* ಮುಂಡರಗಿ-ಚಿಕ್ಕಹೆಸರೂರು ರಾಜ್ಯ ಹೆದ್ದಾರಿಯಲ್ಲಿಅಪಾಯ
ಹೆದ್ದಾರಿಯಲ್ಲಿಬೋಂಗಾ, ಸಂಚಾರಕ್ಕೆ ಆಪತ್ತು
ವಿಕ ಸುದ್ದಿಲೋಕ ಮುದೇನೂರು
ಗ್ರಾಮದ ಮಾರ್ಗವಾಗಿ ಹಾದು ಹೋಗಿರುವ ಮುಂಡರಗಿ-ಚಿಕ್ಕಹೆಸರೂರು ರಾಜ್ಯ ಹೆದ್ದಾರಿ ಮಧ್ಯೆ ಬೋಂಗಾ ಬಿದ್ದಿದ್ದು, ಪ್ರಯಾಣಿಕರ ಪ್ರಾಣಕ್ಕೆ ಸಂಚಕಾರ ತಂದಿದೆ.
ಈ ರಸ್ತೆಯು ಕುಷ್ಟಗಿ ರಾಷ್ಟ್ರೀಯ ಹೆದ್ದಾರಿ 50ರಿಂದ ಟೆಂಗುಂಟಿ, ತೆಗ್ಗಿಹಾಳದಿಂದ ಮುದೇನೂರು ಮಾರ್ಗವಾಗಿ ರಾಯಚೂರು ಜಿಲ್ಲೆಯ ಚಿಕ್ಕಹೆಸರೂರು ಸಂಪರ್ಕಿಸಲಿದೆ. ಹೆಸರಿಗೆ ಇದು ರಾಜ್ಯ ಹೆದ್ದಾರಿ ಎನ್ನುವಂತಾಗಿದೆ. ಸದ್ಯ ಕುಷ್ಟಗಿಯಿಂದ ಟೆಂಗುಂಟಿವರೆಗೆ ರಸ್ತೆ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಟೆಂಗುಂಟಿಯಿಂದ ಮುದೇನೂರು ಅಂದಾಜು 12 ಕಿ.ಮೀ.ರಸ್ತೆ ಅಭಿವೃದ್ಧಿ ಬಾಕಿ ಇದೆ. ಉಳಿದ ರಸ್ತೆಯಲ್ಲಿಅಡ್ಡಲಾಗಿ ಹಾಕಲಾಗಿದ್ದ ಪೈಪ್ ಗಳು ಹೊಡೆದು ಬೋಂಗಾ ಬಿದ್ದಿದೆ. ಅಲ್ಲದೇ ಪಕ್ಕದ ಹಳ್ಳದ ನೀರು ರಸ್ತೆಯ ಒಂದು ಭಾಗಕ್ಕೆ ನುಗ್ಗಿ ಬರುವುದರಿಂದ ಪ್ರತಿ ವರ್ಷ ರಸ್ತೆ ಕೊಚ್ಚಿಕೊಂಡು ಹೋಗುತ್ತಿದೆ. ಶಾಸ್ವತ ಪರಿಹಾರ ಕಲ್ಪಿಸಬೇಕಾದ ಲೋಕೋಪಯೋಗಿ ಇಲಾಖೆ ಕಲ್ಲು, ಮಣ್ಣು ಹಾಕಿ ಕೈ ತೊಳೆದುಕೊಳ್ಳುತ್ತಿದೆ.
ಈ ಮಾರ್ಗದಲ್ಲಿಸರಕು ತುಂಬಿಕೊಂಡ ನೂರಾರು ವಾಹನಗಳು, ಬಸ್ ಹಾಗೂ ಲಘು ವಾಹನಗಳು ನಿತ್ಯ ಸಂಚರಿಸುತ್ತವೆ. ಕಳೆದ ಮಳೆಗಾಲದಲ್ಲಿಸುರಿದ ಬಾರಿ ಮಳೆಗೆ ರಸ್ತೆಯ ಒಂದು ಭಾಗ ಸಂಪೂರ್ಣ ಕೊಚ್ಚಿ ಹೋಗಿದೆ. 5ಕ್ಕೂ ಹೆಚ್ಚು ಕಿರು ಸೇತುವೆಗಳು ಕಾಂಕ್ರೀಟ್ ಕಿತ್ತು ಬಂದು, ತೀವ್ರ ಹದಗೆಟ್ಟಿದೆ. ರಸ್ತೆ ತುಂಬಾ ಗುಂಡಿಗಳದ್ದೇ ಕಾರುಬಾರು ಎನ್ನುವಂತಾಗಿದೆ.
ಬೋಂಗಾ ಮತ್ತು ಗುಂಡಿ ಗಮನಿಸದೆ ವೇಗವಾಗಿ ಬರುವ ದ್ವಿಚಕ್ರ ವಾಹನ ಸವಾರರು ಕೆಳಗೆ ಬಿದ್ದು ಗಾಯಗೊಂಡಿರುವ ನಿದರ್ಶನಗಳಿವೆ. ಗೋಂಗಾ ಬಿದ್ದಿರುವ ಸ್ಥಳದಲ್ಲಿಎದುರು ಬದರು ಬರುವ ಬಸ್ ಹಾಗೂ ಇತರೆ ವಾಹನಗಳ ಗಾಲಿ ಬೋಂಗಾದಲ್ಲಿಸಿಲುಕಿ ತೊಂದರೆ ಎದುರಿಸುತ್ತಿದ್ದಾರೆ.
ಟೆಂಗುಂಟಿ ಸಮೀಪದಲ್ಲಿದೊಡ್ಡ ಬೋಂಗಾ ಬಿದ್ದಿದ್ದು, ಇದುವರೆಗೆ ದುರಸ್ತಿ ಮಾಡಿಸಿಲ್ಲ. ವಾಹನ ಸವಾರರು ನಿತ್ಯ ಭಯದಲ್ಲೇ ಸಂಚಾರ ಮಾಡುತ್ತಿದ್ದು , ಸ್ವಲ್ಪ ಯಾಮಾರಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ಮಳೆಯಿಂದ ಕೊಚ್ಚಿ ಹೋಗಿರುವ ರಸ್ತೆ ಹಾಗೂ ಬಿದ್ದಿರುವ ಬೋಂಗಾ, ಗುಂಡಿಗಳನ್ನು ಮುಚ್ಚಿ ರಸ್ತೆ ದುರಸ್ತಿಪಡಿಸಿ ಸುಗಮ ಸಂಚಾರಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕೋಟ್
9 ಕೋಟಿ ರೂ.ವೆಚ್ಚದಲ್ಲಿರಾಷ್ಟ್ರೀಯ ಹೆದ್ದಾರಿಯಿಂದ 4.7 ಕಿ.ಮೀ. ಅಭಿವೃದ್ಧಿ ಪಡಿಸಲಾಗುತ್ತಿದೆ. ರಸ್ತೆ ಬದಿ ಕೊಚ್ಚಿ ಹೋಗಿರುವುದು ಮತ್ತು ಬೋಂಗಾ ಬಿದ್ದಿರುವುದು ಗಮನಕ್ಕಿಲ್ಲ. ಕೂಡಲೇ ಅದನ್ನು ಸರಿಪಡಿಸಲಾಗುವುದು.
- ಸುಧಾಕರ ಕಾತರಕಿ ಎಇಇ, ಪಿಡಬ್ಲ್ಯುಡಿ ಇಲಾಖೆ, ಕುಷ್ಟಗಿ.
ಪೋಟೊ ಶೀರ್ಷಿಕೆ
ಕೆಪಿಎಲ್ 4ಎಮಡಿಆರ್ 2-
ಮುದೇನೂರು ಮಾರ್ಗವಾಗಿ ಹಾದು ಹೋಗಿರುವ ಮುಂಡರಗಿ-ಚಿಕ್ಕಹೆಸರೂರು ರಾಜ್ಯ ಹೆದ್ದಾರಿ ಮಧ್ಯದಲ್ಲಿಬೋಂಗಾ ಬಿದ್ದಿರುವುದು.
3-ಟೆಂಗುಂಟಿ ಸಮೀಪದ ಹಳ್ಳದ ನೀರು ನುಗ್ಗಿದ್ದರಿಂದ ರಸ್ತೆಯ ಒಂದು ಭಾಗ ಕೊಚ್ಚಿ ಹೋಗಿರುವುದು.

