ಹೊರಗಡೆಯ ಮೆಟ್ಟಿಲುಗಳು ಅಂದವಾಗಿದ್ದಷ್ಟು ಆ ಮನೆ ಅತ್ಯಾಕರ್ಷಕವಾಗಿ ಕಾಣುತ್ತದೆ.
------------------------------
ಬಹುಮಹಡಿಗಳಿರುವ ದೊಡ್ಡ ಮನೆಗಳಲ್ಲಿಹೊರಗಿನ ಮೆಟ್ಟಿಲುಗಳ ವಿನ್ಯಾಸ ತುಂಬಾ ಮುಖ್ಯವಾಗುತ್ತದೆ. ಯಾಕೆಂದರೆ ನೋಡುಗರಿಗೆ ಮೊದಲು ಕಾಣಿಸುವುದೇ ಹೊರಗಿನ ಮೆಟ್ಟಿಲು. ಇಂಥ ಹೊರಾಂಗಣ ಮೆಟ್ಟಿಲುಗಳಲ್ಲಿಅನೇಕ ವಿನ್ಯಾಸಗಳಿವೆ.
ಮರದ ಮೆಟ್ಟಿಲು: ಮರದ ದಿಮ್ಮಿಗಳಲ್ಲಿನಾನಾ ಬಗೆಯ ಡಿಸೈನ್ ಮಾಡಿ ಹೊರಾಂಗಣ ಮೆಟ್ಟಿಲುಗಳನ್ನು ನಿರ್ಮಿಸಬಹುದು. ಆಧುನಿಕ ಕಟ್ಟಡಗಳಿಗೆ ಮರದ ಮೆಟ್ಟಿಲುಗಳ ಅಳವಡಿಕೆ ಈಗ ಟ್ರೆಂಡಿಂಗ್ ನಲ್ಲಿದೆ.
ಬಾಕ್ಸ್ ಮೆಟ್ಟಿಲು: ಚೌಕಾಕಾರ ಅಥವಾ ಬಾಕ್ಸ್ ಮೆಟ್ಟಿಲುಗಳು ಮನೆಯ ಹೊರಾಂಗಣದ ಅಂದವನ್ನು ದುಪ್ಪಟ್ಟುಗೊಳಿಸುತ್ತದೆ. ಇದನ್ನು ಮರ, ಸಿಮೆಂಟ್ , ಇಟ್ಟಿಗೆ ಮುಂತಾದ ವಸ್ತುಗಳನ್ನು ಬಳಸಿ ನಿರ್ಮಿಸಬಹುದು.
ಇಟ್ಟಿಗೆ ಮೆಟ್ಟಿಲು: ಯಾವುದೇ ಸುಣ್ಣ, ಬಣ್ಣ ಬಳಿಯದೆ, ಕೇವಲ ಇಟ್ಟಿಗೆಗಳಿಂದ ನಿರ್ಮಿಸಲಾಗುವ ಇಟ್ಟಿಗೆಯ ಮೆಟ್ಟಿಲುಗಳು ನೈಸರ್ಗಿಕವಾಗಿ ಕಾಣುವುದರಿಂದ ನೋಡುಗರ ಕಣ್ಮನ ಸೆಳೆಯುತ್ತವೆ.
ಹೆಂಚಿನ ಮೆಟ್ಟಿಲು: ಇಟ್ಟಿಗೆಗಳ ಬದಲಿಗೆ ಹೆಂಚುಗಳನ್ನು ಬಳಸಿ ಮೆಟ್ಟಿಲು ನಿರ್ಮಿಸಬಹುದು. ಐಷಾರಾಮಿ ಮನೆಗಳಿಗೆ ಇಂಥ ಮೆಟ್ಟಿಲುಗಳು ಹೊಂದುತ್ತವೆ.
ಲೋಹದ ಮೆಟ್ಟಿಲು: ಭಾರತದ ಬಹುತೇಕ ಮನೆಗಳಲ್ಲಿಲೋಹದಿಂದ ನಿರ್ಮಿಸಲಾಗಿರುವ ಮೆಟ್ಟಿಲುಗಳನ್ನು ಕಾಣಬಹುದು. ಇದರ ಅಳವಡಿಕೆ ಮತ್ತು ನಿರ್ವಹಣೆ ಸುಲಭವಾಗಿರುವ ಕಾರಣ ಬಹುತೇಕ ಮಂದಿ ಲೋಹದ ಮೆಟ್ಟಿಲುಗಳಿಗೆ ಆದ್ಯತೆ ನೀಡುತ್ತದೆ. ಇದು ದೀರ್ಘ ಕಾಲ ಬಾಳಿಕೆಯೂ ಬರುತ್ತದೆ.
ಕೋಟೆ ಮೆಟ್ಟಿಲು: ಅನೇಕ ತಲೆಮಾರುಗಳಿಗೆ ಒಂದೇ ಮಾದರಿಯ ಮೆಟ್ಟಿಲು ಬೇಕು ಎಂದು ಬಯಸುವವರು ಕೋಟೆ ಮಾದರಿಯ ಮೆಟ್ಟಿಲುಗಳನ್ನು ಹೊರಾಂಗಣಕ್ಕೆ ಅಳವಡಿಸಬಹುದು.
ಅಮೃತಶಿಲೆ: ಹೊರಾಂಗಣ ಉದ್ಯಾನಕ್ಕೆ ಅಮೃತಶಿಲೆಯ ಮೆಟ್ಟಿಲು ಸೂಕ್ತವಾಗುತ್ತದೆ. ಇವು ರಾಯಲ್ ಲುಕ್ ನೀಡುತ್ತವೆ. ಇದು ಆಧುನಿಕ ವಿನ್ಯಾಸವಾಗಿದ್ದು, ಲಕ್ಷುರಿ ಮನೆ ನಿರ್ಮಿಸುವವರು ಈ ಮಾದರಿಯ ಮೆಟ್ಟಿಲು ಅಳವಡಿಸಬಹುದು.
ಸಿಮೆಂಟ್ ಮೆಟ್ಟಿಲು: ಇತ್ತೀಚಿನ ದಿನಗಳಲ್ಲಿಸಿಮೆಂಟ್ ಮೆಟ್ಟಿಲುಗಳೇ ಹೆಚ್ಚು. ಸಿಮೆಂಟ್ ಬಳಸಿ ನಾನಾ ವಿನ್ಯಾಸದ ಮೆಟ್ಟಿಲುಗಳನ್ನು ನಿರ್ಮಿಸಬಹುದು.
ಕಲ್ಲುಮೆಟ್ಟಿಲು: ವಿವಿಧ ಕಲ್ಲುಗಳನ್ನು ಬಳಸಿ ನೈಸರ್ಗಿಕವಾಗಿ ಮೆಟ್ಟಿಲು ಕಟ್ಟಬಹುದು ಅಥವಾ ವಾಸ್ತುಶಿಲ್ಪಗಳ ರೀತಿಯಲ್ಲಿಯೂ ಮೆಟ್ಟಿಲು ನಿರ್ಮಾಣ ಮಾಡಬಹುದು. ಇದೇ ರೀತಿ ಹೊರಾಂಗಣ ಮೆಟ್ಟಿಲುಗಳಿಗೆ ನಾನಾ ಬಗೆಯ ಬಣ್ಣ ಬಳಿದು ಕೂಡ ಆಕರ್ಷಕವಾಗಿ ಕಾಣುವಂತೆ ಮಾಡಬಹುದು.