‘ವಾದಿರಾಜ ವಾಲಗ ಮಂಡಳಿ’ ಮೊದಲ ಹಂತದ ಚಿತ್ರೀಕರಣ ಪೂರ್ಣ

Contributed bystevan.rego@timesgroup.com|Vijaya Karnataka

ಎಂ.ಎನ್‌.ಆರ್‌. ಪ್ರೊಡಕ್ಷನ್ಸ್‌ ನಿರ್ಮಾಣದ 'ವಾದಿರಾಜ ವಾಲಗ ಮಂಡಳಿ' ಚಿತ್ರದ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕರಾವಳಿ ಸೊಗಡಿನ ಈ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಫೆಬ್ರವರಿ ಕೊನೆಯ ವಾರದಲ್ಲಿ ನಡೆಯಲಿದೆ. ಪೋಸ್ಟ್‌ ಪ್ರೊಡಕ್ಷನ್‌ ಮಾರ್ಚ್-ಏಪ್ರಿಲ್‌ನಲ್ಲಿ ಮುಗಿದು, ಮೇ 2026ಕ್ಕೆ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಕುಟುಂಬ ಸಮೇತ ನೋಡಬಹುದಾದ ಸದಭಿರುಚಿಯ ಚಿತ್ರ ಇದಾಗಲಿದೆ.

vasiraja valaga mandali film production first phase completed to be released in 2026

ವಿಕ ಸುದ್ದಿಲೋಕ ಮಂಗಳೂರು

ಎಂ.ಎನ್ .ಆರ್ . ಪ್ರೊಡಕ್ಷನ್ಸ್ ಲಾಂಛನದಲ್ಲಿಡಾ.ಎಂ.ಎನ್ .ರಾಜೇಂದ್ರ ಕುಮಾರ್ ಸಾರಥ್ಯದಲ್ಲಿಮೂಹೂರ್ತಗೊಂಡಿರುವ ‘ ವಾದಿರಾಜ ವಾಲಗ ಮಂಡಳಿ ’(ವಿವಿಎಂ) ಕನ್ನಡ ಚಲನಚಿತ್ರ ನಿರಂತರ ಶೂಟಿಂಗ್ ನಡೆಸಿ ತನ್ನ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

2025ರ ಡಿ.3ರಿಂದ ಬ್ರಹ್ಮಾವರದ ಹಂದಾಡಿ ತೆಂಕು ಮನೆಯಲ್ಲಿ20 ದಿನಗಳ ಕಾಲ ಹಾಗೂ ಬಜ್ಪೆ ಕೊಳಂಬೆಯಲ್ಲಿ8 ದಿನ ಮತ್ತು ಮೂಲ್ಕಿ ಪರಿಸರದಲ್ಲಿ14 ದಿನಗಳ ಶೂಟಿಂಗ್ ನಡೆಸಿದೆ. ಅಪ್ಪಟ ಕರಾವಳಿ ಕನ್ನಡದ ಸೊಗಡಿನ ಭಾಷೆಯೊಂದಿಗೆ, ಹೊಸತನದ ಕಥಾವಸ್ತುವಿನೊಂದಿಗೆ, ವಿಭಿನ್ನ ನಿರೂಪಣೆ ಹೊಂದಿರುವ ‘ವಿವಿಎಂ’ ಕನ್ನಡ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಫೆಬ್ರವರಿ ಕೊನೆಯ ವಾರದಲ್ಲಿನಡೆಯಲಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಪ್ರಕ್ರಿಯೆ ಮಾರ್ಚ್-ಏಪ್ರಿಲ್ ನಲ್ಲಿನಡೆಯಲಿದ್ದು, ಮೇ 2026ಕ್ಕೆ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ನಿರ್ಮಾಪಕರಿಂದ ಉತ್ತಮ ಬೆಂಬಲ

‘‘ಚಿತ್ರದ ಕಥೆಯ ಒಂದು ಎಳೆಯನ್ನು ಕೇಳಿಯೇ ಕಥೆಯನ್ನು ಓಕೆ ಅಂದಿರುವ ನಿರ್ಮಾಪಕ ಡಾ.ಎಂ.ಎನ್ .ರಾಜೇಂದ್ರ ಕುಮಾರ್ ಅವರು ಚಿತ್ರದ ಶೂಟಿಂಗ್ ಗೆ ಎಲ್ಲೂಅಡೆತಡೆಯಾಗದಂತೆ ನಿರ್ಮಾಣದ ವಿಷಯದಲ್ಲಿಎಲ್ಲೂರಾಜಿಯಾಗದಂತೆ ನೋಡಿಕೊಂಡಿದ್ದಾರೆ. ಅವರಿಗೆ ಬೆಂಬಲವಾಗಿ ಸಹ ನಿರ್ಮಾಪಕರಾಗಿ ಜಯಪ್ರಕಾಶ್ ತುಂಬೆ ನಿರಂತರ ಬೆಂಬಲ ನೀಡಿದ್ದಾರೆ,’’ ಎನ್ನುತ್ತಾರೆ ಚಿತ್ರದ ನಿರ್ದೇಶಕ ಶಶಿರಾಜ್ ರಾವ್ ಕಾವೂರು.

ಕಲಾವಿದರ ಸಮ್ಮಿಲನ

ಕರಾವಳಿಯ ಆಯ್ದ ಕಲಾವಿದರ ಸಮ್ಮಿಲನ ಈ ಚಿತ್ರದಲ್ಲಿದೆ. ಮಜಾ ಟಾಕೀಸ್ ಗುಂಡು ಮಾಮ ಖ್ಯಾತಿಯ ನವೀನ್ ಡಿ.ಪಡೀಲ್ ಪ್ರಮುಖ ಪಾತ್ರದಲ್ಲಿಮಿಂಚಿದ್ದಾರೆ. ಸು ಫ್ರಂ ಸೋ ಖ್ಯಾತಿಯ ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್ , ಪುಷ್ಪರಾಜ್ ಬೊಳ್ಳಾರ್ ಮತ್ತಿತರರು ಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ನಟರಾದ ಶೋಭರಾಜ್ ಪಾವೂರು, ಗೋಪಿನಾಥ್ ಭಟ್ , ನಿತಿನ್ ತುಂಬೆ, ವಿನಾಯಕ ಜೆಪ್ಪು, ಲಕ್ಷ್ಮಣ ಕುಮಾರ್ ಮಲ್ಲೂರು, ಯತೀಶ್ ಬೈಕಂಪಾಡಿ, ಗೋಪಾಲ ಶೆಟ್ಟಿ, ರಂಜನ್ ಬೋಳೂರು ಮಾತ್ರವಲ್ಲದೆ ಹಲವಾರು ಹೊಸ ಪ್ರತಿಭೆಗಳನ್ನು ಪರಿಚಯಿಸಲಾಗಿದೆ. ತೆಲುಗು ಚಿತ್ರರಂಗದಲ್ಲಿಹಲವಾರು ಚಿತ್ರಗಳಲ್ಲಿನಟಿಸಿದ ಅರ್ಜುನ್ ವೇದಾಂತ್ ಮತ್ತು ಕರಾವಳಿಯ ಪ್ರತಿಭೆ ಅಥರ್ವ ಪ್ರಕಾಶ್ ನಾಯಕ ನಟರಾಗಿ ಹಾಗೂ ವೇನ್ಯ ರೈ ಮತ್ತು ತನ್ವಿ ರಾವ್ ನಾಯಕಿಯರಾಗಿ ಮಿಂಚಿದ್ದಾರೆ.

ತಮಿಳು ಚಿತ್ರರಂಗದ ಯಶಸ್ವಿ ಚಿತ್ರಗಳಲ್ಲಿಕ್ಯಾಮೆರಾಮೆನ್ ಆಗಿ ಪ್ರಸಿದ್ಧಿ ಪಡೆದ ಚಂದ್ರಶೇಖರನ್ ಅವರ ಕ್ಯಾಮೆರಾ ಕೈಚಳಕ ಈ ಚಿತ್ರಕ್ಕಿದೆ. ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಚಿತ್ರಕ್ಕೆ ಸಂಗೀತ ನೀಡಿದ್ದು, ಐದು ಹಾಡುಗಳಿವೆ. ನಿತಿನ್ ಶೆಟ್ಟಿ ಸಂಕಲನದಲ್ಲಿಮತ್ತು ವಿನಾಯಕ ಆಚಾರ್ಯ ನೃತ್ಯ ನಿರ್ದೇಶಕರಾಗಿ ಸಹಕರಿಸಿದ್ದಾರೆ.

ಬಾಕ್ಸ್

ಕುಟುಂಬ ಸಮೇತ ನೋಡುವ ಸಿನಿಮಾ

ಕರ್ನಾಟಕದ ಜನತೆಗೆ ವಿಭಿನ್ನವಾದ, ಸಂಪೂರ್ಣ ಮನರಂಜನೆ ಹಾಗೂ ಸದಭಿರುಚಿಯ ಚಿತ್ರ ನೀಡಬೇಕೆಂಬುದು ನನ್ನ ಹಲವು ವರ್ಷಗಳ ಕನಸು. ಅದು ‘ವಾದಿರಾಜ ವಾಲಗ ಮಂಡಳಿ’ಯ ಮೂಲಕ ನನಸಾಗುತ್ತಿದೆ. ಈ ಸಿನಿಮಾ ನಿರ್ಮಾಣದಲ್ಲಿಯಾವುದೇ ರಾಜಿ ಮಾಡಿಕೊಳ್ಳದೇ ಸಿನಿಮಾಕ್ಕೆ ಬೇಕಾದ ಅತ್ಯುತ್ತಮ ತಂತ್ರಜ್ಞರನ್ನು ಕರೆಸಿದ್ದೇವೆ. ಚಿತ್ರದ ಕೆಲವು ಸನ್ನಿವೇಶಗಳು ಪ್ರೇಕ್ಷಕರ ಮನಸ್ಸಿನಲ್ಲಿಅಚ್ಚಳಿಯದೆ ಉಳಿಯುವುದರಲ್ಲಿಅನುಮಾನವಿಲ್ಲ. ಚಿತ್ರ ಉತ್ತಮ ರೀತಿಯಲ್ಲಿಮೂಡಿಬಂದಿದ್ದು ಕುಟುಂಬ ಸಮೇತ ಕುಳಿತು ನೋಡಿ ಸವಿಯಬಹುದಾದ ಒಳ್ಳೆಯ ಸಿನಿಮಾ ಇದಾಗಲಿದೆ.

-ಡಾ.ಎಂ.ಎನ್ .ರಾಜೇಂದ್ರ ಕುಮಾರ್ , ಚಿತ್ರದ ನಿರ್ಮಾಪಕ

ಫೊಟೋ: 31 ಎಂ-ವಾಲಗ

ಫೊಟೋ: 31ಎಂ-ರಾಜೇಂದ್ರ ಕುಮಾರ್