ವಿಕ ಸುದ್ದಿಲೋಕ ಬಾವನಸೌಂದತ್ತಿ ಗ್ರಾಮದ ಅಭಿವೃದ್ಧಿಗಾಗಿ ಪಕ್ಷಭೇದ, ವೈಮನಸ್ಸು ಮರೆತು ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಿದ್ದಕ್ಕೆ ಇಂದು ಮಾದರಿ ಗ್ರಾಮ ಪಂಚಾಯಿತಿ ಆಗಿದೆ ಎಂದು ಯುವ ಮುಖಂಡ ಹಾಗೂ ಗ್ರಾಪಂ ಸದಸ್ಯ ಧೂಳಗೌಡ ಪಾಟೀಲ ಹೇಳಿದರು. ಸ್ಥಳೀಯ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಆಡಳಿತಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿಎಲ್ಲರನ್ನು ಸನ್ಮಾನಿಸಿ ಮಾತನಾಡಿದ ಅವರು, ‘‘ಗ್ರಾಪಂಗೆ ಚುನಾವಣೆ ನಡೆಸದೆ, ಅವಿರೋಧ ಆಯ್ಕೆ ಮಾಡಲಾಗಿದೆ. ಇರೊಂದಿಗೆ ಗ್ರಾಮದಲ್ಲಿಕೋಟ್ಯಂತರ ವೆಚ್ಚದ ಅಭಿವೃದ್ಧಿ ಆಗಿದೆ. ದ್ವೇಷ ಮರೆತರೆ ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ನಮ್ಮ ಗ್ರಾಪಂ ನಿದರ್ಶನವಾಗಿದೆ,’’ ಎಂದರು. ಗ್ರಾಪಂ ಅಧ್ಯಕ್ಷ ರಾಮಚಂದ್ರ ಕಾಟೆ, ಉಪಾಧ್ಯಕ್ಷ ಅಜಾದ್ ತಾಶಿವಾಲೆ, ಅನಿಲ ಹಂಜೆ, ಪಿಡಿಒ ಸಂಗಮೇಶ ನ್ಯಾಮಗೌಡ, ಸತ್ಯಪ್ಪ ಭೀಷ್ಠೆ, ಅಜಿತ್ ಖೇಮಲಾಪುರೆ, ದಿನಕರ ಕಾಟೆ, ದಶರಥ ಭೂವಿ, ದಶರಥ ಕಾಟೆ, ರಾಜು ಖಾಂಡೇಕರ, ಜಯಶ್ರೀ ಅರುಣ ಶಿಂಧೆ, ಸಂತೋಷ ಮಂಗಸೂಳೆ, ಅಭಿಷೇಕ ಮಗದುಮ್ಮ, ಶೋಭಾ ಪಾಟೀಲ, ರಾಜಶ್ರೀ ಚೌಗಲಾ, ಶೋಭಾ ಕಾಂಬಳೆ, ಸುರೇಖಾ ಜನಾಜ, ಕೇದಾರಿ ಡೊಂಗರೆ ಮತ್ತಿತರರಿದ್ದರು.

