ವಿಕ ಸುದ್ದಿಲೋಕ ಸುಳ್ಯ
ಹಿಂದು ಸಮಾಜದಲ್ಲಿ ಏಕತೆ , ಸಾಮರಸ್ಯ, ಸಾಮಾಜಿಕ ಪರಿವರ್ತನೆ, ಧಾರ್ಮಿಕ ಮತ್ತು ರಾಷ್ಟಿ್ರೕಯ ಪ್ರಜ್ಞೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಸುಳ್ಯ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ವತಿಯಿಂದ ಜ.18ರಿಂದ ಫೆ.2ರ ತನಕ 14 ಮಂಡಲಗಳಲ್ಲಿ ಬೃಹತ್ ಹಿಂದೂ ಸಂಗಮ ಮತ್ತು ಶೋಭಾಯಾತ್ರೆ ನಡೆಯಲಿದೆ ಎಂದು ಹಿಂದೂ ಸಂಗಮ ಆಯೋಜನಾ ಸಮಿತಿಯ ಅಧ್ಯಕ್ಷ ಎಂ.ಬಿ. ಸದಾಶಿವ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ 100ನೇ ವರ್ಷದ ಅಂಗವಾಗಿ ಕಾರ ್ಯಕ್ರಮ ಆಯೋಜಿಸಲಾಗಿದೆ ಎಂದರು.
ಹಿಂದೂ ಸಂಗಮ ಆಯೋಜನಾ ಸಮಿತಿಯ ಕಾರ ್ಯದರ್ಶಿ ಸುದರ್ಶನ ಸೂರ್ತಿಲ ಮಾತನಾಡಿ, ಸುಳ್ಯ ತಾಲೂಕಿನ ಸರಹದ್ದಿನಲ್ಲಿರುವ ಕೊಡಗಿನ ಹಾಗೂ ಕಡಬ ತಾಲೂಕಿನ ಕೆಲವು ಗ್ರಾಮಗಳು ಸೇರಿದಂತೆ ಒಟ್ಟು 44 ಗ್ರಾಮಗಳು ಒಳಗೊಂಡ 14 ಮಂಡಲಗಳಲ್ಲಿಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ.
ಜ.18ರಂದು ಬಾಳಿಲದಲ್ಲಿ ಸಂಜೆ 3.30ರಿಂದ ಸಾಂಸ್ಕೃತಿಕ ಮತ್ತು ಸಭಾ ಕಾರ ್ಯಕ್ರಮ, ಜ.18ರಂದು ಗುತ್ತಿಗಾರಿನಲ್ಲಿ ಸಂಜೆ 3.30ರಿಂದ ಶೋಭಾಯಾತ್ರೆ ಮತ್ತು ಸಭಾ ಕಾರ ್ಯಕ್ರಮ, ಜ.24ರಂದು ಸಂಜೆ 3ರಿಂದ ಸುಬ್ರಹ್ಮಣ್ಯ ಮಠದ ಆವರಣದಲ್ಲಿಸಭಾ ಕಾರ್ಯಕ್ರಮ ಮತ್ತು ಪೇಟೆಯಲ್ಲಿಶೋಭಾಯಾತ್ರೆ, ಜ.25ರಂದು ಪೆರಾಜೆಯಲ್ಲಿಸಂಜೆ 3ರಿಂದ ಶೋಭಾಯಾತ್ರೆ, ಜ.25ರಂದು ಅಜ್ಜಾವರದ ಮೇನಾಲದಲ್ಲಿಮಧ್ಯಾಹ್ನ 2.30ರಿಂದ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ, ಜ.25ರಂದು ಜಾಲ್ಸೂರು ಪೇಟೆಯಲ್ಲಿಸಂಜೆ 3.30ರಿಂದ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ,ಜ.25ರಂದು ಪಂಜದಲ್ಲಿಸಂಜೆ 3ರಿಂದ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ, ಜ. 25ರಂದು ದೊಡ್ಡತೋಟದ ಎಲಿಮಲೆಯಲ್ಲಿಮಧ್ಯಾಹ್ನ 2.30ರಿಂದ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ, ಜ.25ರಂದು ಸುಳ್ಯ ನಗರದ ಪ್ರಭು ಮೈದಾನದಲ್ಲಿಸಂಜೆ 3.30ರಿಂದ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ, ಫೆ.1ರಂದು ಸಂಪಾಜೆಯ ಕಲ್ಲುಗುಂಡಿಯಲ್ಲಿಮಧ್ಯಾಹ್ನ 2.30ರಿಂದ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ, ಫೆ.1ರಂದು ಐವರ್ನಾಡಿನಲ್ಲಿಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ, ಫೆ.1ರಂದು ಬೆಳ್ಳಾರೆಯಲ್ಲಿಸಂಜೆ 3.30ರಿಂದ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ, ಫೆ.1ರಂದು ಎಣ್ಮೂರಿನ ಮುರುಳ್ಯ ಮೈದಾನದಲ್ಲಿಸಂಜೆ 3ರಿಂದ ಶೋಭಾಯಾತ್ರೆ ಮತ್ತು ಸಭಾ ಕಾರ ್ಯಕ್ರಮ, ಫೆ.2ರಂದು ಹರಿಹರದ ಬಾಳುಗೋಡಿನಲ್ಲಿ ಸಂಜೆ 3ರಿಂದ ಕಾರ ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.
ಹಿಂದೂ ಸಂಗಮದ ಗೌರವ ಸಲಹೆಗಾರ ಡಾ.ಗಿರೀಶ್ ಭಾರದ್ವಾಜ್ , ಡಾ.ಯಶೋಧ ರಾಮಚಂದ್ರ, ಹಿಂದೂ ಸಂಗಮ ಆಯೋಜನಾ ಸಮಿತಿಯ ತಾಲೂಕು ಸಂಚಾಲಕ ಡಾ. ಚಂದ್ರಶೇಖರ ನಲ್ಲೂರಾಯ, ಆರೆಸ್ಸೆಸ್ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ ಉಪಸ್ಥಿತರಿದ್ದರು.

