ಪ್ರಮಾಣಿಕತೆ ಮೆರೆದ ತಾಪಂ ಸಿಬ್ಬಂದಿ

Contributed bymandalamari84@gmail.com|Vijaya Karnataka

ಕುಷ್ಟಗಿ ಪಟ್ಟಣದ ತಾಪಂ ಸಿಬ್ಬಂದಿ ರವಿಕುಮಾರ ಜಂಬಲದಿನ್ನಿ ಮತ್ತು ಸಿದ್ದಪ್ಪ ತರಲಕಟ್ಟಿ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ. ಅವರು ರಸ್ತೆಯಲ್ಲಿ ಸಿಕ್ಕ ಪರ್ಸ್ ಅನ್ನು ಪೊಲೀಸ್ ಠಾಣೆಗೆ ಒಪ್ಪಿಸಿದರು. ಪರ್ಸ್‌ನಲ್ಲಿ 19,060 ರೂಪಾಯಿ ನಗದು ಇತ್ತು. ಪೊಲೀಸರು ವ್ಯಾಟ್ಸ್‌ಆ್ಯಪ್ ಮೂಲಕ ಮಾಹಿತಿ ನೀಡಿ, ಬಚನಾಳ ಗ್ರಾಮದ ಉಮೇಶ ವರಗರ ಅವರಿಗೆ ಪರ್ಸ್ ಮತ್ತು ಹಣವನ್ನು ಹಿಂದಿರುಗಿಸಿದರು. ಪ್ರಾಮಾಣಿಕತೆ ಮೆರೆದ ಸಿಬ್ಬಂದಿಯನ್ನು ಪೊಲೀಸರು ಸನ್ಮಾನಿಸಿದರು.

model of honesty incident of town municipal staff returning lost purse

ಪ್ರಮಾಣಿಕತೆ ಮೆರೆದ ತಾಪಂ ಸಿಬ್ಬಂದಿ

ಕುಷ್ಟಗಿ: ಪಟ್ಟಣದ ತಾವರಗೇರಾ ರಸ್ತೆಯ ಸಣ್ಣ ನೀರಾವರಿ ಇಲಾಖೆ ಮುಂದಿರುವ ರೋಡ್ ಹಂಫ್ಸ್ (ಹುಬ್ಬು) ಬಳಿ ತಾಪಂನಲ್ಲಿಕಾರ್ಯ ನಿರ್ವಹಿಸುವ ರವಿಕುಮಾರ ಜಂಬಲದಿನ್ನಿ ಮತ್ತು ಸಿದ್ದಪ್ಪ ತರಲಕಟ್ಟಿ ಅವರಿಗೆ ಪರ್ಸ್ ಸಿಕ್ಕಿದ್ದು ಸ್ಥಳೀಯ ಪೊಲೀಸ್ ಠಾಣೆಗೆ ತಲುಪಿಸಿ ಪ್ರಮಾಣಿಕತೆ ಮೆರೆದಿದ್ದಾರೆ.

ಪರ್ಸ್ ನಲ್ಲಿ19,060 ರೂ. ನಗದು ಇತ್ತು, ವ್ಯಾಟ್ಸ್ ಆ್ಯಪ್ ಮೂಲಕ ಪೊಲೀಸರು ಮಾಹಿತಿ ಹಾಕಿ ತಾಲೂಕಿನ ಬಚನಾಳ ಗ್ರಾಮದ ಉಮೇಶ ವರಗರ ಎಂಬುವರಿಗೆ ಸೇರಿದ ಪರ್ಸ್ ಹಾಗೂ ಹಣವನ್ನು ಮರಳಿಸಿದ್ದಾರೆ.

ಬಚನಾಳದಿಂದ ಕುಷ್ಟಗಿಗೆ ಬರುವಾಗ ಪರ್ಸ್ ಕಳೆದುಕೊಂಡಿರುವುದಾಗಿ ಉಮೇಶ್ ಠಾಣೆಗೆ ಬಂದು ಮಾಹಿತಿ ನೀಡಿದ್ದರು. ಪರ್ಸ್ ನಲ್ಲಿದ್ದ ನಗದು ಮತ್ತು ಭಾವಚಿತ್ರವನ್ನು ಪರಿಶೀಲಿಸಿ ನಂತರ ಪೊಲೀಸರು ಉಮೇಶ ಅವರಿಗೆ ಹಣ ಮರಳಿಸಿದ್ದಾರೆ. ಪ್ರಮಾಣಿಕತೆ ಮೆರೆದ ರವಿಕುಮಾರ ಮತ್ತು ಸಿದ್ದಪ್ಪ ಅವರನ್ನು ಠಾಣೆಗೆ ಕರೆದು ಪೊಲೀಸರು ಸನ್ಮಾನಿಸಿದರು.

ಈ ವೇಳೆ ಪಿಎಸ್ ಐ ಹನುಮಂತಪ್ಪ ತಳವಾರ, ಸಿಬ್ಬಂದಿ ಚೌಡಪ್ಪ, ವಿರೂಪಾಕ್ಷಿ, ರಾಜೇಸಾಬ್ ಬಾವಿಕಟ್ಟಿ ಇದ್ದರು.

ಫೊಟೋ ಶೀರ್ಷಿಕೆ 05 ಕೆಎಸ್ ಟಿ ಪಿ03

ತಾವರಗೇರಾದಲ್ಲಿಪ್ರಮಾಣಿಕತೆ ಮೆರೆದ ರವಿಕುಮಾರ ಮತ್ತು ಸಿದ್ದಪ್ಪ ಅವರನ್ನು ಪೊಲೀಸರು ಸನ್ಮಾನಿಸಿದರು.