ವಿಜಯನಗರ

Contributed byravindra.telagadi@timesgroup.com|Vijaya Karnataka

ಕೂಡ್ಲಿಗಿ ತಾಲೂಕಿನ ಗುಡೇಕೋಟೆಯಲ್ಲಿ ಒನಕೆ ಓಬವ್ವ ಉತ್ಸವದ ಹಿನ್ನೆಲೆ ನಿರ್ಮಿಸಿದ ಮೀಡಿಯಾ ಕೇಂದ್ರವನ್ನು ಶಾಸಕ ಡಾ.ಎನ್‌.ಟಿ.ಶ್ರೀನಿವಾಸ್‌ ಮತ್ತು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಉದ್ಘಾಟಿಸಿದರು. ಉತ್ಸವಕ್ಕೆ ಹೆಚ್ಚಿನ ಜನ ಸೇರುತ್ತಿದ್ದು, ರಾಜ್ಯಮಟ್ಟದಲ್ಲಿ ಸಂದೇಶ ನೀಡುವ ಮಾಧ್ಯಮಗಳ ಕಾರ್ಯ ಶ್ಲಾಘನೀಯವಾಗಿದೆ. ಹಂಪಿ ಉತ್ಸವದಂತೆ ಈ ಉತ್ಸವ ನಡೆಯುತ್ತಿದೆ.

inauguration of media center for onake obavva festival

ಮೀಡಿಯಾ ಕೇಂದ್ರ ಉದ್ಘಾಟಿಸಿದ ಶಾಸಕ, ಡಿಸಿ

ಕೂಡ್ಲಿಗಿ: ತಾಲೂಕಿನ ಗುಡೇಕೋಟೆಯಲ್ಲಿಒನಕೆ ಓಬವ್ವ ಉತ್ಸವದ ಕಾರ್ಯಕ್ರಮದ ಹಿನ್ನೆಲೆ ನಿರ್ಮಿಸಿರುವ ಮೀಡಿಯಾ ಕೇಂದ್ರವನ್ನು ಶಾಸಕ ಡಾ.ಎನ್ .ಟಿ.ಶ್ರೀನಿವಾಸ್ ಹಾಗೂ ಜಿಲ್ಲಾಧಿಕಾರಿ ಕವಿತಾ ಎಸ್ .ಮನ್ನಿಕೇರಿ ಶನಿವಾರ ಉದ್ಘಾಟಿಸಿದರು. ಶಾಸಕ ಮಾತನಾಡಿ, ‘‘ಉತ್ಸವಕ್ಕೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಜನ ಸೇರುವ ಹಿನ್ನೆಲೆ

ಗ್ರಾಮದ ಹೊರವಲಯದಲ್ಲಿವೇದಿಕೆ ನಿರ್ಮಿಸಿ ಉತ್ಸವ ಆಚರಿಸಲಾಗುತ್ತಿದೆ. ರಾಜ್ಯಮಟ್ಟದಲ್ಲೂಉತ್ಸವ ಕುರಿತು ಸಂದೇಶ ನೀಡುವ ಮಾಧ್ಯಮಗಳ ಕಾರ್ಯವೂ ಶ್ಲಾಘನೀಯವಾಗಿದೆ ಎಂದರಲ್ಲದೆ, ಹಿಂದುಳಿದ ತಾಲೂಕಿನ ಹೋಬಳಿ ಕೇಂದ್ರದಲ್ಲಿಈ ಉತ್ಸವ ವಿಜೃಂಭಣೆಯಿಂದ ನಡೆಯಲು ಸರಕಾರ ಕಾರಣವಾಗಿದೆ,’’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕವಿತಾ ಎಸ್ .ಮನ್ನಿಕೇರಿ ಮಾತನಾಡಿ, ಹಂಪಿ ಉತ್ಸವದಂತೆ ಕೂಡ್ಲಿಗಿ ತಾಲೂಕಿನ ಗುಡೇಕೊಟೆ ಒನಕೆ ಓಬವ್ವ ಉತ್ಸವ ನಡೆಯುತ್ತಿದೆ ಎಂದು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ .ಜಾಹ್ನವಿ, ತಹಸೀಲ್ದಾರ್ ವಿ.ಕೆ.ನೇತ್ರಾವತಿ, ತಾಪಂ ಇಒ ನರಸಪ್ಪ, ಬಿಇಒ ಮೈಲೇಶ್ ಬೇವೂರು ಇದ್ದರು.