ವಿಶೇಷಚೇತನ ಉದ್ಯೋಗಿಗಳ ಜತೆ ಎಚ್ ಡಿಕೆ ಸಂಕ್ರಾಂತಿ

Contributed bysrinivas.r@timesgroup.com|Vijaya Karnataka

ಬೆಂಗಳೂರು ಗ್ರಾಮಾಂತರ ಸಂಸದರೂ ಆದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬಿಡದಿಯ ತಮ್ಮ ನಿವಾಸದಲ್ಲಿ ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ನ 600ಕ್ಕೂ ಹೆಚ್ಚು ವಿಶೇಷಚೇತನ ಉದ್ಯೋಗಿಗಳು ಹಾಗೂ ಅವರ ಕುಟುಂಬದವರೊಂದಿಗೆ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು. ಏಳು ವರ್ಷಗಳಿಂದ ಈ ಸಂಪ್ರದಾಯ ಮುಂದುವರಿದಿದೆ. ಉದ್ಯೋಗಿಗಳೊಂದಿಗೆ ಸಮಯ ಕಳೆದ ಕುಮಾರಸ್ವಾಮಿ ಅವರು, ಅವರಿಗೆ ಸಹಾಯ ಮಾಡುವ ಅವಕಾಶ ಸಿಕ್ಕಿದ್ದು ತಮ್ಮ ಜೀವನಕ್ಕೆ ಸಾರ್ಥಕತೆ ತಂದಿದೆ ಎಂದು ಭಾವುಕರಾಗಿ ನುಡಿದರು.

hdk celebrates sankranti with specially abled employees

ಬಿಡದಿ (ರಾಮನಗರ): ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್ .ಡಿ.ಕುಮಾರಸ್ವಾಮಿ ಈ ಬಾರಿಯೂ ಸಹ ಬೆಸ್ಕಾಂ ಸೇರಿದಂತೆ ಕೆಪಿಟಿಸಿಎಲ್ ನ ನಾನಾ ವಿಭಾಗಗಳಲ್ಲಿಕರ್ತವ್ಯ ನಿರ್ವ ಹಿಸುತ್ತಿರುವ 600ಕ್ಕೂ ಹೆಚ್ಚು ವಿಶೇಷಚೇತನ ಉದ್ಯೋಗಿಗಳ ಜತೆ ಗುರುವಾರ ಸಂಕ್ರಾಂತಿ ಹಬ್ಬ ಆಚರಿಸಿದರು. ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿಯ ತಮ್ಮ ತೋಟದ ಮನೆಯಲ್ಲಿವಿಶೇಷಚೇತನ ಉದ್ಯೋಗಿಗಳ ಕುಟುಂಬದ ಜತೆ ಹಬ್ಬ ಆಚರಿಸಿ ಭಾವುಕರಾದರು. ಏಳು ವರ್ಷ ದಿಂದ ತಮ್ಮಲ್ಲಿಗೆ ಬಂದು ಸಂಕ್ರಾಂತಿ ಆಚರಿ ಸುತ್ತಿರುವ ಎಲ್ಲವಿಶೇಷಚೇತನ ಉದ್ಯೋಗಿ ಗಳ ಕುಟುಂಬ ಸದಸ್ಯರನ್ನು ಪ್ರೀತಿಯಿಂದ ಬರಮಾಡಿಕೊಂಡರು. ಅವರೊಂದಿಗೆ ಸಾಕಷ್ಟು ಸಮಯ ಕಳೆದ ಕುಮಾರಸ್ವಾಮಿ, ಎಳ್ಳುಬೆಲ್ಲಸೇವಿಸಿ ಸಂತಸ ವ್ಯಕ್ತಪಡಿಸಿದರು. ವಿಶೇಷವಾಗಿ ಮಕ್ಕಳ ಜತೆ ಸಮಯ ಕಳೆದು ಖುಷಿಪಟ್ಟರು. ಬಳಿಕ ಮಾತನಾಡಿದ ಸಚಿವ ಕುಮಾರ ಸ್ವಾಮಿ, ನಿಮ್ಮನ್ನು ನೋಡುತ್ತಿದ್ದರೆ ನನ್ನ ಹೃದಯ ತುಂಬಿ ಬರುತ್ತಿದೆ. ದೇವರು ಕೊಟ್ಟ ಸಣ್ಣ ಅವಕಾಶದಲ್ಲಿನಿಮಗೆ ಸಹಾಯ ಮಾಡುವ ಅವಕಾಶ ಸಿಕ್ಕಿತು. ಅದನ್ನೇ ನೀವೆಲ್ಲರೂ ಹೃದಯದಲ್ಲಿಇಟ್ಟುಕೊಂಡು ನನ್ನ ಮೇಲೆ ಪ್ರೀತಿ, ವಾತ್ಸಲ್ಯ ತೋರು ತ್ತಿರುವುದು ನನ್ನ ಜೀವನಕ್ಕೆ ಸಾರ್ಥಕತೆ ತಂದಿದೆ ಎಂದು ಹೇಳಿದರು.