ಹೊಸಕೋಟೆಯಲ್ಲಿಹೂವಿನ ಮಾರುಕಟ್ಟೆ

Contributed bysulibeleprashanth@gmail.com|Vijaya Karnataka

ಚಿಕ್ಕಬಳ್ಳಾಪುರದಲ್ಲಿ ಸುಸಜ್ಜಿತ ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಇದರ ಬಳಿಕ ಹೊಸಕೋಟೆಯಲ್ಲೂ ಹೂವಿನ ಮಾರುಕಟ್ಟೆ ನಿರ್ಮಾಣದ ಬೇಡಿಕೆಯನ್ನು ಪರಿಗಣಿಸಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ. ಹೊಸಕೋಟೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಹೂವು, ತರಕಾರಿ ವ್ಯಾಪಾರಕ್ಕೆ ಪೂರಕ ಸೌಲಭ್ಯ ಕಲ್ಪಿಸಲಾಗುವುದು.

new flower market infrastructure development in hosakote

ಹೊಸಕೋಟೆಯಲ್ಲಿಹೂವಿನ ಮಾರುಕಟ್ಟೆ

((ಸಚಿವ ಶಿವಾನಂದ ಪಾಟೀಲ ಭರವಸೆ))

ಬೆಂಗಳೂರು ಗ್ರಾಮಾಂತರ: ಚಿಕ್ಕಬಳ್ಳಾಪುರದಲ್ಲಿ20 ಎಕರೆ ಪ್ರದೇಶದಲ್ಲಿಸುಸಜ್ಜಿತ ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯ ನಂತರ ಹೊಸಕೋಟೆಯಲ್ಲೂಹೂವಿನ ಮಾರುಕಟ್ಟೆ ನಿರ್ಮಾಣ ಬೇಡಿಕೆ ಪರಿಗಣಿಸಲಾಗುವುದು ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿಪ್ರಶ್ನೋತ್ತರ ವೇಳೆಯಲ್ಲಿಶಾಸಕ ಶರತ್ ಬಚ್ಚೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚಿಕ್ಕಬಳ್ಳಾಪುರದಲ್ಲಿಹೂವಿನ ಮಾರುಕಟ್ಟೆಗೆ ಆರ್ ಐಡಿಎಫ್ -31 ಯೋಜನೆಯಡಿ 20 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ತಿಳಿಸಿದರು.

ಹೊಸಕೋಟೆ ತಾಲೂಕಿನಲ್ಲಿಒಟ್ಟು 25 ಎಕರೆ ಪ್ರದೇಶದಲ್ಲಿಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಪ್ರಾಂಗಣ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಲಾಗಿದೆ. ಸುಮಾರು 30 ಕೋಟಿ ರೂ. ವೆಚ್ಚದಲ್ಲಿಗೋದಾಮು, ಮುಚ್ಚು ಹರಾಜು ಕಟ್ಟೆ, ಆಡಳಿತ ಕಚೇರಿ, ಆರ್ ಸಿಸಿ ಡ್ರೈನ್ , ವಿದ್ಯುತ್ ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ ಎಂದು ವಿವರಿಸಿದರು.

ಹೂವಿನ ಮಾರುಕಟ್ಟೆ ಅಭಿವೃದ್ಧಿಪಡಿಸಲು ಈಗಾಗಲೇ ಡಿಪಿಆರ್ ಪಡೆದಿದ್ದು, ಮಾರುಕಟ್ಟೆ ಪ್ರಾಂಗಣ ಅಭಿವೃದ್ಧಿ ನಂತರದಲ್ಲಿಹೂವು, ತರಕಾರಿ ಹಾಗೂ ಇತರ ಅಧಿಸೂಚಿತ ಕೃಷಿ ಉತ್ಪನ್ನಗಳ ವ್ಯಾಪಾರ ವಹಿವಾಟಿಗೆ ಪೂರಕ ಸೌಲಭ್ಯ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಚಿತ್ರ-13 ಸೂಲಿಬೆಲೆ 1

ಶರತ್ ಬಚ್ಚೇಗೌಡ