ಮಹಿಳಾ ಸಮಾವೇಶ, ಸಾಧಕರಿಗೆ ಸನ್ಮಾನ

Contributed byravideshpande77@gmail.com|Vijaya Karnataka

ಅಮೀನಗಡದ ಸೂಳೇಬಾವಿಯಲ್ಲಿ ಫೆಬ್ರುವರಿ 2ರಂದು ಭಾವೈಕ್ಯ ಜಾತ್ರೆ ನಡೆಯಲಿದೆ. ಈ ಅಂಗವಾಗಿ ಮಹಿಳಾ ಸಮಾವೇಶ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಹಿಳಾ ಸಮಾವೇಶ ಉದ್ಘಾಟಿಸಲಿದ್ದಾರೆ. ಸಂಜೆ ಸಾಧಕರಿಗೆ ಸನ್ಮಾನ ನಡೆಯಲಿದ್ದು, ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಸಚಿವ ಎಚ್.ಕೆ.ಪಾಟೀಲ ಸನ್ಮಾನ ಸಮಾರಂಭ ಉದ್ಘಾಟಿಸಲಿದ್ದಾರೆ.

womens convention award ceremony for achievers 2023

ಮಹಿಳಾ ಸಮಾವೇಶ , ಸಾಧಕರಿಗೆ ಸನ್ಮಾನ

ಅಮೀನಗಡ: ಸಮೀಪದ ಸೂಳೇಬಾವಿಯ ಭಾವೈಕ್ಯ ಜಾತ್ರೆ ನಿಮಿತ್ತ ಫೆ.2ರಂದು ಮಹಿಳಾ ಸಮಾವೇಶ ಹಾಗೂ ಜಿಲ್ಲೆಯ ಸಾಧಕರಿಗೆ ಸನ್ಮಾನ ಸಮಾರಂಭ ಜರುಗಲಿದೆ.

ಶಾಖಾಂಬರಿ ಕಲ್ಯಾಣ ಮಂಟಪದಲ್ಲಿಬೆಳಗ್ಗೆ 10ಕ್ಕೆ ನಡೆಯುವ ಮಹಿಳಾ ಸಮಾವೇಶವನ್ನು ಸಚಿವೆ ಲಕ್ಷ್ಮೇ ಹೆಬ್ಬಾಳಕರ್ ಉದ್ಘಾಟಿಸಲಿದ್ದು, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ, ಇಂದುಮತಿ ಸಾಲಿಮಠ, ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಎಸ್ ಐ ಜ್ಯೋತಿ ವಾಲೀಕಾರ, ಬಿಇಒ ಜಾಸ್ಮೀನ್ ಕಿಲ್ಲೇದಾರ ಇತರರು ಆಗಮಿಸಲಿದ್ದಾರೆ.

ಸಂಜೆ 6ಕ್ಕೆ ಜಿಲ್ಲಾಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದ್ದು, ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ ನಾನಾ ಮಠಗಳ ಸ್ವಾಮೀಜಿಗಳ ಆಗಮಿಸಲಿದ್ದು, ಸಚಿವ ಎಚ್ .ಕೆ.ಪಾಟೀಲ ಉದ್ಘಾಟಲಿದ್ದಾರೆ. ಕೈಗಾರಿಕೆ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್ .ಜಿ.ನಂಜಯ್ಯನಮಠ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಎಸ್ .ಆರ್ .ಪಾಟೀಲ, ಮುರಗೇಶ ನಿರಾಣಿ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಉದ್ಯಮಿ ಸಂತೋಷ ಐಹೊಳ್ಳಿ, ಸಹಕಾರಿ ಧುರೀಣ ಪ್ರಕಾಶ ತಪಶೆಟ್ಟಿ, ಘನಶ್ಯಾಂ ಭಾಂಡಗೆ, ಕಲಾವಿದರಾದ ವೆಂಕಪ್ಪ ಸುಗತೇಕರ್ , ಗುರುರಾಜ ಹೊಸಕೋಟೆ ಮತ್ತಿತರ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಜಾತ್ರಾ ಸಮಿತಿ ತಿಳಿಸಿದೆ.