ಧೂಳುಮಯ ರಸ್ತೆಯಿಂದ ನಿವಾಸಿಗಳು ಹೈರಾಣ (ಫೋಟೊಗಳನ್ನು ಅಟ್ಯಾಚ್ ಮಾಡಲಾಗಿದೆ)

Contributed bypunyavathi.hp@timesgroup.com|Vijaya Karnataka

ಹೆಬ್ಬಾಳ ಕ್ಷೇತ್ರದ ನಾಗೇನಹಳ್ಳಿ ರಸ್ತೆ ಸೇರಿದಂತೆ ಹಲವೆಡೆ ರಸ್ತೆ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಇದರಿಂದಾಗಿ ಸಾರ್ವಜನಿಕರು ಧೂಳು ಮತ್ತು ಅನಾನುಕೂಲದಿಂದ ತೊಂದರೆ ಅನುಭವಿಸುತ್ತಿದ್ದಾರೆ. ವ್ಯಾಪಾರಸ್ಥರು ಕೂಡ ವ್ಯಾಪಾರದಲ್ಲಿ ಕುಸಿತ ಕಂಡಿರುವುದಾಗಿ ತಿಳಿಸಿದ್ದಾರೆ. ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ, ಧೂಳು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಬೆಂಗಳೂರು ಜಲಮಂಡಳಿ ಒಂದು ತಿಂಗಳಲ್ಲಿ ಪೈಪ್‌ಲೈನ್‌ ಅಳವಡಿಕೆ ಮುಗಿಸಿ, ಬಳಿಕ ರಸ್ತೆ ನಿರ್ಮಾಣ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದೆ.

hebbal road work residents worries and impact on business

* ಕಾಮಗಾರಿಗೆ ವೇಗ ನೀಡಲು, ಸುರಕ್ಷತಾ ಕ್ರಮ ಕೈಗೊಳ್ಳಲು ಒತ್ತಾಯ

ಎಚ್ .ಪಿ. ಪುಣ್ಯವತಿ ಬೆಂಗಳೂರು

p್ಠ್ಞyavaಠಿhಜಿ.hpಃಠಿಜಿಞಛಿsಟ್ಛಜ್ಞಿdಜಿa.್ಚಟಞ

ನಾಗೇನಹಳ್ಳಿ ರಸ್ತೆಸೇರಿದಂತೆ ಹೆಬ್ಬಾಳ ಕ್ಷೇತ್ರದ ವಿವಿಧೆಡೆ ರಸ್ತೆ ಕಾಮಗಾರಿ ಆಮೆಗತಿಯಲ್ಲಿನಡೆಯುತ್ತಿದ್ದು, ನಾಗರಿಕರು ಹೈರಾಣಾಗುವಂತಾಗಿದೆ.

ಹೆಬ್ಬಾಳ ಮೇಲ್ಸೇಧಿತುವೆ ಬಧಿಳಿಯ ಮಸೀದಿಯಿಂದ ನಾಗೇನಹಳ್ಳಿ ಮಾರ್ಗವಾಗಿ ಮೈತ್ರಿ ಬಜಾರ್ ವರೆಗೆ ರಸ್ತೆ ಕಾಮಗಾರಿ ಸುಮಾರು ಎರಡು ತಿಂಗಳಿಂದ ನಡೆಯುತ್ತಿದೆ. ಆಗೊಮ್ಮೆ ಈಗೊಮ್ಮೆ ಜೆಸಿಬಿ ಬಂದು ರಸ್ತೆ ಅಗೆದು ಬಳಿಕ ಬೇರೆ ರಸ್ತೆಗೆ ತೆರಳುತ್ತದೆ.

ನಾಗೇನಹಳ್ಳಿ ರಸ್ತೆ ಮೂಲಕ ಆರ್ .ಟಿ.ನಗರ, ಕೆ.ಆರ್ .ಪುರ ಸಂಪರ್ಕ ರಸ್ತೆಗಳತ್ತ ತೆರಳಬಹುದಾಗಿರುವುದರಿಂದ ಈ ಮಾರ್ಗದಲ್ಲಿವಾಹನ ದಟ್ಟಣೆ ಇರುತ್ತದೆ. ಹೀಗಿದ್ದರೂ ಕಾಮಗಾರಿ ಶೀಘ್ರ ಪೂರ್ಣಗೊಳಿಸುವ ನಿಟ್ಟಿನಲ್ಲಿಗಮನಹರಿಸಿಲ್ಲ.

ಹೆಬ್ಬಾಳ ಕ್ಷೇತ್ರದ ಹೆಚ್ಚಿನ ರಸ್ತೆಗಳು ಕಿರಿದಾಗಿವೆ. ಡ್ರೈನೇಜ್ ಪೈಪ್ ಅಳವಡಿಸಲು ತಿಂಗಳುಗಟ್ಟಲೆ ಕಾಮಗಾರಿ ನಡೆಸಲಾಗುತ್ತಿದೆ. ಇಧಿದಧಿರಿಂದ ಜಧಿನರು ನಡೆದಾಡಲೂ ಆಗುತ್ತಿಲ್ಲ. ಧೂಳು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಹೀಗಾಗಿ ಸ್ಥಳೀಯರು ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ.

‘‘ವಾಹನಗಳು ಸಂಚರಿಸುವುದರಿಂದ ಧೂಳು ಮುಗಿಲೆತ್ತರಕ್ಕೆ ಚಿಮ್ಮುತ್ತಿದೆ. ಇದರಿಂದ ಮನೆ ಮುಂದೆ ಗುಡಿಸಿ, ತೊಳೆದರೂ, ಅರ್ಧ ಗಂಟೆಯಲ್ಲೇ ಮತ್ತೆ ಧೂಳು ತುಂಬಿಕೊಳ್ಳುತ್ತದೆ. ಮನೆ ಮುಂದೆ ನಿಲ್ಲಿಸುವ ವಾಹನಗಳು ಕ್ಷಣ ಮಾತ್ರದಲ್ಲಿಧೂಳಿನಿಂದ ಆವೃತ್ತವಾಗುತ್ತವೆ. ಬಟ್ಟೆ ಒಗೆದರೆ ಒಣಗುವಷ್ಟರಲ್ಲಿಧೂಳೆಲ್ಲಾಬಟ್ಟೆಗಳ ಮೇಲೆಯೇ ಬಂದು ಕೂರುತ್ತದೆ. ಆದಷ್ಟು ಬೇಗ ಕೆಲಸ ಮುಗಿಸಲಿ,’’ ಎಂದು ನಾಗೇನಹಳ್ಳಿ ರಸ್ತೆಯ ನಿವಾಸಿ ಲಕ್ಷ್ಮೇದೇವಿ ಒತ್ತಾಯಿಸಿದರು.

ವ್ಯಾಪಾರಕ್ಕೆ ಹೊಡೆತ :

‘‘ಚಿಕನ್ , ಮಟನ್ ಕತ್ತರಿಸಿ ಇಟ್ಟರೆ ಅದರ ತುಂಬಾ ಮಣ್ಣು ಮೆತ್ತಿಕೊಳ್ಳುತ್ತಿದೆ. ಕಳೆದ ಒಂದೂವರೆ ತಿಂಗಳಿಂದ ವ್ಯಾಪಾರವೇ ಬಂದ್ ಆಗಿದೆ. ಸಾರ್ವಜನಿಕರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತಿದೆ. ಬಡವರ ವ್ಯಾಪಾರಕ್ಕೆ ತೊಂದರೆ ನೀಡುವುದು ಸರಿಯಲ್ಲ,’’ ಎಂದು ನಾಗೇನಹಳ್ಳಿ ರಸ್ತೆತ ಮಟನ್ ಸ್ಟಾಲ್ ನ ಮಾಲೀಕ ಜಮೀರ್ ಪಾಷಾ ಬೇಸರ ವ್ಯಕ್ತಪಡಿಸಿದರು.

------- ಕೋಟ್

ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಮಳಿಗೆಯ ತುಂಬಾ ಧೂಳು ತುಂಬಿಕೊಳ್ಳುತ್ತಿದೆ. ಕಳೆದ ಒಂದೂವರೆ ತಿಂಗಳಿಂದ ವ್ಯಾಪಾರ ಅರ್ಧದಷ್ಟು ಕುಸಿತ ಕಂಡಿದೆ. ಈಗ ಮದುವೆ ಸೀಸನ್ ಬಂದಿದ್ದು, ಬ್ಯುಸಿನೆಸ್ ನಡೆಯುವ ಸಮಯದಲ್ಲೇ ಜನರಿಲ್ಲದಂತಾಗಿದೆ. ಧೂಳು ಏಳದಂತೆ ರಸ್ತೆಗಳಿಗೆ ನೀರು ಸಿಂಪಡಿಸಬೇಕು.

-ಪುಷ್ಪಾ, ರಾಜು ಬೊಟಿಕ್ , ಶಿವಶಂಕರ ಬ್ಲಾಕ್

-----

ಹೆಬ್ಬಾಳ ಫ್ಲೈಓವರ್ ಬಳಿಯಿರುವ ಪಿಳೇಕಮ್ಮ ದೇವಸ್ಥಾನದಿಂದ ದಿಣ್ಣೂರು ಮುಖ್ಯರಸ್ತೆಯವರೆಗೆ ಸುಮಾರು 3.2 ಕಿ.ಮೀ. ದೂರದವರೆಗೆ ಕುಡಿಯುವ ನೀರು ಮತ್ತು ಒಳಚರಂಡಿ ಪೈಪ್ ಲೈನ್ ಅಳವಡಿಕೆ ಕಾಮಗಾರಿ ಕೈಗೊಳ್ಳಲಾಗಿದೆ. ಸುಮಾರು ಒಂದು ತಿಂಗಳಲ್ಲಿಪೈಪ್ ಲೈನ್ ಅಳವಡಿಕೆ ಕಾರ್ಯ ಮುಗಿಯುತ್ತದೆ. ಅದಾದ ಬಳಿಕ ಪಾಧಿಲಿಕೆ ಬ್ಲ್ಯಾಕ್ ಟಾಪಿಂಗ್ ಕಾಮಧಿಗಾರಿ ಕೈಗೊಳ್ಳಧಿಲಿಧಿದೆ.

- ಕಲ್ಪನಾ, ಎಇಇ, ಬೆಂಗಳೂರು ಜಲಮಂಡಳಿ

***

ಫೋಟೊ :

ರಸ್ತೆ ಅಗೆತದಿಂದ ನಾಗೇನಹಳ್ಳಿ ರಸ್ತೆಯಲ್ಲಿಸಂಚರಿಸುವುದೇ ಕಷ್ಟವಾಗಿದೆ.