ಆಷಾಢ ಮಾಸದ ಪ್ರಥಮ ಏಕಾದಶಿ ಪ್ರಯುಕ್ತ ರಾಘವೇಂದ್ರ ಸ್ವಾಮಿ ಮಠ, ಅದಮಾರು, ಪಲಿಮಾರು, ಸೋಸಲೆ, ಉತ್ತರಾಧಿ ಮಠ ಸೇರಿದಂತೆ ನಗರದ ಹಲವು ಮಠಗಳಲ್ಲಿಶನಿವಾರ ಮುಂಜಾನೆಯಿಂದ ರಾತ್ರಿವರೆಗೂ ತಪ್ತ ಮುದ್ರಾ ಧಾರಣೆಯು ಶಾಸ್ತೊ್ರೕಕ್ತವಾಗಿ ಹಾಗೂ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು.ವೈಷ್ಣವ ಸಂಪ್ರದಾಯ ಪಾಲಿಸುವವರು ವಯಸ್ಸಿನ ಭೇದವಿಲ್ಲದೆ ಸರತಿಯಲ್ಲಿಸಾಗುವ ಮೂಲಕ ಭಗವಂತನ ಚಿಹ್ನೆ (ಶಂಖ, ಚಕ್ರ)ಗಳ ಮುದ್ರಾ ಧಾರಣೆ ಮಾಡಿಸಿಕೊಂಡರು.
ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದಲ್ಲಿಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಪ್ರಥಮ ಏಕಾದಶಿ ಪ್ರಯುಕ್ತ ಶಿಷ್ಯರಿಗೆ ಮುದ್ರಾಧಾರಣೆ ಮಾಡಿದರು.
ನಗರದ ವಿದ್ಯಾಪೀಠ ವೃತ್ತದಲ್ಲಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿಭಕ್ತರಿಗೆ ತಪ್ತ ಮುದ್ರಾಧಾರಣೆ ಮಾಡಲಾಯಿತು. ಗಾಂಧಿ ಬಜಾರ್ ಬಳಿಯ ಸೋಸಲೆ ವ್ಯಾಸರಾಜ ಮಠ, ಶ್ರೀಕೃಷ್ಣ ವಾದಿರಾಜ ಮಠ, ಬಸವನಗುಡಿಯಲ್ಲಿರುವ ಉತ್ತರಾದಿ ಮಠದಲ್ಲಿಮುಂಜಾನೆಯಿಂದ ರಾತ್ರಿವರೆಗೂ ಭಕ್ತರಿಗೆ ತಪ್ತ ಮುದ್ರಾ ಧಾರಣೆ ಮಾಡಲಾಯಿತು. ಏಕಾದಶಿ ಹಿನ್ನೆಲೆಯಲ್ಲಿಬೆಳಗ್ಗೆಯಿಂದಲೇ ಹಲವರು ಉಪವಾಸದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿಪಾಲ್ಗೊಂಡಿದ್ದರು.
ಜೆ.ಪಿ. ನಗರದ ಲಕ್ಷ್ಮೇ ವೆಂಕಟೇಶ್ವರ ದೇವಾಲಯ, ಬನಶಂಕರಿ ದೇವಾಲಯ, ಆಂಜನೇಯ ಮತ್ತು ವೆಂಕಟೇಶ್ವರನ ದೇವಾಲಯಗಳೂ ಸೇರಿದಂತೆ ಹಲವೆಡೆ ಶನಿವಾರ ದೇವರಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ನೆರವೇರಿಸಲಾಯಿತು. ಏಕಾದಶಿ ಆಚರಣೆ ಮಾಡುವ ಸಂಪ್ರದಾಯವುಳ್ಳವರು ಶನಿವಾರ ಮನೆಗಳಲ್ಲಿಕೂಡ ಪೂಜೆ, ಪುನಸ್ಕಾರಗಳನ್ನು ನಡೆಸಿದರು.