ವಿಕ ಸುದ್ದಿಲೋಕ ಕೋಹಳ್ಳಿ ಹಿಂದೂ ಧರ್ಮದಲ್ಲಿಗೋವುಗಳನ್ನು ಮಾತೆ ಎಂದು ಗೌರವಿಸಿ ಪೂಜಿಸಲಾಗುತ್ತಿದೆ. ಅವುಗಳಲ್ಲಿಮುಕ್ಕೋಟಿ ದೇವತೆಗಳು ನೆಲೆಸಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಮನೆಯಲ್ಲಿಗೋವುಗಳನ್ನು ಸಾಕಬೇಕು ಎಂದು ಮಾಂಜರಿ- ಕೊಕಟನೂರ ಕಾಡಸಿದ್ದೇಶ್ವರ ಮಠದ ಶ್ರೀ ಗುರುಶಾಂತಲಿಂಗ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ಹೇಳಿದರು. ಅವರು ಸಮೀಪದ ಸಿಂಧೂರ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಾಲಯದ ನೂತನ ಕಳಸಾರೋಹಣ ಹಾಗೂ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಕೋಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಶಿವಪುರದ ಶ್ರೀ ಶಿವಲಿಂಗೇಶ್ವರ ದೇವಸ್ಥಾನ
ಆವರಣದಲ್ಲಿಶನಿವಾರ ಆಯೋಜಿಸಿದ್ದ 108 ಗೋವುಗಳ ಮಹಾಪೂಜೆ ಹಾಗೂ ಶಿವಲಿಂಗಕ್ಕೆ ರುದ್ರಾಭಿಷೇಕ ಸಮಾ ರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ‘‘ಗೋ ಮಾತೆಯನ್ನು ಲಕ್ಷಿತ್ರ್ಮೕ ದೇವಿ ಎಂದು ಪರಿಗಣಿಸಲಾಗುತ್ತಿದೆ. ಹಸುಗಳು ಮನೆಯಲ್ಲಿವಾಸವಾಗಿದ್ದರೆ ಇಡೀ ಕುಟುಂಬವೇ ಆರೋಗ್ಯವಾಗಿರುತ್ತದೆ,’’ ಎಂದರು. ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ, ಶಿವಪುರದಲ್ಲಿಶಾಸಕ ಲಕ್ಷ್ಮಣ ಸವದಿ ಅವರ ಪ್ರದೇಶಾಭಿವೃದ್ಧಿ ಯೋಜನೆಯಡಿ 10 ಲಕ್ಷ ರೂ. ವೆಚ್ಚದಲ್ಲಿಸಮುದಾಯ ಭವನ ನಿರ್ಮಿಸಲು
ಅನುದಾನ ಕೊಡಿಸಲಾಗುವುದು. ಮುಂದಿನ ಈ ಕಾರ್ಯಕ್ರಮಕ್ಕೆ ಅನ್ನ ದಾಸೋಹದ ಸೇವೆ ನೀಡಲಾಗುವುದು,’’ ಎಂದರು. ತಿಕೋಟಾದ ಶಿವಬಸವ ಶಿವಾಚಾರ್ಯ, ತುಬಚಿಯ ಬಸಯ್ಯಾ ಸ್ವಾಮಿಗಳು, ಯಡೂರಿನ ಈಶ್ವರಾಧ್ಯ ಹಿರೇಮಠ, ಶಿವಕುಮಾರ ಹಿರೇಮಠ, ನಿಜಲಿಂಗ ಬಡಕೆ, ಸಂಗಯ್ಯಾ ಪೂಜಾರಿ, ಅಣ್ಣಪ್ಪ ಬಿರಾದಾರ, ತುಕಾರಾಮ ದೇವಖಾತೆ, ಸದಾಶಿವ ಹರಪಾಳೆ,
ಲಿಂಗರಾಜ ಮುಧೋಳ, ಸಂತೋಷ ಸಾವಡಕರ, ಶ್ರೀಕಾಂತ ಆಲಗೂರ, ಸಹದೇವ ಸೂರ್ಯವಂಶಿ, ಅಪ್ಪಾಸಾಬ ಕೋಳಿ, ಶೇಖರ ಹಾಲಳ್ಳಿ, ಶಂಭುಲಿಂಗ ಬಡಕೆ, ಸಂಗಪ್ಪ ಡಂಬಳಿ, ಮೈಬೂಬ ಪಡಸಲಗಿ, ಬಿ.ಆರ್ . ಪಾಟೀಲ, ಅಪ್ಪಾಸಾಬ ಕಾಡಗೊಂಡ, ಶಿವರಾಯ ಮಂಟೂರ, ಲಕ್ಷತ್ರ್ಮಣ ಉಮರಾಣಿ, ಸಿದರಾಯ ಸತ್ತಿ, ಹನುಮಂತ ಗಬ್ಬೂರ ಮತ್ತಿತರರಿದ್ದರು. ಉಪನ್ಯಾಸಕ ಎಚ್ .ಎ. ಮಗದುಮ್ಮ ಸ್ವಾಗತಿಸಿದರು. ಕರೆಪ್ಪ ಕೊಂತಿಕಾರ ವಂದಿಸಿದರು.

