1 16ಜಿಕೆಎಲ…2 ವೆಂಕಟಪ್ಪ ಅವಂಗಪೂರ
ಅವಂಗಪೂರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ
ಗುರುಮಠಕಲ…: ಯಾದಗಿರಿ ಜಿಲ್ಲಾ ಭಾರತೀಯ ಜನತಾ ಪರ್ಟಿಯ ಯಾದಗಿರಿ ಜಿಲ್ಲಾ ಉಪಾಧ್ಯಕ್ಷರನ್ನಾಗಿ ವೆಂಕಟಪ್ಪ ಅವಂಗಪೂರ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ. ವೆಂಕಟಪ್ಪ ಅವಂಗಪೂರ ಅವರು ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸಿ ,ತಳಮಟ್ಟದಲ್ಲಿಪಕ್ಷದ ಸಂಘಟನೆ ಮತ್ತಷ್ಟು ಬಲಿಷ್ಠಗೊಳಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸ ವ್ಯಕ್ತಪಡಿಸಲಾಗಿದೆ. ಮುಂಬರುವ ರಾಜಕೀಯ ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಪಕ್ಷಕ್ಕೆ ಹೊಸ ಶಕ್ತಿ ತುಂಬುವ ಮೂಲಕ ಬಿಜೆಪಿ ವರ್ಚಸ್ಸನ್ನು ಹೆಚ್ಚಿಸುವಲ್ಲಿನಿರಂತರ ಶ್ರಮಿಸಬೇಕು ಎಂದು ಆದೇಶ ಪತ್ರದಲ್ಲಿತಿಳಿಸಲಾಗಿದೆ.

