ಚಿತ್ರ:14ಬಿಡಿಆರ್ 4
ಬೀದರ್ ನ ದಕ್ಷಿಣ ಶಾಸಕರ ಕಚೇರಿಯಲ್ಲಿಚಿಟ್ಟಾ ಗ್ರಾಮದ ರೈತ ಪ್ರಭುರಾವ ವಾರಸುದಾರರಿಗೆ ಜೆಸ್ಕಾಂನಿಂದ 5 ಲಕ್ಷ ರೂ. ಪರಿಹಾರದ ಚೆಕ್ ನ್ನು ಬುಧವಾರ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ವಿತರಿಸಿದರು.
ರೈತ ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ
ವಿಕ ಸುದ್ದಿಲೋಕ ಬೀದರ್
ಜಮೀನಿನಲ್ಲಿಕೃಷಿ ಚಟುವಟಿಕೆಯಲ್ಲಿತೊಡಗಿದ್ದಾಗ ವಿದ್ಯುತ್ ತಂತಿ ತಗುಲಿ ಮೃತಪಟ್ಟ ತಾಲೂಕಿನ ಚಿಟ್ಟಾ ಗ್ರಾಮದ ರೈತ ಪ್ರಭುರಾವ ಅವರ ಕುಟುಂಬಕ್ಕೆ ಜೆಸ್ಕಾಂನಿಂದ ಮಂಜೂರಾದ 5 ಲಕ್ಷ ರೂ. ಪರಿಹಾರದ ಚೆಕ್ ನ್ನು ಬುಧವಾರ ವಿಧಿತಧಿರಿಧಿಸಧಿಲಾಧಿಯಿಧಿತು.
ನಗರದ ಬೀದರ್ ದಕ್ಷಿಣ ಶಾಸಕರ ಕಚೇರಿಯಲ್ಲಿಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮೃತ ರೈತರ ಕುಟುಂಬಕ್ಕೆ ಪರಿಹಾರದ ಚೆಕ್ ನ್ನು ವಿತರಿಸಿದರು. ಈ ದುರ್ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸಂತ್ರಸ್ತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿ, ಜೆಸ್ಕಾಂ ನಿಂದ ನೀಡಿದ ಭರವಸೆಯಂತೆ ಪರಿಹಾರ ನೀಡಲಾಗುತ್ತಿದೆ. ಈ ಹಣ ಸಂತ್ರಸ್ತರ ಕಷ್ಟದ ವೇಳೆ ಆಸರೆಯಾಗಲಿ ಎಂದರು.
ಜೆಸ್ಕಾಂ ಅಧಿಕಾರಿಗಳಾದ ಪ್ರೇಮಕುಮಾರ, ಅಬ್ದುಲ್ ಸೈಯದ್ , ಮುಖಂಡರಾದ ರಾಜಕುಮಾರ ಪಾಟೀಲ, ವಿದ್ಯಾಸಾಗರಸ್ವಾಮಿ, ಆನಂದ ಪಾಟೀಲ, ಶಿವಕುಮಾರ ಪಾಟೀಲ, ಶರಣುಸ್ವಾಮಿ, ಶಿವಕುಮಾರ ಕೆ., ಶಿವರಾಜ ಪಾಟೀಲ, ಸೋಮು ಪಾಟೀಲ ಇತರರಿದ್ದರು.

