ವಿಕ ಸುದ್ದಿಲೋಕ ಉಡುಪಿ
ಕನ್ನಡ ಸಾಹಿತ್ಯ ಪರಿಷÜತ್ ಉಡುಪಿ ತಾಲೂಕು ಘಟಕದ 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಏಪ್ರಿಲ್ ತಿಂಗಳಿನಲ್ಲಿನಡೆಯಲಿದ್ದು, ಮಥುರಾ ಕಂಫರ್ಟ್ಸ್ನಲ್ಲಿಪೂರ್ವಭಾವಿ ಸಭೆ ಸೋಮವಾರ ನಡೆಯಿತು.
ಕಸಾಪ ಉಡುಪಿ ತಾಲೂಕು ಘಟಕಾಧ್ಯಕ್ಷ ರವಿರಾಜ್ ಎಚ್ ಪಿ. ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷತೆಗೆ ಎಂಟು ಹೆಸರುಗಳು ಬಂದಿದ್ದು, ಮುಂದಿನ ವಾರದಲ್ಲಿಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಉಡುಪಿ ತಾಲೂಕಿನ 16ನೇ ಸಮ್ಮೇಳನ ಇದಾಗಿದ್ದು ವಿಚಾರ ಗೋಷ್ಠಿಗಳು, ಪುಸ್ತಕಗಳ ಲೋಕಾರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಜರುಗಲಿದೆ.
ಸಭೆಯಲ್ಲಿ ಜಿಲ್ಲಾಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್ , ಆಸ್ಟೊ್ರೕ ಮೋಹನ್ , ರಾಘವೇಂದ್ರ ಪ್ರಭು ಕರ್ವಾಲ್ , ರಮಾನಂದ, ವಿದ್ಯಾ ಸರಸ್ವತಿ, ದೀಪಾ ಕರ್ಕಿ, ಸಿದ್ದ ಬಸಯ್ಯ ಸ್ವಾಮಿ ಚಿಕ್ಕಮಠ, ಸುಭೋದ್ , ಉಮೇಶ್ ಆಚಾರ್ಯ ಉಪಸ್ಥಿತರಿದ್ದರು.
ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ಸ್ವಾಗತಿಸಿದರು. ಉಡುಪಿ ತಾಲೂಕು ಅಧ್ಯಕ್ಷ ರವಿರಾಜ ಎಚ್ .ಪಿ. ಪ್ರಸ್ತಾಪಿಸಿದರು. ಗೌರವ ಕಾರ್ಯದರ್ಶಿ ರಂಜನಿ ವಸಂತ್ ನಿರೂಪಿಸಿದರು. ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ ವಂದಿಸಿದರು.

