ಧರ್ಮ ಮಾರ್ಗದಲ್ಲಿಸಾಗಿದರೆ ಮುಕ್ತಿ

Contributed bymmulge2@gmail.com|Vijaya Karnataka

ಮುತ್ತಾತ್ರ್ಯನ ಬಬಲಾದದ ಚನ್ನವೀರ ಮಠದಲ್ಲಿ ಸಿದ್ಧಬಸವೇಶ್ವರರ 71 ನೇ ಜಾತ್ರಾ ಮಹೋತ್ಸವ ಜರುಗಿತು. ಧಾರ್ಮಿಕ ಸಭೆಯಲ್ಲಿ ಶಾಸಕ ಬಸವರಾಜ ಮತ್ತಿಮೂಡ ಮಾತನಾಡಿ, ಧರ್ಮಮಾರ್ಗದಲ್ಲಿ ಸಾಗಿದರೆ ಜೀವನ ಮುಕ್ತಿಯಾಗುತ್ತದೆ ಎಂದರು. ಮಠದ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ತಿಳಿಸಿದರು. ವಿವಿಧ ಗಣ್ಯರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕುಸ್ತಿ ಸ್ಪರ್ಧೆಗಳು ನಡೆದವು.

significance of the religious path at the 71st festival

ಚಿತ್ರ15ಕೆಎಂಪಿ 2

ಕಮಲಾಪುರ ತಾಲೂಕಿನ ಮುತ್ತಾತ್ರ್ಯನ ಬಬಲಾದದ ಚನ್ನವೀರ ಮಠದಲ್ಲಿಬುಧವಾರ ಸಂಜೆ ನಡೆದ ಸಿದ್ಧಬಸವೇಶ್ವರರ 71 ನೇ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆಯ ಕಾರ್ಯಕ್ರಮವನ್ನು ಗುರುಪಾದಲಿಂಗ ಮಹಾಸ್ವಾಮೀಜಿ ಉದ್ಘಾಟಿಸಿದರು.ಎಂಎಲ್ ಸಿ ಬಿ.ಜಿ ಪಾಟೀಲ್ , ಶರಣಬಸಪ್ಪ ಪಾಟೀಲ್ ಅಷ್ಟಗಿ ಸೇರಿ ಅನೇಕರಿದ್ದರು.

****

ಮುತ್ತಾತ್ರ್ಯನ ಬಬಲಾದದ ಸಿದ್ಧಬಸವೇಶ್ವರರ 71 ನೇ ಜಾತ್ರಾ ಮಹೋತ್ಸವ ಧಾರ್ಮಿಕ ಸಭೆ

ಧರ್ಮ ಮಾರ್ಗದಲ್ಲಿಸಾಗಿದರೆ ಮುಕ್ತಿ

ವಿಕ ಸುದ್ದಿಲೋಕ ಕಮಲಾಪುರ

ಇಂದು ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿಮೌಲ್ಯಾಧಾರಿತ ಸಂಸ್ಕಾರ ಕುಸಿಯುತ್ತಿದೆ. ಹೀಗಾಗಿ ಪ್ರತಿಯೊಬ್ಬರು ಇಂತಹ ಪುಣ್ಯ ಕ್ಷೇತ್ರಗಳಿಗೆ ತೆರಳಿ ಧರ್ಮಮಾರ್ಗದಲ್ಲಿಸಾಗಿದರೇ ತಮ್ಮ ಜೀವನ ಮುಕ್ತಿಯಾಗುತ್ತದೆ ಎಂದು ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಹೇಳಿದರು.

ತಾಲೂಕಿನ ಮುತ್ತಾತ್ರ್ಯನ ಬಬಲಾದದ ಚನ್ನವೀರ ಮಠದ ಗುರುಪಾದಲಿಂಗ ಮಹಾಸ್ವಾಮೀಜಿ ನೇತೃತ್ವದಲ್ಲಿಬುಧವಾರ ಸಂಜೆ ನಡೆದ ಸಿದ್ಧಬಸವೇಶ್ವರರ 71 ನೇ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿಮಾತನಾಡಿದರು. ‘‘ಸರಕಾರದಲ್ಲಿಅನುದಾನವಿಲ್ಲ. ಮಠದ ಅಭಿವೃದ್ಧಿಗಾಗಿ ನನ್ನ ಅವಧಿ ಯಲ್ಲಿಹಿಂದೆ ಸಾಕಷ್ಟು ಕೆಲಸ ಮಾಡಿದ್ದೇನೆ.’’ ಈಗ ರಸ್ತೆ ಅಭಿವೃದ್ಧಿ ಸೇರಿ ದೇವಾಲಯ ಅಭಿವೃದ್ಧಿಗಾಗಿ ಕೋಟಿಗೂ ಅಧಿಕ ಹಣ ನೀಡಿ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದರು.

ಕಾಂಗ್ರೆಸ್ ಮುಖಂಡ ನಿಲಕಂಠರಾವ ಮೂಲಗೆ ಮಾತನಾಡಿ, ‘‘ಸರಕಾರದಲ್ಲಿಅನುದಾನವಿಲ್ಲಎಂದು ಶಾಸಕರು ಹೇಳುತ್ತಾರೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ತಲಾ ಒಬ್ಬ ಶಾಸಕರಿಗೆ 8 ಕೋಟಿ ರೂ.ಬರುತ್ತದೆ. ಶಿಕ್ಷಣಕ್ಕಾಗಿ 4 ಕೋಟಿ ನೀಡಿದರೆ ಇನ್ನೂ 4 ಕೋಟಿ ರೂ. ಮಠಗಳು ಸೇರಿ ವಿವಿಧ ಯೋಜನೆಯಡಿ ಹಣ ನೀಡಬಹುದು.’’ ನಾನು ಮಠದ ಅಭಿವೃದ್ಧಿಗೆ ಸುಮಾರು 1 ಕೋಟಿ ರೂ. ಹಣ ಕೋಡುತ್ತೇನೆ ಎಂದರು.

ಈ ಸಮಾರಂಭದಲ್ಲಿಚನ್ನವೀರ ಮಠದ ಗುರುಪಾದಲಿಂಗ ಮಹಾಸ್ವಾಮೀಜಿ , ಪಾಳಾದ ಕಟ್ಟಿಮನಿ ಸಂಸ್ಥಾನದ ಗುರುಮೂರ್ತಿ ಶಿವಾಚಾರ್ಯರು, ಫಿರೋಜಾಬಾದನ ಗುರು ಬಸವ ಮಹಾಸ್ವಾಮಿ,ಚವಡಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು, ಮಕ್ತಂಪುರದ ಅಭಿನವ ಶಿವಲಿಂಗ ಮಹಾಸ್ವಾಮೀಜಿ, ತಿಂಥಣಿ ಸಂಸ್ಥಾನದ ಶಿವಪ್ರಸಾದ ದೇವರು, ಕೋಹಿನೂರ ಪಾಡನ ಬಿಸ್ಮಿಲ್ಲಾಶಾಹ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಶರಣಬಸಪ್ಪ ಪಾಟೀಲ್ ಅಷ್ಠಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಜಗನ್ನಾಥ ಹೊಳ್ಕರ್ , ಬಿಜೆಪಿ ಮುಖಂಡ ಶಿವಕುಮಾರ ಪಸಾರ, ಗುರು ಮಾಟೂರ, ರಾಜಕುಮಾರ.ಎಚ್ .ಕಪನೂರ, ಅಂಬಲಗಾ ಗ್ರಾಪಂ ಅಧ್ಯಕ್ಷ ತಾಜುದ್ದೀನ್ ಪಟೇಲ್ ಕಲಕುಟಗಿ, ಮಲ್ಲಿಕಾರ್ಜುನ ಮರತೂರ ಸೇರಿ ಅನೇಕರಿದ್ದರು. ನಂತರ ವಿವಿಧ ತಂಡಗಳಿಂದ ಭಜನಾ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ನಂತರ ಗುರುವಾರ ಬೆಳಗ್ಗೆ 9ರಿಂದ 11 ಮತ್ತು ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಜಂಗಿ ಪೈಲ್ವಾನರಿಂದ ಕುಸ್ತಿಗಳು ನಡೆದವು.

***ಕೋಟ್ ...

ಜಿಲ್ಲೆಯಲ್ಲಿಬಬಲಾದದ ಮಠ ಪ್ರಸಿದ್ಧವಾಗಿದೆ, ಅನ್ನ, ದಾಸೋಹ, ಶಿಕ್ಷಣ, ಕೃಷಿಕಾರ್ಯಕ್ಕೆ ಈ ಮಠ ಜಿಲ್ಲಾವ್ಯಾಪ್ತಿಯಲ್ಲಿಉತ್ತಮ ಹೆಸರು ಪಡೆದಿದೆ. ಪ್ರತಿಯೊಬ್ಬರು ಈ ಮಠದ ಗುರುಗಳ ಮಾರ್ಗದಲ್ಲಿಸಾಗಿದರೇ ತಮ್ಮ ಬದುಕು ಬದಲಾವಣೆಯಾಗುತ್ತದೆ.ತಾವು ಸಹ ನನ್ನ ವಯಕ್ತಿಕವಾಗಿ 1.11 ಲಕ್ಷ ರೂ. ಹಣ ಮಠದ ಅನ್ನ ದಾಸೋಹಕ್ಕೆ ನೀಡುತ್ತೇನೆ.

- ಬಿ.ಜಿ.ಪಾಟೀಲ್ , ವಿಧಾನ ಪರಿಷತ್ ಸದಸ್ಯರು.