(ಕೇಬಲ್ ಆಪರೇಟರ್ ಗಳ ವಾರ್ಷಿಕೋತ್ಸವದಲ್ಲಿಅಸೋಸಿಯೇಷನ್ ಅಧ್ಯಕ್ಷ ಪ್ಯಾಟ್ರಿಕ್ ರಾಜು ಹೇಳಿಕೆ)
ವಿಕ ಸುದ್ದಿಲೋಕ ಗೌರಿಬಿದನೂರು
ಇಂದಿನ ಕಾಲಘಟ್ಟದಲ್ಲಿಕೇಬಲ್ ಆಪರೇಟರುಗಳು ತಮ್ಮ ಸೇವಾ ಕ್ಷೇತ್ರದಲ್ಲಿಸಾಕಷ್ಟು ಕಠಿಣ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅವುಗಳನ್ನು ಮೆಟ್ಟಿ ನಿಲ್ಲಲು ಮೊದಲು ನಾವು ಗಟ್ಟಿಯಾಗಿ ಸಂಘಟನೆಯಾಗಬೇಕು. ಸಂಘದ ಮೂಲಕ ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಇದಕ್ಕೆ ನಿದರ್ಶನ ಗೌರಿಬಿದನೂರು ಸಂಘದ ಚಟುವಟಿಕೆಗಳು ಎಂದು ಕರ್ನಾಟಕ ರಾಜ್ಯ ಕೇಬಲ್ ಟಿವಿ ಆಪರೇಟರ್ ಅಸೋಸಿಯೇಷನ್ ಅಧ್ಯಕ್ಷ ವಿ.ಎಸ್ .ಪ್ಯಾಟ್ರಿಕ್ ರಾಜು ಶ್ಲಾಘಿಘಿಸಿದರು.
ನಗರದ ಡಾ. ಎಚ್ .ಎನ್ . ಕಲಾಭವನದಲ್ಲಿತಾಲೂಕು ಕೇಬಲ್ ಟಿವಿ ಆಪರೇಟರುಗಳ ಕ್ಷೇಮಾಭಿವೃದ್ಧಿ ಸಂಘದ 2ನೇ ವಾರ್ಷಿಕೋತ್ಸವ ಸಮಾರಂಭದಲ್ಲಿಮಾತನಾಡಿದ ಅವರು, 2024ರಲ್ಲಿಪ್ರಾರಂಭವಾದ ಸಂಘ ತಾಲೂಕಿನ ಟಿವಿ ಕೇಬಲ್ ಆಪರೇಟರುಗಳ ಸಮಸ್ಯೆಗಳಿಗೆ, ಅವರ ದುಃಖ ದುಮ್ಮಾನಗಳಿಗೆ ಸ್ಪಂದಿಸುವ ಮೂಲಕ ಸಂಘದ ಸದಸ್ಯರ ಬೆನ್ನೆಲುಬಾಗಿ ನಿಂತಿದೆ ಎಂದರು.
ತಾಲೂಕು ಟಿವಿ ಆಪರೇಟರುಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಪಿ.ಸತ್ಯನಾರಾಯಣ ಮಾತನಾಡಿ, ಕೇಬಲ್ ಆಪರೇಟರುಗಳ ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸುವ ಸಲುವಾಗಿ ಪ್ರಾರಂಭವಾದ ತಾಲೂಕು ಕೇಬಲ್ ಟಿವಿ ಆಪರೇಟರ್ ಕ್ಷೇಮಾಭಿವೃದ್ಧಿ ಸಂಘ ಇಂದು ಸಂಘಟನೆಯ ಶಕ್ತಿಯಾಗಿ ಬೆಳೆದು ನಿಂತಿದೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯ ಕೇಬಲ್ ಆಪರೇಟರ್ ಸಂಘದ ಕಾರ್ಯದರ್ಶಿ ಗುಬ್ಬಿ ರಾಜೇಶ್ ಆರಾಧ್ಯ ಮಾತನಾಡಿ, ಪ್ರಸ್ತುತ ದಿನಗಳಲ್ಲಿಟಿವಿ ಕೇಬಲ್ ಆಪರೇಟರುಗಳು ತಮ್ಮ ಕ್ಷೇತ್ರದಲ್ಲಿಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತಿದೆ. ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿಕೊಚ್ಚಿ ಹೋಗದೆ ಪ್ರತಿಯೊಬ್ಬ ಕೇಬಲ್ ಆಪರೇಟರುಗಳು ಹೊಸ ಹೊಸ ತಂತ್ರಜ್ಞಾನಕ್ಕೆ ಅಪ್ಡೇಟ್ ಆಗುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ನಮ್ಮ ಉದ್ಯಮ ಉಳಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿಶ್ರೀ ಪತಂಜಲಿ ಯೋಗ ಶಿಕ್ಷಣದ ವತಿಯಿಂದ ನಾನಾ ಯೋಗಾಸನಗಳನ್ನು ಪ್ರದರ್ಶಿಸುವ ಮೂಲಕ ಆರೋಗ್ಯದ ಕುರಿತು ಜಾಗೃತಿ ಮೂಡಿಸಿದರೆ ಗೀತಂ ಶಾಲೆಯ ನೃತ್ಯ ವಿಭಾಗ ವಿದ್ಯಾರ್ಥಿಗಳು ಅದ್ಭುತ ನೃತ್ಯ ಪ್ರದರ್ಶನ ನೀಡಿ ಸಭಿಕರ ಮನಸೂರೆಗೊಂಡರು.
ಕಾರ್ಯಕ್ರಮದಲ್ಲಿಸಂಘದ ರಾಜ್ಯ ಕಾರ್ಯದರ್ಶಿ ರಾಮ್ ಪ್ರಸಾದ್ , ತಾಲೂಕು ಸಂಘದ ಗೌರವಾಧ್ಯಕ್ಷ ನದಿದಡದ ಅಶ್ವತ್ಥಪ್ಪ, ಕೆ.ವಿ. ರಂಗಾರೆಡ್ಡಿ, ಎಲ್ . ರಮೇಶ್ , ಸಿ. ಈಶ್ವರಯ್ಯ, ಅಶೋಕ್ ಬಾಬು ಮತ್ತಿತರರು ಭಾಗವಹಿಸಿದ್ದರು.
ಚಿತ್ರ3ಜಿಬಿಡಿ-3
ಗೌರಿಬಿದನೂರು ನಗರದ ಡಾ. ಎಚ್ .ಎನ್ . ಕಲಾಭವನದಲ್ಲಿತಾಲೂಕು ಕೇಬಲ್ ಟಿವಿ ಆಪರೇಟರುಗಳ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವ ಸಮಾರಂಭವನ್ನು ಕರ್ನಾಟಕ ರಾಜ್ಯ ಕೇಬಲ್ ಟಿವಿ ಆಪರೇಟರ್ ಅಸೋಸಿಯೇಷನ್ ಅಧ್ಯಕ್ಷ ಪ್ಯಾಟ್ರಿಕ್ ರಾಜು ಉದ್ಘಾಟಿಸಿದರು.

