ವಿಕ ಸುದ್ದಿಲೋಕ ಶಿವಮೊಗ್ಗರಾಜ್ಯದಲ್ಲಿನಿಗಮ ಮಂಡಳಿಗಳಿಗೆ ಹೊಸ ಅಧ್ಯಕ್ಷರ ನೇಮಕ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮುಸ್ಲಿಂ ಮುಖಂಡ ಮೊಹಮ್ಮದ್ ಆರಿಫ್ ಉಲ್ಲಾಅವರನ್ನು ನೇಮಕ ಮಾಡಬೇಕು ಎಂದು ರಾಜ್ಯ ಅಲ್ಪಸಂಖ್ಯಾತರ ಹಿತರಕ್ಷಣಾ ವೇದಿಕೆ ಜಿಲ್ಲಾಅಧ್ಯಕ್ಷ ಸಯ್ಯದ್ ಮುಜೀಬುಲ್ಲಒತ್ತಾಯಿಸಿದರು.
ಪತ್ರಿಕಾಭವನದಲ್ಲಿಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ರಾಜ್ಯದಲ್ಲಿಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವಲ್ಲಿಮುಸ್ಲಿಂ ಸಮುದಾಯ ಪ್ರಮುಖ ಪಾತ್ರ ವಹಿಸಿದೆ. ಮೊದಲ ಹಂತದಲ್ಲಿನಿಗಮ ಮಂಡಳಿಗಳಿಗೆ ಜಿಲ್ಲೆಯಿಂದ ಮುಸ್ಲಿಂ ಸಮುದಾಯದ ಯಾರಿಗೂ ಅವಕಾಶ ನೀಡಿಲ್ಲ. ಆದ್ದರಿಂದ ಸಾಮಾಜಿಕ ನ್ಯಾಯದಡಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೂಡಾ ಅಧ್ಯಕ್ಷ ಸ್ಥಾನವನ್ನು ಮೊಹಮ್ಮದ್ ಆರಿಫ್ ಉಲ್ಲಾಅವರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಮೊಹಮ್ಮದ್ ಆರಿಫ್ ಉಲ್ಲಾಕಾಂಗ್ರೆಸ್ ಪಕ್ಷದ ಹಲವು ವಿಭಾಗಗಳಲ್ಲಿಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಆದ್ದರಿಂದ ಅವರನ್ನು ಸೂಡಾ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕು ಎಂದರು.
ಟಿ. ಜಫ್ರುಲ್ಲಾ, ಸಯ್ಯದ್ ಉಮರ್ , ಸಾದಿಕ್ ವುಲ್ಲಾ, ನೂರುಲ್ಲಾಖಾನ್ , ಜಬೀವುಲ್ಲಮತ್ತಿತರರಿದ್ದರು.