ಯೂಟ್ಯೂಬ್ ಕೃಷಿ ಬಗ್ಗೆ ಎಚ್ಚರ

Contributed bysunilsirigere78@gmail.com|Vijaya Karnataka
alarm on youtube agriculture vijay agricultural scientists recommendations
ರೈತ-ಕೃಷಿ ವಿಜ್ಞಾನಿಗಳ ಸಂವಾದ ಕಾರ್ಯಕ್ರಮ | ಎಲ್ ನಿನೋ ಸವಾಲು ಎದುರಿಸಲು ಬಹುಬೆಳೆ ಪದ್ಧತಿ ಅಳವಡಿಸಿಕೊಳ್ಳುವಂತೆ ಸಲಹೆ(ಕಿಕ್ಕರ್ )

ಯೂಟ್ಯೂಬ್ ಕೃಷಿ ಬಗ್ಗೆ ಎಚ್ಚರ
----

ವಿಕ ಸುದ್ದಿಲೋಕ ಸಿರಿಗೆರೆ(ಚಿತ್ರದುರ್ಗ)

‘‘ಯೂಟ್ಯೂಬ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿಕಂಡ ಮಾಹಿತಿ ಆಧಾರದಲ್ಲಿಗೊತ್ತಿಲ್ಲದ ಬೆಳೆಗಳನ್ನು ಬೆಳೆಯಲು ಮುಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದು’’ ಎಂದು ದಾವಣಗೆರೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಎಂ.ಜಿ.ಬಸವನಗೌಡ ರೈತರಿಗೆ ಎಚ್ಚರಿಕೆ ನೀಡಿದರು.

ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ ಶಾಂತಿವನದಲ್ಲಿಗುರುವಾರ ನಡೆದ ರೈತ-ಕೃಷಿ ವಿಜ್ಞಾನಿಗಳ ಸಂವಾದ ಕಾರ್ಯಕ್ರಮದಲ್ಲಿಅವರು, ಮಾತನಾಡಿದರು.

‘‘ಕೆಲ ವರ್ಷಗಳ ಹಿಂದೆ ಡ್ರಾಗನ್ ಹಣ್ಣು ಬೆಳೆಗೆ ಭಾರೀ ಬೇಡಿಕೆ ಇತ್ತು. ಆದರೆ ಈಗ ಅದನ್ನು ಬೆಳೆದ ಅನೇಕ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಸ್ಥಳೀಯ ಹವಾಮಾನ, ಮಾರುಕಟ್ಟೆ ಮತ್ತು ವೈಜ್ಞಾನಿಕ ಸಲಹೆಗಳನ್ನು ಪರಿಗಣಿಸದೆ ಹೊಸ ಬೆಳೆಗಳತ್ತ ಧಾವಿಸುವುದು ಸೂಕ್ತವಲ್ಲ. ಬರುವ ಬೇಸಿಗೆಯಲ್ಲಿತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹೆದರದೇ ಬಹುಬೆಳೆ ಪದ್ಧತಿ ಅನುಸರಿಸಬೇಕು’’ ಎಂದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್ . ದೇವರಾಜ್ ಮಾತನಾಡಿ ‘‘ಎಲ್ ನಿನೋ ಪರಿಣಾಮದಿಂದ ಆತಂಕದಲ್ಲಿರುವ ರೈತರಿಗೆ ಸೂಕ್ತ ಬೆಳೆ ಆಯ್ಕೆ , ನೀರಿನ ನಿರ್ವಹಣೆ ಹಾಗೂ ತೋಟಗಳ ಸಂರಕ್ಷಣೆ ಕುರಿತು ವೈಜ್ಞಾನಿಕ ಮಾರ್ಗದರ್ಶನ ನೀಡಲಾಗುತ್ತಿದೆ’’ ಎಂದರು.

‘‘ಅಡಕೆ ತೋಟಗಳಲ್ಲಿಕೊಕೋ, ಮೆಣಸು, ಬಾಳೆ, ಏಲಕ್ಕಿ, ಲವಂಗ ಹಾಗೂ ಚಕ್ಕೆ ಮೊದಲಾದ ಅಂತರ ಬೆಳೆಗಳನ್ನು ಬೆಳೆಯಬೇಕು. ಅಡಕೆಗೆ ಅಗತ್ಯಕ್ಕಿಂತ ಹೆಚ್ಚು ನೀರು ನೀಡಿ ಅದನ್ನು ನೀರಿನ ಅವಲಂಬಿತ ಬೆಳೆಯನ್ನಾಗಿ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿಹನಿ ನೀರಾವರಿ, ಮುಚ್ಚಿಕೆ ಪದ್ಧತಿ ಹಾಗೂ ಮಿಶ್ರ ಬೆಳೆಗಳ ಮೂಲಕ ತೇವಾಂಶ ಸಂರಕ್ಷಣೆ ಮಾಡಬೇಕು’’ ಎಂದು ಸಲಹೆ ನೀಡಿದರು.

ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ ಮಾತನಾಡಿ, ‘‘ಭೂಮಿಯ ಫಲವತ್ತತೆ ಹೆಚ್ಚಿಸಲು ಡಯಾಂಚ, ಸೆಣಬು ಸೇರಿದಂತೆ ಹಸಿರು ಗೊಬ್ಬರ ಬೆಳೆಗಳನ್ನು ಬೆಳೆಯಬೇಕು. ಈ ಬಾರಿ ಸಾಧ್ಯವಾದಷ್ಟು ಹರಳು ಗೊಬ್ಬರದ ಬದಲು ನೀರಿನಲ್ಲಿಕರಗುವ ಗೊಬ್ಬರ ಬಳಸುವುದು ಒಳಿತು. ಇನ್ನು ಬಿತ್ತನೆ ಮಾಡದ ರೈತರು ಸುಧಾರಿತ ತಳಿಯ ರಾಗಿ, ನವಣೆ, ಸಜ್ಜೆ ಹಾಗೂ ಹುರುಳಿ ಬೆಳೆಗಳತ್ತ ಗಮನ ಹರಿಸಬೇಕು’’ ಎಂದರು.

ಕಾರ್ಯಕ್ರಮದಲ್ಲಿಸಸ್ಯ ಸಂರಕ್ಷಣೆ ತಜ್ಞ ಡಾ.ಟಿ.ಜಿ. ಅವಿನಾಶ್ , ಗೃಹ ವಿಜ್ಞಾನಿ ಡಾ. ಸುಪ್ರಿಯಾ ಪಾಟೀಲ್ , ಮಣ್ಣು ವಿಜ್ಞಾನಿ ಡಾ.ಡಿ.ವಿ. ಪ್ರಶಾಂತ್ , ಪಶು ವಿಜ್ಞಾನಿ ಡಾ.ಬಿ.ಎಸ್ . ದೀಪಕ್ , ಪ್ರಗತಿಪರ ರೈತ ಎನ್ . ಬಸವರಾಜಪ್ಪ, ಹನುಮನಹಳ್ಳಿ ಹರೀಶ್ ಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.

----

ಕೋಟ್ //

ಏಕಬೆಳೆ ಪದ್ಧತಿಗಿಂತ ಬಹುಬೆಳೆ ಪದ್ಧತಿ ರೈತರನ್ನು ಸಂಕಷ್ಟದಿಂದ ರಕ್ಷಿಸುತ್ತದೆ. ರಾಜ್ಯದಲ್ಲಿಅಗತ್ಯವಿರುವಷ್ಟು ಅರಣ್ಯ ಪ್ರದೇಶ ಇಲ್ಲದ ಕಾರಣ ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.

-ರಘುರಾಜ್ , ಕೃಷಿ ವಿಸ್ತರಣೆ ವಿಜ್ಞಾನಿ

ಕೋಟ್ //

ರೈತರಲ್ಲಿಆತ್ಮವಿಶ್ವಾಸ ಮೂಡಿಸುವ ಉದ್ದೇಶದಿಂದ ಈ ಸಂವಾದ ಆಯೋಜಿಸಲಾಗಿದೆ. ಅಂತರ ಬೆಳೆಗಳ ಜತೆಗೆ ಹಣ್ಣಿನ ಗಿಡಗಳನ್ನು ಬೆಳೆಸುವ ಮೂಲಕ ಹೆಚ್ಚುವರಿ ಆದಾಯಗಳಿಸಬಹುದು.

-ಸಿ.ಆರ್ .ನಾಗರಾಜ್ , ಕೃಷಿ ಸಮಿತಿ ಸದಸ್ಯ

---

-----

ಬಾಕ್ಸ್ //

ಎಲ್ ನಿನೋ ಭಯ ನಿವಾರಿಸಿದ ಸಂವಾದ

ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿಮಳೆಯ ಪ್ರಮಾಣ ಅತ್ಯಂತ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ರೈತರು ಆತಂಕಕ್ಕೆ ಒಳಗಾಗಬಾರದು. ಕಡಿಮೆ ನೀರು ಬೇಕಾಗುವ ಬೆಳೆಗಳನ್ನು ಆಯ್ಕೆ ಮಾಡುವುದು, ತೋಟಗಳಲ್ಲಿತೇವಾಂಶ ಸಂರಕ್ಷಣೆ, ಮುಚ್ಚಿಕೆ ಪದ್ಧತಿ ಹಾಗೂ ಹನಿ ನೀರಾವರಿ ಅಳವಡಿಸಿಕೊಳ್ಳುವ ಮೂಲಕ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬಹುದು ಎಂದು ಕೃಷಿ ವಿಜ್ಞಾನಿಗಳು ರೈತರಿಗೆ ಮಾರ್ಗದರ್ಶನ ನೀಡಿದರು.

----

16 ಎಸ್ ಆರ್ ಜಿ ಪಿ 3

ಸಿರಿಗೆರೆಯ ಶಾಂತಿವನದಲ್ಲಿಗುರುವಾರ ನಡೆದ ರೈತ-ಕೃಷಿ ವಿಜ್ಞಾನಿಗಳ ಸಂವಾದ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು.