ವಿಕ ಸುದ್ದಿಲೋಕ ಬಾಗೇಪಲ್ಲಿ
ತಾಲೂಕಿನ ಗೂಳೂರು ಸರಕಾರಿ ಪ್ರೌಢಶಾಲೆ ಸ್ಥಾಪನೆಯಾಗಿ 60 ವರ್ಷ ಪೂರೈಸಿದ ಹಿನ್ನೆಲೆಯಲ್ಲಿಅಮೃತ ಮಹೋತ್ಸವ ಆಯೋಜಿಸಲು ಶಾಸಕ ಎಸ್ .ಎನ್ . ಸುಬ್ಬಾರೆಡ್ಡಿ ಹಾಗೂ ಈ ಶಾಲೆಯ ಹಳೇ ವಿದ್ಯಾರ್ಥಿಗಳು ಪೂರ್ವಭಾವಿ ಸಭೆ ನಡೆಸಿದರು.
ಈ ಸಭೆಯಲ್ಲಿಮಾತನಾಡಿದ ಶಾಸಕ ಎಸ್ .ಎನ್ . ಸುಬ್ಬಾರೆಡ್ಡಿ, ಇದು ನಾನು ಓದಿದ ಶಾಲೆ.ನನಗೆ ಬದುಕಿಗೆ ಅಡಿಪಾಯ ಹಾಕಿದ ಶಾಲೆ. ಈ ಶಾಲೆ ಸ್ಥಾಪನೆಯಾಗಿ 60 ವರ್ಷ ಕಳೆದಿವೆ. ಈ ಶಾಲೆಗೆ ಏನಾದರೂ ಕೊಡುಗೆ ನೀಡಬೇಕು ಎಂದು ಸಂಕಲ್ಪ ಮಾಡಿ ಅಮೃತ ಮಹೋತ್ಸವ ಆಯೋಜಿಸಬೇಕು ಎಂದು ನಾನು, ನನ್ನ ಹಳೇ ವಿದ್ಯಾರ್ಥಿಗಳು ತೀರ್ಮಾನ ಮಾಡಿದ್ದೇವೆ ಎಂದರು.
ಶಾಲೆಯ ಹಲವು ಕೊಠಡಿಗಳ ಬಾಗಿಲು ಮತ್ತು ಕಿಟಕಿಗಳು ಶಿಥಿಲಗೊಂಡಿರುವುದರಿಂದ ನೂತನ ಬಾಗಿಲು ಮತ್ತು ಕಿಟಕಿಗಳನ್ನು ಹಾಕಬೇಕು, ಎಲ್ಲಾಕೊಠಡಿಗಳಿಗೆ ಸುಣ್ಣ ಬಣ್ಣ ಬಳಿಯುವುದು ಹಾಗೂ ಶಾಲಾ ಕಾಪೌಂಡ್ ದುರಸ್ತಿ, ಆಟದ ಮೈದಾನ ಸಮತಟ್ಟು, ಮುಖ್ಯ ರಸ್ತೆಯಿಂದ ಆಟದ ಮೈದಾನ ತನಕ ಸಿಸಿ ರಸ್ತೆ, ಸಭಾಂಗಣ ನಿರ್ಮಾಣ, ಶಾಲಾ ಆಸ್ತಿಪಾಸ್ತಿಗಳನ್ನು ಶಾಲಾ ಆಡಳಿತ ಮಂಡಳಿಗೆ ವಶಕ್ಕೆ ಪಡೆಯುವುದು, ಶಾಲಾ ಆವರಣದಲ್ಲಿನೂರಾರು ಗಿಡಗಳನ್ನು ನೆಡುವುದು, ಬಹಳ ಮುಖ್ಯವಾಗಿ ಕೆಪಿಎಸ್ ಶಾಲೆ ತೆರೆಯುವುದು, ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸುವುದು, ಕಳೆದ ಬಾರಿ 10ನೇ ತರಗತಿಯಲ್ಲಿಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಸೇರಿದಂತೆ ಇನ್ನು ಹಲವು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಭೆಯಲ್ಲಿತೀರ್ಮಾನವಾಗಿದೆ. ಈ ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಗಮಿಸಲಿದ್ದಾರೆ ಎಂದರು.
ಹಳೇ ವಿದ್ಯಾರ್ಥಿಗಳು ಈ ಶಾಲೆಗೆ ಏನು ಬೇಕು, ಏನು ಬೇಡ ಎಂಬ ಮಾಹಿತಿ ನೀಡಿದರೆ ನಾನು ಅತ್ಯಂತ ಪ್ರಾಮಾಣಿಕವಾಗಿ ಮಾಡಲು ಸಿದ್ಧನಿದ್ದೇನೆ. ಒಟ್ಟಿನಲ್ಲಿನಾನು ಓದಿದ ಶಾಲೆಯನ್ನು ಇಡೀ ಜಿಲ್ಲೆಯಲ್ಲೇ ಮಾದರಿ ಶಾಲೆಯನ್ನಾಗಿ ಮಾಡಲು ಬದ್ಧನಾಗಿದ್ದೇನೆ ಎಂದರು.
ಬೆಂಗಳೂರು ಉತ್ತರ ಜಿಲ್ಲೆಯ ಡಿಡಿಪಿಐ ಕೆ. ವೆಂಕಟೇಶ್ ಮಾತನಾಡಿ, ಗೂಳೂರು ಹೋಬಳಿ ಕೇಂದ್ರಕ್ಕೆ ಕೆಪಿಎಸ್ ಶಾಲೆ ಮಂಜೂರು ಮಾಡಿಸಬೇಕು ಎಂದು ಶಾಸಕ ಸುಬ್ಬಾರೆಡ್ಡಿ ಅವರು ಬಹಳ ಆಸಕ್ತಿ ವಹಿಸಿ ಕೆಪಿಎಸ್ ಶಾಲೆ ಮಂಜೂರು ಮಾಡಿಸಿದ್ದಾರೆ. ಕಾರ್ಯಕ್ರಮದ ದಿನ ಅದು ಘೋಷಣೆ ಆಗಲಿದೆ. ಈ ಶಾಲೆಯ ಅಭಿವೃದ್ಧಿಗೆ ಯಾವ ರೀತಿ ಸಹಕಾರ ನೀಡಬೇಕೋ ಅದಕ್ಕಿಂತ ಹೆಚ್ಚಿನ ರೀತಿ ಅನುದಾನ ನೀಡುತ್ತಿದ್ದಾರೆ. ಆದ್ದರಿಂದ ಅವರನ್ನು ಎಂದೆಂದಿಗೂ ಮರೆಯಲು ಸಾಧ್ಯವೇ ಇಲ್ಲ. ಫೆಬ್ರವರಿಯಲ್ಲಿಅಮೃತ ಮಹೋತ್ಸವ ಮಾಡಬೇಕು ಎಂದು ಶಾಸಕರು ಸೂಚನೆ ನೀಡಿದ್ದಾರೆ ಎಂದರು.
ಈ ಸಭೆಯಲ್ಲಿಹಳೇ ವಿದ್ಯಾರ್ಥಿಗಳಾದ ತಾಪಂ ಮಾಜಿ ಅಧ್ಯಕ್ಷ ಎಸ್ .ಎಸ್ . ರಮೇಶ್ ಬಾಬು, ಕ್ಷೇತ್ರ ಶಿಕ್ಷಣಾಧಿಕಾರಿ ಎನ್ . ವೆಂಕಟೇಶಪ್ಪ, ಬಿಆರ್ ಸಿ ಸಂಯೋಜಕ ವೆಂಕಟರಾಮಪ್ಪ, ಪಿಡಿಒಗಳಾದ ತಿಪ್ಪಯ್ಯ, ಕೃಷ್ಣಮೂರ್ತಿ, ಉಪನ್ಯಾಸಕ ನಾಗರಾಜು, ಶಾಲೆಯ ಮುಖ್ಯ ಶಿಕ್ಷಕ ವಿ. ವೆಂಕಟೇಶ್ , ಡಾ. ಪ್ರಸಾದ್ , ಡಾ. ವೆಂಕಟೇಶಪ್ಪ, ಹರಿನಾಥರೆಡ್ಡಿ, ಸೂರ್ಯನಾರಾಯಣರೆಡ್ಡಿ, ರಂಗನಾಥ್ , ಜಿ. ವೆಂಕಟೇಶ್ , ಸಿ.ಎನ್ . ಬಾಬುರೆಡ್ಡಿ, ಸುರೇಂದ್ರರೆಡ್ಡಿ, ಅನ್ವರ್ , ಸರಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತರೆಡ್ಡಿ, ಚಂದ್ರ, ಸೀಮಾವಲು ಕೃಷ್ಣಪ್ಪ, ಅಂಜಿನಪ್ಪ, ರವಿಕುಮಾರ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.
ಚಿತ್ರಶೀರ್ಷಿಕೆ
ಗೂಳೂರು ಸರಕಾರಿ ಪ್ರೌಢಶಾಲೆಯಲ್ಲಿಶಾಸಕ ಸುಬ್ಬಾರೆಡ್ಡಿ ಮಾತನಾಡಿದರು.

