‘ಗಾಂಧಿ ಆತ್ಮಕಥೆ-2’ರ ಪತ್ತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

Contributed bysrikanth.g@timesgroup.com|Vijaya Karnataka

ಗಾಂಧೀಜಿಯವರ ಆತ್ಮಕಥೆಯ ಎರಡನೇ ಸಂಪುಟದ ದಾಖಲೆಗಳು ರಾಹುಲ್ ಗಾಂಧಿಯವರ ಬಳಿ 51 ಪೆಟ್ಟಿಗೆಗಳಲ್ಲಿವೆ ಎಂದು ಅರ್ಜಿದಾರರು ಹೇಳಿದ್ದರು. ಈ ದಾಖಲೆಗಳನ್ನು ಪತ್ತೆಹಚ್ಚಲು ನಿರ್ದೇಶನ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಅರ್ಜಿಯಲ್ಲಿ ಯಾವುದೇ ಹುರಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇತಿಹಾಸದ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ಅರ್ಜಿದಾರರ ಮನವಿಗೆ ಸ್ಪಷ್ಟ ಆದೇಶ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

gandhi autobiography 2 petition dismissed

ವಿಕ ಸುದ್ದಿಲೋಕ ಬೆಂಗಳೂರು ಮೋಹನದಾಸ್ ಕರಮಚಂದ ಗಾಂಧಿ ಅವರ ಆತ್ಮಕಥೆಯ ಸಂಪುಟ-2ರ ಕುರಿತ ದಾಖಲೆ ಗಳು ಲೋಕಸಭೆಯ ಪ್ರಧಿತಿಪಕ್ಷದ ನಾಯಕ ರಾಹುಲ್ ಗಾಂಧಿ ಬಳಿ 51 ಪೆಟ್ಟಿಗೆಗಳಲ್ಲಿಭದ್ರವಾಗಿದ್ದು, ಅವುಗಳನ್ನು ಪತ್ತೆಹಚ್ಚಲು ನಿರ್ದೇಶಿಸಬೇಕೆಂದು ಕೋರಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಜಾಗೃತ ಕರ್ನಾಟಕ-ಜಾಗೃತ ಭಾರತ ಸಂಘಟನೆ ಅಧ್ಯಕ್ಷ ಕೆ.ಎನ್ .ಮಂಜುನಾಥ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸಿಜೆ ವಿಭು ಬಖ್ರು ನೇತೃತ್ವದ ವಿಭಾಗೀಯ ಪೀಠ, ‘ಅರ್ಜಿಯಲ್ಲಿಯಾವುದೇ ಹುರಳಿಲ್ಲ’ ಎಂದು ಅಧಿಭಿಧಿಪ್ರಾಧಿಯಧಿಪಟ್ಟು ವಜಾಗೊಳಿಸಿದೆ. ‘‘ಅರ್ಜಿದಾರರು ಭಾರತದ ಇತಿಹಾ ಸದ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ತಮ್ಮ ಕೋರಿಕೆಯ ನಿಟ್ಟಿನಲ್ಲಿವಿವಿಧ ಅಧಿಕಾರಿಗಳಿಗೆ ಹಲವು ಪತ್ರಗಳನ್ನೂ ಬರೆದಿದ್ದಾಧಿರೆ. ಅರ್ಜಿ ದಾರರ ಪ್ರಕಾರ ಇತಿಹಾಸದಲ್ಲಿನ ಅಂತರಗಳ ಬಗ್ಗೆ ಉತ್ತರಿಸಬೇಕಾಗಿದೆ ಎಂಬ ಮನವಿ ಪರಿಗಣಿಸಿದಾಗ ಈ ಕುರಿತು ಯಾವುದೇ ಸ್ಪಷ್ಟ ಆದೇಶ ಹೊರಡಿಸ ಲಾಗದು,’ಧಿ’ ಎಂದು ಹೇಳಿದೆ. ಅಲ್ಲದೆ, ‘‘ಒಂದು ವೇಳೆ ಅರ್ಜಿದಾರರು ಇತಿಹಾಸದಲ್ಲಿಸಂಶೋಧನೆ ಮಾಡುವ ಯಾವುದೇ ಪಾಂಡಿತ್ಯಪೂರ್ಣ ಕೈಂಕರ್ಯಕ್ಕೆ ಮುಂದಾದರೆ ಅದಕ್ಕೆ ಯಾವುದೇ ಅಡಚಣೆ ಇರುವುದಿಲ್ಲ. ಆದರೂ ಅರ್ಜಿದಾರರ ಮನವಿ ಅಸ್ಪಷ್ಟವಾಗಿದ್ದು, ಅದಕ್ಕೆ ಯಾವುದೇ ಪರಿಹಾರ ನೀಡಲಾಗದು,’ಧಿ’ ಎಂದು ತಿಳಿಸಿದೆ. ಖುದ್ದು ವಾದ ಮಂಡಿಸಿದ ಅರ್ಜಿದಾರ ಕೆ.ಎನ್ .ಮಂಜುನಾಥ್ , ‘‘ಗಾಂಧೀಜಿ ಯವರ ಸದ್ಯದ ಆತ್ಮಚರಿತ್ರೆ 1925ರಲ್ಲಿಪ್ರಕಟವಾಗಿದ್ದು, ಅದರಲ್ಲಿಕೇವಲ ಅವರ ಬಾಲ್ಯ, ಯೌವ್ವನ ಮತ್ತು ಆಫ್ರಿಕಾ ಜೀವನದ ಭಾಗ ಮಾತ್ರ ಇದೆ. ತದನಂತರ ಅವರು ಬರೆದಿರುವ ಸಂಪುಟ-2ರ ಭಾಗವನ್ನು ಸಂಗ್ರಹಾಲ ಯದಿಂದ ತೆರವುಗೊಳಿಸ ಲಾಗಿದೆ,’’ ಎಂದರು.