ವಸಂತಾಗಮನಕ್ಕೆ ಕಾಂತಾರದ ಚೆಲುವು....( ಕಾಡು ಹೂವುಗಳ ಪೋಟೊಗಳು)

Contributed byparashurammkerehalli@gmail.com|Vijaya Karnataka

ಶಿವಮೊಗ್ಗದ ರಿಪ್ಪನ್‌ಪೇಟೆಯಲ್ಲಿ ವಸಂತಾಗಮನದ ಸಂಭ್ರಮ. ಕಾಡು ಹೂವುಗಳು ಅರಳುತ್ತಿವೆ. ಗಿಡಮರಗಳು ಬಣ್ಣ ಬಣ್ಣದ ಹೂಗಳಿಂದ ಕಂಗೊಳಿಸುತ್ತಿವೆ. ಜೇನುನೊಣಗಳು, ಪಕ್ಷಿಗಳು ಸಂತಸ ಮೂಡಿಸುತ್ತಿವೆ. ಮಾವು, ಜಾಲ, ಸಳ್ಳೆ, ಮುತ್ತುಗ, ಗೊದ್ದ, ಕುಂಸ, ಕೌಳಿ ಮುಂತಾದ ಗಿಡಗಳು ಹೂ ಬಿಟ್ಟು ಚೆಲುವನ್ನು ಹೆಚ್ಚಿಸಿವೆ. ಪ್ರಕೃತಿಯ ಸೌಂದರ್ಯ ಕಣ್ಮನ ಸೆಳೆಯುತ್ತಿದೆ.

the beautiful search of spring the splendor of wildflowers

ವಸಂತಾಗಮನಕ್ಕೆ ಕಾಂತಾರದ ಚೆಲುವು....( ಕಾಡು ಹೂವುಗಳ ಪೋಟೊಗಳು)

ರಿಪ್ಪನ್ ಪೇಟೆ ( ಶಿವಮೊಗ್ಗ ): ಎಣೆಯಿಲ್ಲದ ಪ್ರಕೃತಿ ಸೌಂದರ್ಯದಲ್ಲೀಗ ಬಣ್ಣ ಬಣ್ಣದ ಸೊಬಗು, ವಸಂತಾಗಮನಕ್ಕೆ ಕಾತರವಾಗಿರುವ ಗಿಡಮರಗಳಲ್ಲಿಪುಷ್ಪರಾಶಿಯ ಚೆಲುವು. ಸವಿದಷ್ಟು ರುಚಿಸುವ ಕಾಡಿನ ಬಹುವರ್ಣದ ಹೂಗಳು ಬರಡೆದೆಯ ಮನದ ದಾಹಕ್ಕೆ ಮುದ ನೀಡುತ್ತ ಜನರ ಕಣ್ಮನ

ಸೆಳೆಯುತ್ತಿವೆ.

ಸಂಕ್ರಾಂತಿ ನಂತರದಲ್ಲಿಭುವಿಯಲ್ಲಿನ ಹೊಸ ಮನ್ವಂತರಕ್ಕೆ, ಸಸ್ಯ ಸಂಕುಲಗಳು ತನ್ನ ವಂಶಾಭಿವೃದ್ಧಿಗಾಗಿ ಮೋಹಕ ಬದಲಾವಣೆಗೆ

ಕಾರಣವಾಗುತ್ತದೆ. ಸಪ್ತ ವರ್ಣಗಳಿಗೂ ಮೀರಿದ ಬಗೆಬಗೆಯ ಹೂವುಗಳರಳಿ ಸುವಾಸನೆ ಬೀರಿದರೆ, ಸುಮರಾಶಿಗಳನ್ನು ಮುತ್ತಿಕ್ಕಿ ಮಕರಂದವನ್ನು ಹೀರಿ

ಪರಾಗಸ್ಪರ್ಶಕ್ಕೆ ಹಾರುವ ಜೇನ್ನೋಣಗಳ ಹಿಂಡು, ಗಿಳಿ ಪಕ್ಷಿಗಳ ದಂಡಿನ ಮುಂಜಾನೆಯ ಚಿಲಿಪಿಲಿ ಗಾನ ಆನಂದವನ್ನು ಮೂಡಿಸುತ್ತದೆ.

ಈ ಬಾರಿ ಭರ್ಜರಿಯಾಗಿ ಬಂದಿರುವ ಮಾವಿನ ಹೂ ಜತೆಗೆ ಜಾಲ, ಸಳ್ಳೆ, ಮುತ್ತುಗ, ಕೌಲ, ಗೊದ್ದ, ಕುಂಸ, ಕೌಳಿಯಂತಹ ಕಾಡಿನ ಗಿಡಮರಗಳು ಹೂ ಬಿಟ್ಟು ಕಂಗೊಳಿಸುತ್ತಿವೆ.

31 ಆರ್ ಪಿಟಿ 1 ಜಾಲದ ಹೂ

31 ಆರ್ ಪಿಟಿ 2 ಗೊಬ್ಬರದಗಿಡಿ ಹೂ

31 ಆರ್ ಪಿಟಿ 3 ಗೊದ್ದದ ಹೂ

31 ಆರ್ ಪಿಟಿ 4 ಮುತ್ತುಗದ ಹೂ

31 ಆರ್ ಪಿಟಿ 5 ಉಗುಣೆ ಹೂ

31 ಆರ್ ಪಿಟಿ 6 ಸಳ್ಳೆ ಮರದ ಹೂ

31 ಆರ್ ಪಿಟಿ 7 ಮಾವಿನ ಹೂ

31 ಆರ್ ಪಿಟಿ 8 ಕುಂಸ ಗಿಡದ ಹೂ

31 ಆರ್ ಪಿಟಿ 9 ಕೌಲದ ಹೂ

31 ಆರ್ ಪಿಟಿ 10 ಕವಳಿ ಹೂ

(ಚಿತ್ರಗಳು-ಪರಶುರಾಮ್ ಕೆರೇಹಳ್ಳಿ, ರಿಪ್ಪನ್ ಪೇಟೆ (ಶಿವಮೊಗ್ಗ)