Namrata Gowda Has She Disappeared From The Serial A Transition To Cinema
ಸೀರಿಯಲ್ ಬಿಟ್ಟು ಸಿನಿಮಾ ಕಡೆ ನಮ್ರತಾ?
Contributed by: Kiran Mr. Kumar|Vijaya Karnataka•
ರಿಯಾಲಿಟಿ ಶೋ ಬಳಿಕ ಬಹುನಿರೀಕ್ಷಿತ ‘ಕರ್ಣ’ ಸೀರಿಯಲ್ ನ ಮುಖ್ಯ ಪಾತ್ರದಲ್ಲಿಕಾಣಿಸಿಕೊಂಡಿದ್ದ ನಟಿ ನಮ್ರತಾ ಗೌಡ ಈಗ ಸೀರಿಯಲ್ ನಲ್ಲಿಂದಲೂ ಕಾಣೆಯಾಗಿದ್ದಾರೆ. ಹಾಗಾದರೆ ಈಗ ಏನು ಮಅಡುತ್ತಿದ್ದಾರೆ ಎಂಬುದರ ಬಗ್ಗೆ ಇಲ್ಲಿದೆ ಬಿಗ್ ಅಪ್ಡೇಟ್ .
ಕಿರಣ್ ಚಂದ್ರಬಾಲ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸಾಕಷ್ಟು ಸಿನಿಮಾಗಳಲ್ಲಿನಟಿಸಿ ಸೈ ಎನಿಸಿಕೊಂಡವರು ನಟಿ ನಮ್ರತಾ ಗೌಡ. ‘ನಾಗಿಣಿ’ ಧಾರಾವಾಹಿ ಮೂಲಕ ಮನೆ ಮಾತಾಗಿ ‘ ಬಿಗ್ ಬಾಸ್ ’ ರಿಯಾಲಿಟಿ ಶೋ ಮೂಲಕ ಕಮಾಲ್ ಮಾಡಿದ್ದರು. ಅನಂತರ ಅವರು ಮತ್ತೇ ಪ್ರೇಕ್ಷಕರಿಗೆ ಹತ್ತಿರವಾಗಿದ್ದು ‘ಕರ್ಣ’ ಧಾರಾವಾಹಿ ಮೂಲಕ. ಈಗ ಈ ಧಾರಾವಾಹಿಯಲ್ಲಿಕಾಣಿಸುತ್ತಿಲ್ಲ. ಹಾಗಾದರೆ ನಿತ್ಯಾ ಪಾತ್ರ ಮುಗೀತಾ? ಅವರು ಧಾರಾವಾಹಿ ತಂಡದಿಂದ ಹೊರ ನಡೆದಿದ್ದಾರ ಎಂಬೆಲ್ಲಚರ್ಚೆ ಜೋರಾಗಿದೆ.
ನಮ್ರತಾ ಹೊರಬಂದ ಮೇಲೆ ಸೀರಿಯಲ್ ಮೊದಲಿನಷ್ಟು ಥ್ರಿಲ್ ಕೊಡುತ್ತಿಲ್ಲಎಂದು ಅಭಿಮಾನಿಗಳು ಹೇಳುತ್ತಿದ್ದು, ನಮ್ರತಾ ವಾಪಸ್ ಆಗಬೇಕೆಂದು ಕೇಳುತ್ತಿದ್ದಾರೆ. ಹಾಗಾದರೆ ಈಗ ಅವರು ಏನು ಮಾಡುತ್ತಿದ್ದಾರೆ? ನಿಜವಾಗಲೂ ಅವರ ಪಾತ್ರ ಮುಗಿದಿದೆಯೇ ಎಂಬ ಮಾಹಿತಿ ಇಲ್ಲಿದೆ.
ಸಿನಿಮಾ ನಟನೆ
ಸದ್ಯ ನಮ್ರತಾ ವಿಜಯ್ ರಾಘವೇಂದ್ರ ಅಭಿನಯದ ಮಹಾನ್ ಸಿನಿಮಾದಲ್ಲಿನಟಿಸುತ್ತಿದ್ದಾರೆ. ‘ಸಾಕಷ್ಟು ಸಿನಿಮಾ ಆಫರ್ ಗಳು ಬಂದರೂ ನಾನು ಒಪ್ಪಿಕೊಂಡಿರಲಿಲ್ಲ. ಬಂದ ಪಾತ್ರಗಳನ್ನೆಲ್ಲಾಮಾಡಲು ನನಗೂ ಇಷ್ಟವಿಲ್ಲ. ನನ್ನ ಮೇಲೆ ಜನರಿಗೆ ನಿರೀಕ್ಷೆ ಇದೆ. ಆ ಕಾರಣಕ್ಕೆ ಸಾಕಷ್ಟು ಕಥೆಗಳನ್ನು ಕೇಳಿದ್ದರೂ ಯಾವುದಕ್ಕೂ ಒಕೆ ಮಾಡಿರಲಿಲ್ಲ. ‘ಕರ್ಣ’ ಸೀರಿಯಲ್ ನಲ್ಲಿಒಳ್ಳೆಯ ಪಾತ್ರ ಸಿಕ್ಕ ಮೇಲೆ ಯಾವುದೇ ಸಿನಿಮಾಗಳಿಗೆ ಓಕೆ ಎಂದಿರಲಿಲ್ಲ. ಆದರೆ ಪಿ.ಸಿ. ಶೇಖರ್ ನಿರ್ದೇಶನದ ‘ಮಹಾನ್ ’ ಚಿತ್ರದಲ್ಲಿನನ್ನ ಪಾತ್ರಕ್ಕಿದ್ದ ಪ್ರಾಮುಖ್ಯತೆ ನೋಡಿ ನಟಿಸಲು ಒಪ್ಪಿದೆ. ಸದ್ಯ ಆ ಸಿನಿಮಾದ ಶೂಟ್ ಕೂಡ ಮುಗಿಸಿದ್ದೇನೆ’ ಎಂದಿದ್ದಾರೆ.
ತಂಡದ ನಿರ್ಧಾರಕ್ಕೆ ಕಾಯುತ್ತಿರುವೆ
‘ಕರ್ಣ’ ಸೀರಿಯಲ್ ನಲ್ಲಿನಿತ್ಯಾ ಪಾತ್ರದಲ್ಲಿನಟಿ ನಮ್ರಾತಾ ಗೌಡ ಮುಂದುವರಿಯುತ್ತಾರ ಎನ್ನುವ ಬಗ್ಗೆ, ‘ಸದ್ಯಕ್ಕೆ ಸೀರಿಯಲ್ ನಲ್ಲಿನಟಿಸುತ್ತಿಲ್ಲ. ಸೀರಿಯಲ್ ನಲ್ಲಿನನ್ನ ಪಾತ್ರ ಮುಂದುವರಿಯುತ್ತಾ ಇಲ್ಲವಾ ಎನ್ನುವ ಬಗ್ಗೆ ಧಾರಾವಾಹಿ ತಂಡದಿಂದ ಅಧಿಕೃತವಾಗಿ ಮಾಹಿತಿ ಬರಬೇಕಿದೆ. ಅದಕ್ಕೆ ನಾನು ಕಾಯುತ್ತಿದ್ದೇನೆ. ಈ ಪಾತ್ರ ಹೀಗೆ ಮುಗಿಯುತ್ತದೆ ಎನ್ನುವ ಬಗ್ಗೆ ಆರಂಭದಲ್ಲಿಯಾವುದೇ ಮಾಹಿತಿ ಇರಲಿಲ್ಲ. ಹಾಗಾಗಿ ಈ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ನಾನಂತೂ ನಿತ್ಯಾ ಪಾತ್ರವನ್ನು ಸದ್ಯ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿತ್ಯ ಪಾತ್ರದ ಬಗ್ಗೆ ನಿರ್ದಿಷ್ಟ ಮಾಹಿತಿ ಸಿಕ್ಕ ಮೇಲೆಯೇ ಸಿನಿಮಾ, ಸೀರಿಯಲ್ ಅಥವಾ ವೆಬ್ ಸರಣಿಗಳಲ್ಲಿನಟಿಸುವ ಬಗ್ಗೆ ಯೋಚಿಸುತ್ತೇನೆ. ಸದ್ಯಕ್ಕೆ ಯಾವುದನ್ನು ಒಪ್ಪಿಕೊಂಡಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.