ಬೆಳಗಾವಿ: ನಗರದ ಹೋಟೆಲ್ ವೊಂದರಲ್ಲಿಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ತಿಲಕವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ಅವಿನಾಶ ಐರಸಂಗ (39) ಬಂಧಿತ. ತಿಲಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ದೇಶಮುಖ ರಸ್ತೆಯ ಉದಯ ಭವನ ಹೋಟೆಲ್ ನಲ್ಲಿಇತ್ತೀಚೆಗೆ ಚಿನ್ನ ಕಳ್ಳತನವಾದ ಕುರಿತು ದೂರು ದಾಖಲಾಗಿತ್ತು. ಈ ಕುರಿತು ತನಿಖೆ ಕೈಗೊಂಡಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. 95 ಸಾವಿರ ರೂ. ಮೌಲ್ಯದ 8.48 ಗ್ರಾಂ ಚಿನ್ನ, ಮೊಬೈಲ್ ಸೇರಿದಂತೆ ಒಟ್ಟು 1,03,000 ರೂ. ಮೌಲ್ಯದ ಸ್ವತ್ತನ್ನು ಆರೋಪಿಯಿಂದ ಜಪ್ತಿ ಮಾಡಲಾಗಿದೆ.

