ವಿಕ ಸುದ್ದಿಲೋಕ ಕಾರ್ಕಳ
ಕನ್ನಡ ಶಾಲೆ ಉಳಿಸಿ ಬೆಳೆಸಿ ಸಮಿತಿ ಕಾರ್ಕಳ ಘಟಕದ ಅಧ್ಯಕ್ಷರಾಗಿ ಉದ್ಯಮಿ ಸುಶಾಂತ್ ಬಜಗೋಳಿ ಆಯ್ಕೆಯಾಗಿದ್ದಾರೆ.
ಬಜಗೋಳಿ ಸ.ಪ.ಪೂ. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾಗಿರುವ ಸುಶಾಂತ್ , ಈ ಹಿಂದೆ ಅಬ್ಬೆಂಜಾಲು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾಗಿ, ಬಜಗೋಳಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ, ಎಸ್ ಕೆಪಿಎ ಕಾರ್ಕಳ ವಲಯದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
ಸರಕಾರಿ ಶಾಲಾ ಅಭಿವೃದ್ಧಿ ನಿಟ್ಟಿನಲ್ಲಿರಾಜ್ಯಮಟ್ಟದಲ್ಲಿಕನ್ನಡ ಶಾಲೆ ಉಳಿಸಿ ಬೆಳೆಸಿ ಸಮಿತಿ ರಚನೆಯಾಗಿದ್ದು ಅಭಿಯಾನ ಕೈಗೊಳ್ಳಲಿದೆ. ಫೆ.11ರಂದು ಮಂಗಳೂರು ಪುರಭವನದಲ್ಲಿಬೃಹತ್ ಸಮಾವೇಶ ನಡೆಯಲಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ವಾಸುದೇವ ರಾವ್ ತಿಳಿಸಿದ್ದಾರೆ.
ಫೊಟೋ: 4ಕೆವಿ-ಸುಶಾಂತ್ ಬಜಗೋಳಿ

