ಹುತಾತ್ಮರ ದಿನಾಚರಣೆ, ಕುಷ್ಠರೋಗ ಅರಿವು

Contributed bybommekallu@gmail.com|Vijaya Karnataka

ಚಿಂತಾಮಣಿನಗರದ ಡೆಲಿಜಿಯನ್ಸ್‌ ಸಂಯುಕ್ತ ಪ್ರೌಢಶಾಲೆಯಲ್ಲಿ ಹುತಾತ್ಮರ ದಿನಾಚರಣೆ ಮತ್ತು ಕುಷ್ಠರೋಗ ಅರಿವು ಕಾರ್ಯಕ್ರಮ ನಡೆಯಿತು. ಕುಷ್ಠರೋಗವು ಮೈಕ್ರೋ ಬ್ಯಾಕ್ಟೀರಿಯಮ್‌ ಲೆಪ್ರೇ ಎಂಬ ಸೂಕ್ಷ್ಮಾಣು ಜೀವಿಯಿಂದ ಹರಡುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ತಾರತಮ್ಯವನ್ನು ಕೊನೆಗೊಳಿಸಿ ಘನತೆಯನ್ನು ಕಾಪಾಡಬೇಕು. ಬಹು ಔಷಧ ಚಿಕಿತ್ಸೆಯಿಂದ ಕುಷ್ಠರೋಗ ಸಂಪೂರ್ಣ ಗುಣಪಡಿಸಬಹುದು ಎಂದು ತಿಳಿಸಲಾಯಿತು. ಹಲವು ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

importance of leprosy awareness and martyrs day celebration

ವಿಕ ಸುದ್ದಿಲೊಕ ಚಿಂತಾಮಣಿ

ನಗರದ ಚೇಳೂರು ರಸ್ತೆಯಲ್ಲಿರುವ ಡೆಲಿಜಿಯನ್ಸ್ ಸಂಯುಕ್ತ ಪ್ರೌಢಶಾಲೆಯಲ್ಲಿಮಹಾತ್ಮ ಗಾಂಧೀಜಿ ಅವರ ಪುಣ್ಯಸ್ಮರಣೆ ಅಂಗವಾಗಿ ಹುತಾತ್ಮ ದಿನಾಚರಣೆ ಹಾಗೂ ಕುಷ್ಠರೋಗ ಅರಿವು ಕಾರ್ಯಕ್ರಮವನ್ನು ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿಮಾತನಾಡಿದ ತಾಲೂಕು ಆರೋಗ್ಯ ಅಧಿಕಾರಿ ಡಾ.ಎಂ.ಎಸ್ .ರಾಮಚಂದ್ರಾರೆಡ್ಡಿ, ಕುಷ್ಠರೋಗ ಯಾವುದೇ ಶಾಪ, ಪಾಪದಿಂದ ಬರುವ ಕಾಯಿಲೆ ಅಲ್ಲಹಾಗೂ ಇದು ಮೈಕ್ರೋ ಬ್ಯಾಕ್ಟೀರಿಯಮ್ ಲೆಪ್ರೇ ಎಂಬ ಸೂಕ್ಷ್ಮಾಣು ಜೀವಿಯಿಂದ ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ಈ ವರ್ಷದ ಘೋಷವಾಕ್ಯದಂತೆ ತಾರತಮ್ಯವನ್ನು ಕೊನೆಗೊಳಿಸಿ ಘನತೆಯನ್ನು ಕಾಪಾಡುತ್ತವೆ, ಎಂಬಂತೆ ಯಾವುದೇ ಕುಷ್ಠ ರೋಗಿಯನ್ನು ಕಂಡರೆ ಅವರನ್ನು ಶಾಂತ ಸ್ವಭಾವದಿಂದ ಮತ್ತೆ ನಮ್ಮೆಲ್ಲರಂತೆ ಅವರನ್ನು ನೋಡುವುದು ಹಾಗೂ ಪ್ರಸ್ತುತ ತಾಲೂಕಿನಲ್ಲಿ4 ಕುಷ್ಠರೋಗಿ ಪ್ರಕರಣಗಳಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಹು ಔಷಧ ಚಿಕಿತ್ಸೆ ಪಡೆಯುವುದರಿಂದ ಕುಷ್ಠರೋಗ ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿಡಿಲಿಜಿಯನ್ಸ್ ಶಾಲೆ ಮುಖ್ಯ ಶಿಕ್ಷಕ ಲಕ್ಷ್ಮೇನಾರಾಯಣ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಿವಾಸರೆಡ್ಡಿ ಹಾಗೂ ನಗರ ಆರೋಗ್ಯ ಕೇಂದ್ರದ ಎಲ್ಲಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ವಿದ್ಯಾರ್ಥಿಗಳು, ಶಿಕ್ಷಕ ವೃಂದ ಭಾಗವಹಿಸಿದ್ದರು.

30ಸಿಎ,???ವೈವಿ3

ಚಿಂತಾಮಣಿ ನಗರದ ಡಿಲಿಜಿಯನ್ಸ್ ಪ್ರೌಢಶಾಲೆಯಲ್ಲಿಹುತಾತ್ಮರ ದಿನಾಚರಣೆ ಹಾಗೂ ಕುಷ್ಠ ರೋಗ ಅರಿವು ಅಭಿಯಾನ ಕಾರ್ಯಕ್ರಮ ನಡೆಯಿತು.