15ನರೇಗಲ್ಲ2 ವಿಕ ಸುದ್ದಿಲೋಕ ನರೇಗಲ್ಲ ಭಾರತೀಯರು

Contributed bynaregalhd@gmail.com|Vijaya Karnataka

ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ನಾವೆಲ್ಲ ಒಂದೇ ಎಂಬ ಭಾವನೆ ಭಾರತವನ್ನು ಸಂಘಟಿತಗೊಳಿಸುತ್ತದೆ ಎಂದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರು ವರ್ಷಗಳ ಅಂಗವಾಗಿ ಹಿಂದೂ ಜಾಗೃತಿ, ರಾಷ್ಟ್ರಪ್ರೇಮ ಮೂಡಿಸಲಾಗುತ್ತಿದೆ. ಭಾರತದ ಏಕತೆಗಾಗಿ ಹಿಂದೂ ಸಮ್ಮೇಳನಗಳು ಯುವ ಪೀಳಿಗೆಗೆ ಸಂಸ್ಕೃತಿ ಪರಿಚಯಿಸುತ್ತವೆ. ಜ. 24 ರಂದು ನಡೆಯುವ ಹೋಬಳಿ ಮಟ್ಟದ ಹಿಂದೂ ಸಮ್ಮೇಳನ ಯಶಸ್ವಿಗೊಳಿಸಲು ಎಲ್ಲರೂ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

call for strong social unity at naregal hindu convention

15ನರೇಗಲ್ಲ2

ವಿಕ ಸುದ್ದಿಲೋಕ ನರೇಗಲ್ಲ

ಭಾರತೀಯರು ನಾವೆಲ್ಲಒಂದೇ ಎಂಬ ಮನೋಭಾವನೆ ಪ್ರತಿಯೊಬ್ಬ ಪ್ರಜೆಯ ಅಂತರಾಳದ ಮಾತಾಗಬೇಕು ಅಂದಾಗ ಮಾತ್ರ ಸುಭಂದ್ರ ಸಂಘಟಿತ ಭಾರತವಾಗಲಿದೆ ಎಂದು ನರೇಗಲ್ಲಹಿರೇಮಠದ ಶ್ರೀ ಮಲ್ಲಿಕರ್ಜು ಶಿಷವಾಚಾರ್ಯ ಸ್ವಾಮಿಗಳು ಹೇಳಿದರು.

ನರೇಗಲ್ಲಹೋಬಳಿ ಮಟ್ಟದ ಹಿಂದೂ ಸಮ್ಮೇಳನದ ಆಹ್ವಾನ ಪತ್ರಿಕೆ ಸ್ವಿಕರಿಸಿದ ನಂತರ ಸಮಾರಂಭದ ಬಿತ್ತಿಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಸ್ವಯವåಂ ಸೇವಕ ಸಂಘ ಸ್ಥಾಪನೆಗೊಂಡು ಕಳೆದ 2025ರ ವಿಜಯದಶಮಿಗೆ ನೂರು ವರ್ಷಗಳು ಗತಿಸಿದ್ದು ಅದರ ದೂತಕವಾಗಿ ಒಂದು ವರ್ಷಗಳ ಪರಿಯಂತರ ಸಾರ್ವಜನಿಕರ ಸಹಯೋಗದಲ್ಲಿಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ವಯಂ ಸೇವಕ ಕಾರ್ಯಕರ್ತರು ಈ ನಾಡಿನ ಉದ್ದಗಲಕ್ಕೂ ಹಿಂದೂ ಜಾಗೃತಿ, ರಾಷ್ಟ್ರಪ್ರೇಮ ಮೂಡಿಸುತ್ತಿರುವುದು ದೇಶದ ಏಕತೆಯನ್ನು ಸಾರುತ್ತಿದೆ. ಭಾರತ ಸನಾತನ ಹಿಂದೂ ಧರ್ಮವನ್ನು ಹೊಂದಿದ್ದು ಇಲ್ಲಿನ ಕಲೆ, ಸಾಹಿತ್ಯ ಸಂಸ್ಖ*ತಿ, ಆಚಾರ ವಿಚಾರಗಳು ವೈಶಿಷ್ಟತೆಯಿಂದ ಕೂಡಿದೆ. ರಾಷ್ಟ್ರದ ಏಕತೆಗಾಗಿ ಇಂತಹ ಸಮ್ಮೇಳನಗಳು ಮೇಲಿಂದ ಮೇಲೆ ನಡೆದಲಿಪಿಂದಿನ ಯುವ ಪೀಳಿಗೆಗೆ ಹಿಂದೂ ಸಂಸ್ಕೃತಿಯನ್ನು ಪರಿಚಯಿಸಿದಂತಾಗುತ್ತದೆ. ಜ. 24 ರಂದು ನರೇಗಲ್ಲಹೋಬಳಿ ಮಟ್ಟದ ಹಿಂದೂ ಸಮ್ಮೇಳನ ಕಾರ್ಯಕ್ರಮದಲ್ಲಿಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸೋಣ ಇದಕ್ಕೆ ನಮ್ಮಂತ ಮಠಮಾನ್ಯಗಳ ಸಲಹೆ, ಸಹಕಾರ ಸದಾವಕಾಲ ಇದ್ದೆ ಇರುತ್ತದೆ ಎಂದು ಮಲ್ಲಿಕಾರ್ಜುನ ಶ್ರೀಗಳು ಸಮತಸ ಸೂಚಿಸಿದರು. ಸಮ್ಮೇಳನದ ಅಧ್ಯಕ್ಷ ಬಸವರಾಜ ಒಂಕಲಕುಂಟಿ ಮಾತನಾಡಿ ಸಮ್ಮೇಳನದ ಎಲ್ಲಸಿದ್ದತೆಗಳನ್ನು ಮಾಡಿಕೊಂಡು ನರೇಗಲ್ಲಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಎಲ್ಲಗ್ರಾಮಗಳಿಗೆ ಸಂಚರಿಸಿ ಜನರಲ್ಲಿಸಮ್ಮೇಳನದ ರೂಪರೇಶೆಗಳನ್ನು ತಿಳಿಸಲಾಗಿದೆ. ತಮ್ಮ ಮಾರ್ಗದರ್ಶನದೊಂದಿಗೆ ಮುನ್ನಡೆಯುತ್ತೆವೆ ಎಂದು ಮಲ್ಲಿಕಾರ್ಜುನ ಶ್ರೀಗಳಿಗೆ ತಿಳಿಸಿದರು.

ಈ ಸಂದರ್ಬದಲ್ಲಿಆನಂದ ಕುಲಕರ್ಣಿ, ಜಗದೀಶ ಸಂಕನಗೌಡ್ರ, ಡಾ. ಆರ್ . ಕೆ. ಗಚ್ಚಿಮಠ, ಉಮೇಶ ಪಾಟೀಲ, ರಘುನಾಥ ಕೊಂಡಿ, ಮಂಜುನಾಥ ಹೆಗಡೆ, ಎಸ್ . ಕೆ. ಪಾಟೀಲ, ಮಲ್ಲನಗೌಡ ಪಾಟೀಲ, ಶಿವಕುಮಾರ ಮಾವಿನಕಾಯಿ, ಚನಬಸಪ್ಪ ಕುಷ್ಟಗಿ, ರವಿ ಮ್ಯಾಗೇರಿ, ಮಹೇಶ ಜೋಳದ, ಸುರೇಖಾ ರಾಯಭಾಗಿ, ಶಿಮಾ ಕೊಂಡಿ, ನಿರ್ಮಲಾ ಹಿರೇಮಠ ಹಾಗೂ ಉಪಸ್ತಿತರಿದ್ದರು.

ಫೋಟೋ ಶಿರ್ಷಿಕೆ15 ನರೇಗಲ್ಲ2

ನರೇಗಲ್ಲಹಿರೇಮಠದ ಶ್ರೀ ಮಲ್ಲಿಕರ್ಜು ಶಿಷವಾಚಾರ್ಯ ಸ್ವಾಮಿಗಳು ನರೇಗಲ್ಲಹೋಬಳಿ ಮಟ್ಟದ ಹಿಂದೂ ಸಮ್ಮೇಳನದ ಬಿತ್ತಿಪತ್ರ ಬಿಡುಗಡೆಗೊಳಿಸಿದರು.