ಅಕ್ಕಿ ತೋಟೇಶ್ ನೇತೃತ್ವ, ರಸ್ತೆ ಅಭಿವೃದ್ಧಿಗೆ 16 ಕಿ.ಮೀ.

Contributed byayyanagowdara@gmail.com|Vijaya Karnataka
16 km march for road development led by akki toteshas protest
ಗುಂಡಿಗಳಿಗೆ ಪೂಜೆ/ ಅಪಘಾತ ತಡೆಗೆ ಪ್ರಾರ್ಥನೆ

ರಸ್ತೆ ಅಭಿವೃದ್ಧಿಗಾಗಿ 16 ಕಿ.ಮೀ.ಪಾದಯಾತ್ರೆ
ವಿಕ ಸುದ್ದಿಲೋಕ ಹಗರಿಬೊಮ್ಮನಹಳ್ಳಿ

ತಾಲೂಕಿನ ತಂಬ್ರಹಳ್ಳಿಯಿಂದ ಪಟ್ಟಣದವರೆಗಿನ ರಸ್ತೆ ಗುಂಡಿಗಳನ್ನು ಮುಚ್ಚಿ ಡಾಂಬರೀಕರಣಗೊಳಿಸುವುದು ಸೇರಿ ನಾನಾ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ನಾನಾ ಗ್ರಾಮಸ್ಥರು ತಂಬ್ರಹಳ್ಳಿ ಕೊಟ್ಟೂರೇಶ್ವರ ಸ್ವಾಮಿ ದೇಗುಲದಿಂದ ಬಸವೇಶ್ವರ ವೃತ್ತದವರೆಗೆ 16 ಕಿ.ಮೀ.ಪಾದಯಾತ್ರೆ ನಡೆಸಿದರು.

ಪಟ್ಟಣದಲ್ಲಿಜಿ.ಪಂ.ಮಾಜಿ ಸದಸ್ಯ ಅಕ್ಕಿತೋಟೇಶ್ ಮಾತನಾಡಿ, ‘‘ಹೋರಾಟ ಯಾರ ವಿರುದ್ಧವೂ ಅಲ್ಲ. ತಂಬ್ರಹಳ್ಳಿಯಿಂದ 16 ಕಿ.ಮೀ., ಹಗರಿಕ್ಯಾದಿಗಿಹಳ್ಳಿಯಿಂದ ಉಪನಾಯಕನಹಳ್ಳಿವರೆಗೆ 10 ಕಿ.ಮೀ., ಜಿ.ಕೋಡಿಹಳ್ಳಿಯಿಂದ ನಾಡಕಚೇರಿವರೆಗೆ 4 ಕಿ.ಮಿ.ರಸ್ತೆ ಕೂಡಲೆ ದುರಸ್ಥಿಯಾಗಬೇಕು. ಬನ್ನಿಗೋಳ, ಮುತ್ಕೂರು, ಸೀಗೇನಹಳ್ಳಿ, ಚಿಲಗೋಡು, ಕೃಷ್ಣಾಪುರ, ಸೀಗೇನಹಳ್ಳಿ, ಹಗರಿಕ್ಯಾದಿಗಿಹಳ್ಳಿ ಸೇರಿ ನಾನಾ ಗ್ರಾಮಸ್ಥರಿಗೆ ಮಾರ್ಗದಲ್ಲಿಸಂಚಾರ ನರಕಯಾತನೆಯಾಗಿದೆ. ಅಪಘಾತ ಸಾಮಾನ್ಯವಾಗಿದ್ದು, ಕೂಡಲೇ ಸಂಬಂಧಿಸಿದವರು ರಸ್ತೆ ಅಭಿವೃದ್ಧಿಗೊಳಿಸಬೇಕು,’’ ಎಂದು ಒತ್ತಾಯಿಸಿದರು.

ರಾಜ್ಯ ರೈತಸಂಘದ ಅಧ್ಯಕ್ಷ ಬಸವನಗೌಡ ಮಾತನಾಡಿ, ‘‘ರಸ್ತೆ ದುರಸ್ಥಿಗೆ 2 ತಿಂಗಳ ಗಡುವು ನೀಡಲಾಗಿದೆ. ಬಳಿಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ನಡೆಸಲಾಗುವುದು,’’ ಎಂದು ಎಚ್ಚರಿಸಿದರು. ದಳಪತಿ ಕೊಟ್ರಯ್ಯ, ಪಿಕಾರ್ಡ್ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಪಟ್ಟಣಶೆಟ್ಟಿ ಸುರೇಶ್ ಮಾತನಾಡಿದರು. ಬಳಿಕ ಉಪತಹಸೀಲ್ದಾರ್ ಶಿವಕುಮಾರಗೌಡ, ಎಇಇ ಸತೀಶ್ ನಾಯ್ಕಗೆ ಮನವಿ ಸಲ್ಲಿಸಿದರು. ಗ್ರಾಮದ ಕೊಟ್ಟೂರೇಶ್ವರ ಸ್ವಾಮಿ ದೇಗುಲದಿಂದ ಪಟ್ಟಣದ ಬಸವೇಶ್ವರ ವೃತ್ತದವರೆಗೆ 400ಕ್ಕೂ ಹೆಚ್ಚು ಜನರು ಪಾದಯಾತ್ರೆ ನಡೆಸಿದರು. ನಿವೃತ್ತ ಇಒ ಟಿ.ವೆಂಕೋಬಪ್ಪ, ಮುಖಂಡರಾದ ಪಿ.ಕೊಟ್ರೇಶ, ಸುರೇಶ ಯಳಕಪ್ಪನವರ, ಮಾಬುಸಾಬ್ , ಗೌರಜ್ಜನವರ ಗಿರೀಶ್ , ರೆಡ್ಡಿ ಮಂಜುನಾಥ ಪಾಟೀಲ್ , ಬನ್ನಿಗೋಳ ಆನಂದರೆಡ್ಡಿ, ನಂದೆಪ್ಪನವರ ಸುರೇಶ್ , ತೆಲುಗೋಳಿ ಕೃಷ್ಣ, ರಂಗಪ್ಪ, ಗುಡ್ಲನೂರು ವಸಂತ, ಗಡ್ಡಿ ನಿಂಗಪ್ಪ, ಮೈನಳ್ಳಿ ಸುರೇಶ್ , ತಳವಾರ ಪಕ್ಕೀರಪ್ಪ, ಡಿ.ಎಂ.ತೋಟಯ್ಯ, ಮೋಹನರೆಡ್ಡಿ ಇತರರಿದ್ದರು.

ಗುಂಡಿಗಳಿಗೆ ಶಾಸ್ತೊ್ರೕಕ್ತ ಪೂಜೆ: ಪಾದಯಾತ್ರೆ ವೇಳೆ ಗುಂಡಿಗಳಿಗೆ ಕಾಯಿ ಒಡೆದು, ಹೂ ಏರಿಸಿ, ಊದುಬತ್ತಿ ಮತ್ತು ಕರ್ಪೂರ ಬೆಳಗಿದರು. ತಾಲೂಕಿನ ನೂರಾರು ಗುಂಡಿಗಳ ಪೈಕಿ ದೊಡ್ಡ ಗುಂಡಿಗಳಿಗೆ ಪೂಜೆ ಸಲ್ಲಿಸಿ, ‘‘ಯಾವುದೇ ಅಪಾಯ ಸಂಭವಿಸದಂತೆ ಕಾಯಲು ಕೋರಲಾಗಿದೆ,’’ ಎಂದು ಸಂಚಾಲಕ ಅಕ್ಕಿ ತೋಟೇಶ್ ತಿಳಿಸಿದರು. ಗುಂಡಿ ಮುಚ್ಚುವಂತೆ ರಸ್ತೆಯುದಕ್ಕೂ ಬ್ಯಾನರ್ ಕಟ್ಟಿ ಗಮನಸೆಳೆದಿದ್ದ ತಳವಾರ ಕೊಟ್ರೇಶ, ಆನಂದ್ ಕಡ್ಲಿ, ಪಣಿರಾಜು, ಸಾಮಾಜಿಕ ಜಾಲತಾಣದ ಶಾಮಿಯನ ಶಿವಕುಮಾರ ಮತ್ತು ಬೈಕ್ ರಾರ ಯಲಿ ನಡೆಸಿದ ಕೆಆರ್ ಎಸ್ ಕೊಟ್ರೇಶ್ ರನ್ನು ಸನ್ಮಾನಿಸಲಾಯಿತು. ಹೋರಾಟಕ್ಕೆ ಖಿದ್ಮತ್ ಕಮಿಟಿಯ ಅಧ್ಯಕ್ಷ ಎಚ್ .ಜಂದಿಸಾಹೇಬ್ , ಆಟೋರಾಜ, ಬುಡೇನ್ ಸಾಬ್ , ಚಾಂದ್ ಬಾಷಾ, ಎನ್ .ಕೆ.ರಾಜಾಭಕ್ಷಿ, ಶಬ್ಬೀರ್ ಬೆಂಬಲಿಸಿ, ಪಾದಯಾತ್ರಿಗಳಿಗೆ ತಂಪುಪಾನೀಯ ವಿತರಿಸಿದರು.

ಚಿತ್ರ : 16ಎಚ್ ಬಿಎಚ್ 1

ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದಿಂದ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪಾದಯಾತ್ರೆ ನಡೆಸಿದ ನಾನಾ ಗ್ರಾಮಸ್ಥರು ಬಸವೇಶ್ವರ ವೃತ್ತದಲ್ಲಿಧರಣಿ ನಡೆಸಿದರು.

ಧಿಧಿ-