ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಬಂಟ್ವಾಳ ಘಟಕ ಪದಪ್ರದಾನ ಕಾರ್ಯಕ್ರಮ

Contributed bymambadynews@gmail.com|Vijaya Karnataka

ಬಂಟ್ವಾಳದಲ್ಲಿ ಸೌತ್‌ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಷನ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ರಜತ ಸಂಭ್ರಮದ ಸಮಾರೋಪವೂ ಜರುಗಿತು. ಡಾ. ಮಮತಾ ಪಿ.ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನವೀನ್‌ ರೈ ಪಂಜಲ ಅಧ್ಯಕ್ಷತೆ ವಹಿಸಿದ್ದರು. ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.

south kanara photographers association new office bearers swearing in at bantwal

ವಿಕ ಸುದ್ದಿಲೋಕ ಬಂಟ್ವಾಳ

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಬಂಟ್ವಾಳ ವಲಯದ ನೂತನ ಪದಾಧಿಕಾರಿಗಳ ಪದಪ್ರದಾನ ಹಾಗೂ ರಜತ ಸಂಭ್ರಮದ ಸಮಾರೋಪ ಸಮಾರಂಭ ಬಿ.ಸಿ. ರೋಡ್ ನ ಲಯನ್ಸ್ ಸೇವಾ ಮಂದಿರದಲ್ಲಿನಡೆಯಿತು.

ಅಭಿಮತ ಟಿವಿ ಪಾಲುದಾರರಾದ ಡಾ. ಮಮತಾ ಪಿ.ಶೆಟ್ಟಿ ಉದ್ಘಾಟಿಸಿದರು. ಎಸ್ ಕೆಪಿಎ ಜಿಲ್ಲಾಧ್ಯಕ್ಷ ನವೀನ್ ರೈ ಪಂಜಲ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಉಮೇಶ್ ಕುಮಾರ್ ವೈ., ಜೇಸಿಐ ಬಂಟ್ವಾಳ ಅಧ್ಯಕ್ಷ ಕಿಶೋರ್ ಕುಮಾರ್ , ಎಸ್ ಕೆಪಿಎ ಸಂಚಾಲಕ ಗೋಪಾಲ್ ಸುಳ್ಯ, ಎಸ್ ಕೆಪಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್ , ಜಿಲ್ಲಾಕಟ್ಟಡ ಸಮಿತಿ ಅಧ್ಯಕ್ಷ ಆನಂದ್ ಎನ್ ., ಜಿಲ್ಲಾಪ್ರಧಾನ ಕಾರ್ಯದರ್ಶಿ ಅಜಯ್ ಮಂಗಳೂರು, ಜಿಲ್ಲಾಕ್ರೀಡಾ ಕಾರ ್ಯದರ್ಶಿ ಹರೀಶ್ ಕುಂದರ್ , ಜಿಲ್ಲಾಉಪಾಧ್ಯಕ್ಷ ದೇವರಾಜ್ ಶೆಟ್ಟಿ ಸುರತ್ಕಲ್ , ದತ್ತಾತ್ರೇಯ ಕಾರ್ಕಳ, ವಲಯದ ನೂತನ ಅಧ್ಯಕ್ಷ ರಾಜೇಂದ್ರ ಕೆ. ಗೌರವಾಧ್ಯಕ್ಷ ಕಿಶೋರ್ ಕುಮಾರ್ , ಪ್ರಧಾನ ಕಾರ ್ಯದರ್ಶಿ ರವಿ ಕಲ್ಪನೆ, ಕೋಶಾಧಿಕಾರಿ ಕೃಷ್ಣ ರಾಜ್ ರಾವ್ ಉಪಸ್ಥಿತರಿದ್ದರು.

ಆನಂದ್ ಎನ್ . ಸ್ವಾಗತಿಸಿದರು. ರವಿ ಕಲ್ಪನೆ ವಂದಿಸಿದರು. ಎಚ್ .ಕೆ. ನಯನಾಡ್ ಹಾಗೂ ದಯಾನಂದ್ ಬಂಟ್ವಾಳ್ ಕಾರ ್ಯಕ್ರಮ ನಿರೂಪಿಸಿದರು.

ಚಿತ್ರ: 28ಬಿಎಚ್ ಎಸ್ .ಕೆ.ಪಿ.ಎ.

ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಪದಾಧಿಕಾರಿಗಳ ಪದಪ್ರದಾನ ನಡೆಯಿತು.