ಬಾಟಂ- ನಕಲಿ ಬೆಳೆ ಸಮೀಕ್ಷೆ ಮಾಡಿದವರಿಗೆ ನಡುಕ!

Contributed bychandrubennur@gmail.com|Vijaya Karnataka

ಜೋಳ ಖರೀದಿ ಕೇಂದ್ರಗಳಲ್ಲಿನಕಲಿ ಬೆಳೆ ಸಮೀಕ್ಷೆ ಮಾಡಿ, ಮೋಸ ಮಾಡುತ್ತಿದ್ದ ದಂಧೆಕೋರರಿಗೆ ಜಿಲ್ಲಾಡಳಿತದಿಂದ ಬಿಸಿ ಮುಟ್ಟಿದೆ. ಬೆಳೆ ಇಲ್ಲದ ಜಾಗದಲ್ಲೂ ಜೋಳ ಬೆಳೆದಂತೆ ನಮೂದಿಸಿ, ನಕಲಿ ಜಿಪಿಎಸ್ ಮಾಡಿಸಿ ನೋಂದಣಿ ಮಾಡಿಕೊಂಡವರ ವಿರುದ್ಧ ಎಫ್‌ಐಆರ್ ದಾಖಲಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಹೊರ ತಾಲೂಕಿನ ರೈತರು ಸಿಂಧನೂರಿನಲ್ಲಿನೋಂದಣಿ ಮಾಡಿಕೊಂಡಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ. ಇದರಿಂದ ನೈಜ ರೈತರಿಗೆ ಅನುಕೂಲವಾಗಲಿದೆ.

fake crop survey led by kallaba college in batam security measures initiated

ರೈತರಿಂದ, ಅಧಿಕಾರಿಗಳವರೆಗೆ ಎಫ್ ಐಆರ್ ಗೆ ಚಿಂತನೆ

ತೊಗರಿ, ಭತ್ತ, ಬೆಳೆಯೇ ಇಲ್ಲದ ಕಡೆಯೂ ಜೋಳವೆಂದು ನಮೂದು

ಹೊರ ತಾಲೂಕಿನಿಂದಲೂ ಸಿಂಧನೂರಿನಲ್ಲಿನೋಂದಣಿ

ನಕಲಿ ಬೆಳೆ ಸಮೀಕ್ಷೆ ಮಾಡಿದವರಿಗೆ ನಡುಕ!

ಚಂದ್ರಶೇಖರ ಬೆನ್ನೂರು ಸಿಂಧನೂರು

ಘ್ಕಿ್ಚha್ಞd್ಟ್ಠಚಿಛ್ಞ್ಞ್ಠ್ಟಿಃಜಞaಜ್ಝಿ.್ಚಟಞ

ರೈತರಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜೋಳ ಖರೀದಿ ಕೇಂದ್ರ ಆರಂಭಿಸಿ, ಸರಕಾರ ನೆರವು ನೀಡಲು ಮುಂದಾದರೆ, ವರ್ತಕರು, ದಲ್ಲಾಳಿಗಳು, ಪ್ರಭಾವಿಗಳು, ಬೆಳೆಯೇ ಇಲ್ಲದ ಕಡೆಗಳಲ್ಲಿಜೋಳ ಬೆಳೆಯಲಾಗಿದೆ ಎಂದು ನಕಲಿ ಜಿಪಿಎಸ್ ಮಾಡಿಸಿ, ನೋಂದಣಿ ಮಾಡಿದವರ ಹುಡುಕಾಟಕ್ಕೆ ಜಿಲ್ಲಾಡಳಿತ ಮುಂದಾಗಿರುವುದು ದಂಧೆಕೋರರಲ್ಲಿನಡುಕ ಶುರುವಾಗಿದೆ.

ಕಳೆದ ಮೂರು ವರ್ಷಗಳಿಂದಲೂ ಖರೀದಿ ಕೇಂದ್ರದಲ್ಲಿಜೋಳ ನೋಂದಣಿ, ಖರೀದಿ ಪ್ರಕ್ರಿಯೆ ವಿಚಾರವಾಗಿ ಮೇಲಧಿಕಾರಿಗಳು, ಅಧಿಕಾರಿಗಳು ನಿದ್ದೆಗೆಡುವಂತಾಗಿದೆ. ಕಂದಾಯ ಇಲಾಖೆಯ ಬೆಳೆ ದರ್ಶಕ ಆ್ಯಪ್ ನಲ್ಲಿಬೆಳೆ ಸಮೀಕ್ಷೆ ಸಮಯದಲ್ಲಿಹೊಲದಲ್ಲಿಇರುವ ಬೆಳೆ ನಮೂದು ಮಾಡದೆ, ಜೋಳವೆಂದು ನಮೂದು ಮಾಡಿ, ಖರೀದಿ ಕೇಂದ್ರದ ಲಾಭ ಗಿಟ್ಟಿಸುತ್ತಿರುವ ನಕಲಿ ರೈತರ ಹಾವಳಿಗೆ ಪೂರ್ಣ ಪ್ರಮಾಣದಲ್ಲಿಕಡಿವಾಣ ಬಿದ್ದಿಲ್ಲ. ರೈತರ ಹೆಸರಿನಲ್ಲಿದಂಧೆಕೋರರು ಪ್ರತಿ ವರ್ಷ ಕೋಟಿಗಟ್ಟಲೆ ಅವ್ಯವಹಾರ ನಡೆಸುತ್ತಿದ್ದು, ಅಧಿಕಾರಿಗಳ ಗಮನಕ್ಕೆ ಇದ್ದರೂ, ಅಸಹಾಯಕರಾಗಿದ್ದಾರೆ. ಆದರೆ, ಈ ಬಾರಿ ಆರಂಭದಿಂದಲೇ ನಕಲಿ ಬೆಳೆ ಸಮೀಕ್ಷೆ ಕುರಿತು ದೂರುಗಳು ಹೆಚ್ಚುತ್ತಿರುವ ಹಿನ್ನೆಲೆ, ಜಿಲ್ಲೆಯ ಎಲ್ಲತಾಲೂಕುಗಳಲ್ಲಿನಡೆದಿರುವ ಅನುಮಾನಾಸ್ಪದ ಬೆಳೆ ಸಮೀಕ್ಷೆ ಕುರಿತಂತೆ ಪರಿಶೀಲಿಸಿ, ವರದಿ ನೀಡಿದ ಬಳಿಕವೇ ಖರೀದಿ ಪ್ರಕ್ರಿಯೆ ಆರಂಭಿಸುವ ನಿರ್ಣಯಕ್ಕೆ ಅಧಿಕಾರಿಗಳು ಬಂದಿದ್ದಾರೆ.

ಎಫ್ ಐಆರ್ ಚಿಂತನೆ:

ಬೆಳೆ ಸಮೀಕ್ಷೆ ಸಂದರ್ಭದಲ್ಲಿಹೊಲದಲ್ಲಿಇದ್ದ ಬೆಳೆಯನ್ನು ನಮೂದಿಸದೆ, ಜೋಳದ ಬೆಳೆ ನಮೂದಿಸಲಾಗುತ್ತಿದೆ. ಬೆಳೆ ದರ್ಶಕದ ಫೋಟೋಗಳಲ್ಲಿಕೈಯಲ್ಲಿಜೋಳದ ದಂಟು ಹಿಡಿದಿರುವುದು, ಭತ್ತ ಇರುವುದು, ತೊಗರಿ ಇರುವುದು, ಕಸ ಇರುವುದು ಕಣ್ಣಾರೆ ಕಂಡರೂ, ಕೆಳಗಿನಿಂದ ಮೇಲ್ವಿಚಾರಣೆವರೆಗೂ ಅಧಿಕಾರಿಗಳು ಅದನ್ನು ಪತ್ತೆಹಚ್ಚಿ, ತಿರಸ್ಕರಿಸಿಲ್ಲ. ಹೀಗಾಗಿ ನಕಲಿ ಜಿಪಿಎಸ್ ಮಾಡಿದವರಿಗೂ ಖರೀದಿ ಕೇಂದ್ರದಲ್ಲಿನೋಂದಣಿಯ ಅವಕಾಶ ಸಿಕ್ಕಿದೆ. ನಕಲಿ ಜಿಪಿಎಸ್ ಮಾಡಿದ ಪಿಆರ್ ಒ, ಗ್ರಾಮ ಲೆಕ್ಕಾಧಿಕಾರಿ, ಅನುಮೋದನೆ ನೀಡಿದ ಅಧಿಕಾರಿ ಹಾಗೂ ರೈತರ ಮೇಲೆ ಎಫ್ ಐಆರ್ ದಾಖಲಿಸುವಂತೆ ಜಿಲ್ಲಾಧಿಕಾರಿ ಸ್ಪಷ್ಟ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ತಾಲೂಕಾಡಳಿತ ಈ ನಿಟ್ಟಿನಲ್ಲಿಸಜ್ಜಾಗಿದ್ದು, ನಕಲಿ ನೋಂದಣಿಗಳ ಹುಡುಕಾಟಕ್ಕೆ ಮುಂದಾಗಿದ್ದಾರೆ.

ಹೊರ ತಾಲೂಕಿನವರ ನೋಂದಣಿ:

ಸಿಂಧನೂರು ತಾಲೂಕಿನ ಖರೀದಿ ಕೇಂದ್ರಗಳಲ್ಲಿದೇವದುರ್ಗ, ಸಿರವಾರ, ಮಸ್ಕಿ, ಮಾನ್ವಿ, ರಾಯಚೂರು ತಾಲೂಕಿನಿಂದ ಬಂದು, ಆಯ್ದ ಖರೀದಿ ಕೇಂದ್ರಗಳಲ್ಲಿಜೋಳ ಮಾರಾಟಕ್ಕೆ ನೋಂದಣಿ ಮಾಡಿಕೊಳ್ಳಲಾಗಿದೆ. ಆಯಾ ತಾಲೂಕಿನಲ್ಲಿಯೇ ಖರೀದಿ ಕೇಂದ್ರ ಇದ್ದರೂ, ಇಲ್ಲಿಗೆ ಬಂದು ನೋಂದಣಿ ಮಾಡಿದ್ದು ಯಾಕೆ ಎಂಬ ಪ್ರಶ್ನೆ ಕಾಡುತ್ತಿದೆ. ತಾಲೂಕಿನಿಂದ ತಾಲೂಕಿಗೆ ಬೆಳೆಯನ್ನು ಹೊತ್ತು ಖರೀದಿ ಕೇಂದ್ರಕ್ಕೆ ಹೆಚ್ಚಿನ ಹಣ ವ್ಯಯ ಮಾಡಿ ತರಲು ಸಾಧ್ಯವೇ? ಜೋಳದ ಬೆಳೆಯೇ ತೀರಾ ಕಡಿಮೆ ಇರುವ ತಾಲೂಕಿನಲ್ಲಿಜೋಳದ ಬೆಳೆಗಾರರು ಹೇಗೆ ಬಂದರು? ಎಂಬ ಪ್ರಶ್ನೆ ಸಹಜವಾಗಿದೆ. ಈ ವಿಚಾರವಾಗಿ ಅಧಿಕಾರಿಗಳು ತಮ್ಮ ಮೇಲೆ ಬರಬಹುದಾದ ದೂರು ಹಾಗೂ ಅಕ್ರಮಕ್ಕೆ ಸಹಕಾರ ನೀಡಿದ್ದಾರೆ ಎಂಬ ಆರೋಪದಿಂದ ಪಾರಾಗಲು ತನಿಖೆಯ ಹಾದಿ ಹಿಡಿದಿದ್ದಾರೆ. ಇಂತಹ ಸಾವಿರಾರು ರೈತರ ನೋಂದಣಿ ರದ್ದುಪಡಿಸುವ ಮೂಲಕ ನೈಜ ರೈತರಿಗೆ ನ್ಯಾಯಕೊಡಿಸಲು ಅಧಿಕಾರಿಗಳು ಮುಂದಾಗಬೇಕಿದೆ. ‘‘ಸಿಂಧನೂರು ತಾಲೂಕಿನಲ್ಲಿಯೂ ಕೆಲವೊಂದು ಕಡೆಗಳಲ್ಲಿನಕಲಿ ಜಿಪಿಎಸ್ ಮಾಡಿದ್ದು, ಈ ಬಗ್ಗೆಯೂ ಪತ್ತೆಹಚ್ಚಬೇಕು,’’ ಎಂಬ ಒತ್ತಾಯ ಕೇಳಿ ಬಂದಿದೆ.

ನೈಜ ರೈತರಿಗೆ ಸಮಸ್ಯೆ:

ಪ್ರತಿ ವರ್ಷ ನಕಲಿ ಬೆಳೆ ಜಿಪಿಎಸ್ ಮಾಡುವುದು, ಜೋಳ ಖರೀದಿ ಕೇಂದ್ರಕ್ಕೆ ಮಾರಾಟ ಮಾಡುವ ಪರಿಣಾಮ ನೈಜ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ನೋಂದಣಿ ಪ್ರಕ್ರಿಯೆಯನ್ನು ನಿಗದಿತ ಸ್ಥಳದಲ್ಲಿಮಾಡದೆ, ಲ್ಯಾಪ್ ಟಾಪ್ ಸಮೇತ ನಕಲಿ ರೈತರು ಇರುವ ಕಡೆಗೆ ಹೋಗಿ ನೋಂದಣಿ ಮಾಡಿಕೊಳ್ಳಲಾಗಿದೆ. ಈ ಬಗ್ಗೆಯೂ ತನಿಖೆ ನಡೆದರೆ, ಖರೀದಿ ಕೇಂದ್ರದ ಅಧಿಕಾರಿಗಳು ಸಿಕ್ಕಿ ಬೀಳಲಿದ್ದಾರೆ.

---

ನೋಂದಣಿ ಚಿತ್ರಣ

ರಾಯಚೂರು ಜಿಲ್ಲೆಯಲ್ಲಿ2025-26ನೇ ಸಾಲಿನಲ್ಲಿಹಿಂಗಾರು ಮತ್ತು ಮುಂಗಾರು ಹಂಗಾಮಿನಲ್ಲಿಒಟ್ಟು 15.26 ಲಕ್ಷ ಕ್ವಿಂಟಾಲ… ಜೋಳ ಮಾರಾಟಕ್ಕೆ ನೋಂದಣಿ ಮಾಡಲಾಗಿದೆ. ಸಿಂಧನೂರು ತಾಲೂಕು ಒಂದರಲ್ಲಿಯೇ 16,430 ರೈತರು 8.72 ಲಕ್ಷ ಕ್ವಿಂಟಾಲ… ಜೋಳ ಮಾರಾಟಕ್ಕೆ ನೋಂದಣಿ ಮಾಡಿಸಿಕೊಂಡಿದ್ದಾರೆ.

---

ಸರಕಾರದ ಜೋಳ ಖರೀದಿ ಕೇಂದ್ರಗಳಲ್ಲಿ, ಜೋಳದ ಬೆಳೆ ಬೆಳೆಯದ ರೈತರು ಜೋಳ ಮಾರಾಟಕ್ಕೆ ನೋಂದಣಿ ಮಾಡಿಸಿರುವ ದೂರುಗಳು ಕೇಳಿಬಂದಿದೆ. ನಕಲಿ ಬೆಳೆ ಜಿಪಿಎಸ್ ಮಾಡಿದ ಪಿಆರ್ ಒ ಸೇರಿ ಸಂಬಂಧಿಸಿದ ಅಧಿಕಾರಿ, ರೈತರ ಮೇಲೆ ಎಫ್ ಐಆರ್ ದಾಖಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಬೇರೊಂದು ತಾಲೂಕಿನ ರೈತರು ಸಿಂಧನೂರಿನಲ್ಲಿನೋಂದಣಿ ಮಾಡಿದ್ದಾರೆ. ಜೋಳ ಖರೀದಿ ಪ್ರಕ್ರಿಯೆಯಲ್ಲಿಪಾರದರ್ಶಕತೆ ಕಾಪಾಡಲು ತನಿಖೆ ನಡೆದಿದೆ. ಅಕ್ರಮ ನೋಂದಣಿ ಇದ್ದರೆ ರದ್ದುಪಡಿಸಲಾಗುವುದು.

- ಅರುಣ್ ಎಚ್ .ದೇಸಾಯಿ ತಹಸೀಲ್ದಾರ್ , ಸಿಂಧನೂರು

---

ಆರ್ ಸಿಎಚ್ 04ಎಸ್ ಎನ್ ಡಿ1: ಜೋಳದ ಬೆಳೆ ಬೆಳೆಯದೇ ಇದ್ದರೂ ಮಸ್ಕಿ ತಾಲೂಕಿನ ರೈತರೊಬ್ಬರ ಭೂಮಿಯಲ್ಲಿಕೈಯಲ್ಲಿಜೋಳದ ದಂಟು ಹಿಡಿದು ಬೆಳೆ ಸಮೀಕ್ಷೆ ಮಾಡಿ, ಸಿಂಧನೂರು ತಾಲೂಕಿನ ಜೋಳ ಖರೀದಿ ಕೇಂದ್ರದಲ್ಲಿನೋಂದಣಿ ಮಾಡಲಾಗಿದೆ.