ರಕ್ತ ನೀಡಿ ಮಾನವೀಯತೆ ಮೆರೆದ ಪಿಎಸ್ ಐ

Contributed bymanju.sdr22@gmail.com|Vijaya Karnataka

ದಾಂಡೇಲಿಯ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗರ್ಭಿಣಿಗೆ ತುರ್ತು ರಕ್ತದ ಅವಶ್ಯಕತೆ ಇತ್ತು. ಈ ವಿಷಯ ತಿಳಿದ ನಗರ ಠಾಣೆಯ ಪಿಎಸ್‌ಐ ಕಿರಣ್‌ ಪಾಟೀಲ್‌ ಅವರು ತಕ್ಷಣವೇ ಆಸ್ಪತ್ರೆಗೆ ಬಂದು ರಕ್ತದಾನ ಮಾಡಿದರು. ಅವರ ಈ ಮಾನವೀಯ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ರಕ್ತದಾನದಿಂದ ಜೀವ ಉಳಿಸಬಹುದು ಎಂಬುದಕ್ಕೆ ಇದು ಉತ್ತಮ ನಿದರ್ಶನವಾಗಿದೆ.

psi kiran patils humanitarian gesture at mother and child care hospital

ದಾಂಡೇಲಿ: ನಗರದ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯಲ್ಲಿದಾಖಲಾಗಿದ್ದ ಗರ್ಭಿಣಿಗೆ ತುರ್ತು ರಕ್ತದ ಅವಶ್ಯಕತೆ ಇರುವುದರ ಬಗ್ಗೆ ಮಾಹಿತಿ ತಿಳಿದ ಇಲ್ಲಿಯ ನಗರ ಠಾಣೆಯ ಪಿಎಸ್ ಐ ಕಿರಣ್ ಪಾಟೀಲ್ ಅವರು ತಕ್ಷಣವೇ ಆಸ್ಪತ್ರೆಗೆ ಆಗಮಿಸಿ ರಕ್ತ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ರಕ್ತದಾನ ಿ ಹಾಗೂ ರಕ್ತದಾನ ಶಿಬಿರದ ಸಂಘಟಕರಾದ ಸುಧೀರ್ ಶೆಟ್ಟಿ ಅವರು ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯಲ್ಲಿಚಿಕಿತ್ಸೆಗೆ ದಾಖಲಾಗಿರುವ ಗರ್ಭಿಣಿಗೆ ತುರ್ತಾಗಿ ಎ-ಪಾಸಿಟಿವ್ ರಕ್ತದ ಅವಶ್ಯಕತೆ ಇದ್ದು, ದಾನಿಗಳು ತಕ್ಷಣವೇ ಸ್ಪಂದಿಸುವಂತೆ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿಮನವಿ ಮಾಡಿದ್ದರು. ಇದನ್ನು ಗಮನಿಸಿದ ಪಿಎಸ್ ಐ ಕಿರಣ್ ಪಾಟೀಲ್ ಅವರು ಆಸ್ಪತ್ರೆಗೆ ಆಗಮಿಸಿ ರಕ್ತ ನೀಡಿ ಮಾನವೀಯತೆ ಮೆರೆದಿದ್ದಾರೆ.

ಫೋಟೋ

ದಾಂಡೇಲಿಯ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯಲ್ಲಿದಾಖಲಾಗಿದ್ದ ಗರ್ಭಿಣಿಗೆ ಪಿಎಸ್ ಐ ಕಿರಣ್ ಪಾಟೀಲ್ ಅವರು ತುರ್ತು ರಕ್ತ ನೀಡಿ ಮಾನವೀಯತೆ ಮೆರೆದರು.