ರಸ್ತೆ ವಿಭಾಜಕದ ಮೇಲೆ ಶಾಂತಿಯುತವಾಗಿ 10 ನಿಮಿಷಗಳ ಕಾಲ ಪ್ರತಿಭಟನೆ ನಡೆಸಲು ಸಂಘಟನೆ ನಿರ್ಧರಿಸಿತ್ತು. ಆದರೆ ಪೊಲೀಸ್ ಇಲಾಖೆ ಈ ಜಾಗದಲ್ಲಿಪ್ರತಿಭಟನೆ ನಡೆಸುವುದಕ್ಕೆ ಅನುಮತಿ ನೀಡಿಲ್ಲ.
ಈ ವಿಭಾಜಕವನ್ನು ಬಂದ್ ಮಾಡಿ ಎಲ್ಲವಾಹನಗಳು ಬನ್ನಂಜೆಯ ಶ್ರೀ ನಾರಾಯಣ ಗುರು ವೃತ್ತದಲ್ಲಿಯೇ ತಿರುಗಿ ಬರುವಂತೆ ಮಾಡಬೇಕು ಎಂದು ಸಂಘಟನೆ ಆಗ್ರಹಿಸುತ್ತದೆ. ಇಲ್ಲವಾದಲ್ಲಿಕಾನೂನು ಹೋರಾಟ ನಡೆಸಲು ಸಂಘಟನೆ ಮುಂದಾಗಲಿದೆ ಎಂದು ತಿಳಿಸಿದರು.
ಮಣಿಪಾಲ ಸಿಂಡಿಕೇಟ್ ಸರ್ಕಲ್ ಸಿಗ್ನಲ್ ಬೇಡ
ಮಣಿಪಾಲದ ಸಿಂಡಿಕೇಟ್ ಸರ್ಕಲ್ ನಲ್ಲಿಅಳವಡಿಸಿರುವ ಟ್ರಾಫಿಕ್ ಸಿಗ್ನಲ್ ಅವೈಜ್ಞಾನಿಕವಾಗಿದ್ದು. ಇಳಿಜಾರು ಪ್ರದೇಶ ಇರುವಲ್ಲಿಸಿಗ್ನಲ್ ನಿರ್ಮಿಸಲಾಗಿದೆ. ಇದರಿಂದಾಗಿ ಭಾರಿ ವಾಹನಗಳು ಏರು ಹತ್ತಲಾಗದೆ ಹಿಮ್ಮುಖವಾಗಿ ಚಲಿಸಿ ಅಪಘಾತಗಳಾಗುತ್ತಿವೆ. ಆದ್ದರಿಂದ ಈ ಸಿಗ್ನಲ್ ನ್ನು ಕೂಡಲೇ ತೆರವುಗೊಳಿಸಿ ಅದನ್ನು ಟೈಗರ್ ಸರ್ಕಲ್ ಬಳಿ ಅಳವಡಿಸಲಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿಸಂಘಟನೆಯ ಜಿಲ್ಲಾಧ್ಯಕ್ಷ ಸುಜಯ ಪೂಜಾರಿ, ಪದಾಧಿಕಾರಿಗಳಾದ ಜ್ಯೋತಿ ಸೇರಿಗಾರ್ , ಸಯ್ಯದ್ ನಿಜಾಮುದ್ದೀನ್ , ಸುಧೀರ್ ಪೂಜಾರಿ, ಸವಿತಾ, ಸಂತೋಷ್ ಕುಲಾಲ್ , ಆಶಾ ಸೇರಿಗಾರ್ ಉಪಸ್ಥಿತರಿದ್ದರು.

