ದಿನಭವಿಷ್ಯ 24 ಜುಲೈ 2026

Contributed bynetravati.krishnamurthy@timesgroup.com|Vijaya Karnataka
july 24 2026 daily horoscope
ದಿನಭವಿಷ್ಯ 24 ಜುಲೈ 2026

ಶ್ರೀಪತಿ ಭಟ್ | ಬೆಂಗಳೂರು
=======

(ಮೇಷ, ತುಲಾ, ಕುಂಭ-ಈ ರಾಶಿಯವರಿಗೆ ಗಜ ಯೋಗ)

ಧಿಧಿಧಿಧಿಧಿ----------------

ಮೇಷ : ನಿಮ್ಮೆಲ್ಲಾಪ್ರಮುಖ ಗುರಿ-ಸಾಧನೆಗಳಿಗೆ ಇಂದಿನಿಂದ ಒಳ್ಳೆಯ ಚಾಲನೆ ಸಿಗುವುದು. ಅಗತ್ಯವಿದ್ದಲ್ಲಿಹೊಸ ಸ್ಥಾನ ಅಥವಾ ಹೊಸ ಮನೆಗೆ ಹೋಗುವ ಯೋಚನೆ ಮಾಡುವಿರಿ. ಕೆಲಸ-ಕಾರ್ಯಗಳಲ್ಲಿಅತಿ ಹೆಚ್ಚಿನ ಉತ್ಸಾಹ ಕಾಣುವಿರಿ.

(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ಕಿತ್ತಳೆ)

------

ವೃಷಭ : ಸೇವಾ ಮನೋಭಾವ ಇರುವ ವ್ಯಕ್ತಿಗಳು ಹೆಚ್ಚು ಪ್ರಶಂಸೆ ಪಡೆಯುವರು. ವಿದ್ಯುತ್ ಉಪಕರಣಗಳ ಮಾರಾಟದಿಂದ ಲಾಭ ಪಡೆಯುವಿರಿ. ನೀವು ಕೈಗೊಂಡ ಕೆಲಸಗಳು ಈ ದಿನ ಸುಗಮವಾಗಿ ಸಾಗಲಿವೆ.

(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಕಂದು)

--------

ಮಿಥುನ : ಆಸ್ತಿ ಕೊಳ್ಳುವ ನಿರ್ಧಾರದಲ್ಲಿಲಾಭ-ನಷ್ಟವನ್ನು ಇನ್ನೊಮ್ಮೆ ಯೋಚಿಸುವುದು ಉತ್ತಮ. ಉಷ್ಣ ವ್ಯಾಧಿ ಉಪಶಮನಕ್ಕೆ ಬೇಕಾದ ಔಷಧಿ ಸ್ವೀಕರಿಸಿ. ನಿಮ್ಮ ದೃಢ ನಿರ್ಧಾರದಿಂದ ನಿಮ್ಮ ಹಿಂದಿನ ಕೆಲಸ-ಕಾರ್ಯಗಳೆಲ್ಲಪೂರ್ಣಗೊಳ್ಳಲಿವೆ.

(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ಗಾಢ ನೀಲಿ)

--------

ಕಟಕ: ನಿಮ್ಮ ವ್ಯವಹಾರಗಳಲ್ಲಿಹಿಡಿತ ಸಾಧಿಸಿದ್ದೀರಿ. ಹಾಗಾಗಿ ಸಾಮಾಜಿಕ ಬದುಕಿನಲ್ಲಿಹೊಸದಾದ ಹುರುಪು, ನವ ಉಲ್ಲಾಸವನ್ನು ಕಾಣಲಿದ್ದೀರಿ. ಉಡುಪು ವಿನ್ಯಾಸಗಾರರಿಗೆ ಹೇರಳ ಅವಕಾಶಗಳು ಲಭ್ಯವಾಗುತ್ತವೆ.

(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಕೇಸರಿ)

--------------

ಸಿಂಹ : ಕಾರ್ಯಕ್ಷೇತ್ರಗಳಲ್ಲಿಹೆಚ್ಚಿನ ಜವಾಬ್ದಾರಿ ಜೊತೆಗೆ ಕಲಿಕೆಗಾಗಿ ಪ್ರಯಾಣ ಮಾಡಬೇಕಾಗುತ್ತದೆ. ವಿವಾಹದ ಬಗ್ಗೆ ಯೋಚನೆ ಬರಲಿದೆ. ವಿದ್ಯಾರ್ಥಿಗಳಿಗೆ ಮಿತ್ರವರ್ಗದವರ ಸಹವಾಸ ಅನುಕೂಲವಾಗಿ ಕಂಡುಬರುವುದು.

(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಕಪ್ಪು)

---------------

ಕನ್ಯಾ : ಧಾರ್ಮಿಕ ಕ್ಷೇತ್ರದಲ್ಲಿರುವವರು ಈ ದಿನ ತಮ್ಮ ವೃತ್ತಿ ಜೀವನದತ್ತ ಹೆಚ್ಚಿನ ಗಮನ ಹರಿಸಿ. ವಿವಾಹಕ್ಕೆ ಸೋದರಿಕೆಯಲ್ಲಿಸಂಬಂಧ ಪ್ರಸ್ತಾಪ ನಡೆಸಬಹುದು. ಸಾಲ ಪಡೆದ ಹಣವನ್ನು ಹಿಂದಿರುಗಿಸುವ ಪ್ರಯತ್ನ ಮಾಡಿ.

(ಶುಭ ಸಂಖ್ಯೆ : 8, ಅದೃಷ್ಟ ಬಣ್ಣ : ಹಸಿರು)

-----------

ತುಲಾ : ನೀವು ತೋರಿದ ಹೆಚ್ಚಿನ ಪ್ರೀತಿ ಮತ್ತು ಕಾಳಜಿ ನಿಮ್ಮ ಮನೆಯ ವಾತಾವರಣ ಬದಲಿಸಲಿದ್ದು, ಮನಸಿಗೆ ಬಹಳ ಸಂತಸ ಸಿಗಲಿದೆ. ಆರೋಗ್ಯದ ವಿಚಾರದಲ್ಲಿಹೆಚ್ಚಿನ ಗಮನ ಹರಿಸಿ.

(ಶುಭ ಸಂಖ್ಯೆ : 6, ಅದೃಷ್ಟ ಬಣ್ಣ : ಹಳದಿ)

----------

ವೃಶ್ಚಿಕ : ಶ್ರೀದೈವಾನುಗ್ರಹ ನಿಮ್ಮ ಮೇಲಿರುವುದರಿಂದ ಹಿಡಿದ ಕೆಲಸಗಳು ದಡ ಸೇರಿತ್ತವೆ. ಈ ದಿನ ಯಾವುದೇ ಹೊಸ ವ್ಯಕ್ತಿಗಳಿಂದ ಪ್ರಚೋಚನೆಗೆ ಒಳಗಾಗದಿರಿ. ಮನೆಯಲ್ಲಿಮಂಗಳ ಕಾರ್ಯಗಳ ತಯಾರಿ ನಡೆಯಲಿದೆ.

(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಕೆಂಪು)

----------

ಧನು : ಕುಟುಂಬದಲ್ಲಿಆಸ್ತಿಯ ಸಂಬಂಧ ಎದುರಾದ ಸಮಸ್ಯೆಗಳು ನಿರಾತಂಕವಾಗಿ ಮುಗಿಯಲಿದೆ. ಸಹೋದ್ಯೋಗಿಗಳಲ್ಲಿಪ್ರೀತಿಯಿಂದ ವರ್ತಿಸುವುದರಿಂದ ನಿಮ್ಮ ಕೆಲಸ ಸರಾಗವಾಗಿ ಸಾಗಲಿವೆ.

(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ನೀಲಿ)

-----------

ಮಕರ : ನಿಮಗೆ ಎದುರಾಗುವ ಅವಕಾಶಗಳಿಂದ ನಿಮ್ಮ ಜೀವನದ ಉತ್ಸಾಹದ ಚಿಲುಮೆ ಇಮ್ಮಡಿಗೊಳ್ಳಲಿದೆ. ವಕೀಲರಿಗೆ ಜಯ ದೊರೆತು ಧನಾಗಮ ಆಗಲಿದೆ. ರಾಜಕೀಯ ವ್ಯಕ್ತಿಗಳೊಂದಿಗೆ ಒಡನಾಟ ಬೆಳೆಸಿಕೊಳ್ಳುವಿರಿ.

(ಶುಭ ಸಂಖ್ಯೆ :3, ಅದೃಷ್ಟ ಬಣ್ಣ : ಕಂಚು)

--------

ಕುಂಭ : ಸತ್ಯದ ಹಾದಿಗೆ ಯಾವಾಗಲೂ ಅಡೆತಡೆಗಳಿರುತ್ತವೆ ಎಂಬುದನ್ನು ಮರೆಯದಿರಿ. ಅಧಿಕ ಒತ್ತಡದಿಂದ ಅನಾರೋಗ್ಯ ಸಮಸ್ಯೆ ಎದುರಾಗಬಹುದು. ಈ ದಿನ ಸ್ವಲ್ಪ ಸಮಯವನ್ನು ನಿಮ್ಮ ಆಪ್ತರಿಗಾಗಿ ಮೀಸಲಿಡಬೇಕಾಗುತ್ತದೆ.

(ಶುಭ ಸಂಖ್ಯೆ :1, ಅದೃಷ್ಟ ಬಣ್ಣ : ಆಕಾಶನೀಲಿ)

=---------------

ಮೀನ : ಏರುಪೇರಾಗಿದ್ದ ಆರ್ಥಿಕ ಪರಿಸ್ಥಿತಿಯನ್ನು ಸರಿದಾರಿಗೆ ತಂದ ನೆಮ್ಮದಿ ನಿಮ್ಮಲ್ಲಿಂದು ಕಾಣಲಿದೆ. ಮಕ್ಕಳ ಜೀವನದ ಕೆಲವು ವಿಚಾರಗಳ ಬಗ್ಗೆ ನಿರ್ಧಾರ ಮಾಡುವ ದಿನ ಇದಾಗಲಿದೆ. ಸಂಸಾರದಲ್ಲಿನೆಮ್ಮದಿ ವೃದ್ಧಿಯಾಗಲಿದೆ.

(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಬಿಳಿ)