ಮೈಸೂರು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿರುವ ಎರಡು ದಿನಗಳ ಪತ್ರಕರ್ತರು ಮತ್ತು ಕುಟುಂಬ ಸದಸ್ಯರ ಕ್ರೀಡಾಕೂಟಕ್ಕೆ ಮೈಸೂರು ವಿವಿಯ ಓವಲ್ಸ್ ಮೈದಾನದಲ್ಲಿಶನಿವಾರ ಚಾಲನೆ ದೊರೆಯಿತು. ಮೊದಲ ಪಂದ್ಯವನ್ನಾಡಿದ ಅಧ್ಯಕ್ಷ-11, ಗ್ರಾಮಾಂತರ ಉಪಾಧ್ಯಕ್ಷ- 11 ತಂಡವನ್ನು 3 ರನ್ ಗಳ ಅಂತರದಿಂದ ಸೋಲಿಸಿ ಫೈನಲ್ಸ್ ಪ್ರವೇಶಿಸಿತು. 6 ಓವರ್ ಗಳಲ್ಲಿ49 ರನ್ ಗಳನ್ನು ಕಲೆ ಹಾಕಿದ ಅಧ್ಯಕ್ಷರ ತಂಡ, ಗ್ರಾಮಾಂತರ ಉಪಾಧ್ಯಕ್ಷರ ತಂಡವನ್ನು 46 ರನ್ ಗಳಿಗೆ ಕಟ್ಟಿ ಹಾಕುವಲ್ಲಿಯಶಸ್ವಿಯಾಯಿತು. ಎರಡನೇ ಪಂದ್ಯದಲ್ಲಿಗ್ರಾ. ಕಾರ್ಯದರ್ಶಿ ತಂಡವನ್ನು ಸೋಲಿಸಿದ ಪ್ರಧಾನ ಕಾರ್ಯದರ್ಶಿ ತಂಡ ಫೈನಲ್ ಪ್ರವೇಶಿಸಿತು. ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿಗ್ರಾಮಾಂತರ ಕಾರ್ಯದರ್ಶಿ ತಂಡ ಗೆಲುವು ದಾಖಲಿಸಿತು. ಫೈನಲ್ ಪಂದ್ಯದಲ್ಲಿಅಧ್ಯಕ್ಷ -11 ತಂಡ ನೀಡಿದ 42ರನ್ ಗಳ ಗುರಿಯನ್ನು ಇನ್ನು 2 ಬಾಲ್ ಬಾಕಿ ಇರುವಂತೆಯೇ ಗುರಿ ಮುಟ್ಟುವ ಮೂಲಕ ಪ್ರ. ಕಾರ್ಯದರ್ಶಿ -11 ತಂಡ ಪ್ರಶಸ್ತಿ ಗೆದ್ದುಕೊಂಡಿದೆ. ಕ್ರೀಡಾಕೂಟಕ್ಕೆ ಚಾಲನೆ: ಇದಕ್ಕೂ್ಕ ಮುನ್ನ ಕ್ರಿಕೆಟ್ ಪಂದ್ಯಾವಳಿಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೈಸೂರು ವಲಯದ ಅಧ್ಯಕ್ಷ
ಟಿ.ರವೀಂದ್ರ ಬ್ಯಾಟ್ ಬೀಸುವ ಮೂಲಕ ಉದ್ಘಾಟಿಸಿದರು. ಎಪಿಎನ್ ಪ್ರಾಪರ್ಟಿಸ್ ಮ್ಯಾನೇಜಿಂಗ್ ಪಾರ್ಟ್ ನರ್ ಎ.ಪಿ. ನಾಗೇಶ್ ಮತ್ತು ಅಂಬಾರಿ ಟಿವಿ ವಾಹಿನಿಯ ಮಾಲೀಕ, ವಕೀಲ ಆರ್ . ಹೊಯ್ಸಳ ಅವರು ಪಾರಿವಾಳ ಹಾರಿಬಿಡುವ ಮೂಲಕ ಉದ್ಘಾಟಿಸಿದರು. ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ರೇವಣ ಸಿದ್ದಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ , ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ , ಖಜಾಂಚಿ ಎನ್ . ಸುರೇಶ್ , ಗ್ರಾ. ಉಪಾಧ್ಯಕ್ಷ ಎಚ್ .ಎಸ್ .ವೆಂಕಟಪ್ಪ, ಗ್ರಾಮೀಣ ಕಾರ್ಯದರ್ಶಿ ದಾರಾ ಮಹೇಶ್ ಮತ್ತಿತರರು ಇದ್ದರು.