ಅಶ್ವತ್ಥಾಮ ಪೌರಾಣಿಕ ನಾಟಕ ಇಂದು

Contributed byjayadev435@gmail.com|Vijaya Karnataka
performance of ashwatthama mythological play in mysore
ಅಶ್ವತ್ಥಾಮ ಪೌರಾಣಿಕ ನಾಟಕ ಇಂದು ಮೈಸೂರು: ರಂಗಾನಂದ ಕಲಾ ಸಂಘದ ವತಿಯಿಂದ ಡಾ.ರಾಜ್ ಕುಮಾರ್ ಅವರಿಗೆ ರಂಗನಮನದ ಸರಣಿಯ 3ನೇ ನಾಟಕ, ತಾವು ನಿರ್ದೇಶಿಸಿ ಅಭಿನಯಿಸಿರುವ ‘ಅಶ್ವತ್ಥಾಮ’ ಪೌರಾಣಿಕ ನಾಟಕ ಪ್ರದರ್ಶನವನ್ನು ಜು.26ರಂದು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ರಂಗಸ್ವಾಮಿ ತಿಳಿಸಿದರು. ‘‘ರಾಮಕೃಷ್ಣನಗರದಲ್ಲಿರುವ ರಮಾಗೋವಿಂದ ರಂಗಮಂದಿರದಲ್ಲಿಅಂದು ಸಂಜೆ 6.30ಕ್ಕೆ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿವಿಧಾನ ಪರಿಷತ್ ಸದಸ್ಯ ಆರ್ .ರಘು ಕೌಟಿಲ್ಯ ಅವರನ್ನು ಸನ್ಮಾನಿಸಲಾಗುವುದು. ಮುಖ್ಯ ಅತಿಥಿಯಾಗಿ ನಿವೃತ್ತ ಕೆಎಎಸ್ ಅಧಿಕಾರಿ ಪುಟ್ಟಮಾದಯ್ಯಆಗಮಿಸುವರು. ಮಹಾರಾಜ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್ .ಉದಯಶಂಕರ್ ಅಧ್ಯಕ್ಷತೆವಹಿಸು ವರು,’’ ಎಂದು ಸುದ್ದಿಗೋಷ್ಠಿಯಲ್ಲಿಹೇಳಿದರು. ‘‘ನಾಟಕಕ್ಕೆ ಉಚಿತ ಪ್ರವೇಶವಿದೆ. ವೇದಿಕೆ ಕಾರ್ಯಕ್ರಮದ ನಂತರ ನಾಟಕ ಪ್ರದರ್ಶನವಾಗಲಿದೆ,’’ ಎಂದರು. ಡಿ.ನಾಗೇಂದ್ರ ಕುಮಾರ್ , ಎಸ್ .ನಾಗೇಂದ್ರ ಪ್ರಭು, ಪಿ.ನಾಗಭೂಷಣ್ , ಯಶೋಧ ಇದ್ದರು.