ಸ್ಲಗ್ : ಮಾನ್ಸೂನ್ ಸ್ವಾದಮಳೆಗಾಲದ ಈ ಸಮಯದಲ್ಲಿಬಿದಿರ ಮೆಳೆಯಲ್ಲಿಎಳೆಯ ಬಿದಿರು ಸುಂದರವಾಗಿ ಕಂಗೊಳಿಸುತ್ತವೆ. ಇವು ನೋಡಲಷ್ಟೇ ಸುಂದರವಲ್ಲ, ಇದರಿಂದ ತಯಾರಿಸಿದ ಪದಾರ್ಥ ವಿಶಿಷ್ಟ ಸುವಾಸನೆಯ ಜೊತೆ ರುಚಿಕರವೂ ಹೌದು. ಕಳಲೆಯ
ವೈವಿಧ್ಯಮಯ ಅಡುಗೆಯ ರುಚಿ ಸವಿಯಲು ಇದು ಸಮಯ. ಆದರೆ ಕಳಲೆಯನ್ನು ಅಡುಗೆಗೆ ಬಳಸುವ ಮೊದಲು ಮೇಲಿನ ಸಿಪ್ಪೆ ಬಿಡಿಸಿ ಹೆಚ್ಚಿಕೊಂಡು ನೀರಿನಲ್ಲಿಹಾಕಿಟ್ಟು ನಾಲ್ಕೈದು ದಿನಗಳ ಕಾಲ ಪ್ರತಿದಿನ ನೀರು ಬದಲಾಯಿಸಿಕೊಂಡಿರಬೇಕು. ಅನಂತರವೇ ಬಳಸಲು ಯೋಗ್ಯ.
ಕಳಲೆ ಪೋಡಿ
ವಿಧಾನ: 2 ಕಪ್ ಕಡ್ಲೆಹಿಟ್ಟು, 2-3 ಚಮಚ ಅಕ್ಕಿಹಿಟ್ಟು, ಅಚ್ಚಖಾರದ ಪುಡಿ, ಅರಿಶಿನ ಪುಡಿ, ಉಪ್ಪು, ಓಂಕಾಳು, ಚಿಟಿಕೆ ಸೋಡಾ ಹಾಕಿ ಮಿP್ಸ… ಮಾಡಿ. ಅದಕ್ಕೆ ಎರಡು ಚಮಚ ಚೆನ್ನಾಗಿ ಕಾದ ಎಣ್ಣೆ ಹಾಕಿ ಮಿP್ಸ… ಮಾಡಿ. ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಗಂಟಾಗದಂತೆ ಮಿರ್ಚಿ ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಅದಕ್ಕೆ ಹೆಚ್ಚಿದ ಕಳಲೆಯನ್ನು ಅದ್ದಿ ಕಾದ ಎಣ್ಣೆಗೆ ಹಾಕಿ ಹೊಂಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿಕರಿದು ತೆಗೆಯಿರಿ. ಬಿಸಿ ಬಿಸಿ ಕಳಲೆ ಪೋಡಿ ಮಳೆಗಾಲಕ್ಕೆ ಹೆಚ್ಚು ಹಿತ.
ಕಳಲೆ ವಡೆ
ಸಣ್ಣದಾಗಿ ಹೆಚ್ಚಿಕೊಂಡ ಕಳಲೆಯನ್ನು ಉಪ್ಪು, ನೀರು ಹಾಕಿ ಅರ್ಧ ಬೇಯಿಸಿಕೊಂಡು ಸಂಪೂರ್ಣ ನೀರು ಬಸಿದಿಟ್ಟುಕೊಳ್ಳಿ. ಮಿಕ್ಸಿ ಜಾರಿಗೆ ಒಂದು ಗಂಟೆ ನೆನೆಸಿಟ್ಟ ಕಡ್ಲೆಬೇಳೆ, ಶುಂಠಿ, ಕರಿಬೇವು, ಕೊತ್ತಂಬರಿ ಸೊಪ್ಪು, ಹಸಿಮೆಣಸು ಹಾಕಿ ತರಿತರಿ ರುಬ್ಬಿಕೊಳ್ಳಿ. ಈ ಮಿಶ್ರಣಕ್ಕೆ ಅರ್ಧ ಬೇಯಿಸಿಕೊಂಡ ಕಳಲೆ, ಚಿಕ್ಕದಾಗಿ ಹೆಚ್ಚಿದ ಈರುಳ್ಳಿ ಹಾಕಿ ಮಿಶ್ರಣ ಮಾಡಿ. ಚಿಟಿಕೆ ಉಪ್ಪು, ಅರಿಶಿನ, ಇಂಗು ಸೇರಿಸಿ ಹತ್ತು ನಿಮಿಷ ಮುಚ್ಚಳ ಮುಚ್ಚಿಡಿ. ಈಗ ಬಾಣಲಿಯಲ್ಲಿಎಣ್ಣೆ ಹಾಕಿ ಕಾದ ನಂತರ ಮಿಶ್ರಣವನ್ನು ಚಿಕ್ಕ ಚಿಕ್ಕ ಉಂಡೆ ಮಾಡಿ ತಟ್ಟಿ ಬಿಡಿ. ಮಧ್ಯಮ ಉರಿಯಲ್ಲಿಎರಡೂ ಕಡೆ ಹೊಂಬಣ್ಣ ಬರುವವರೆಗೆ ಕರಿದು ತೆಗೆಯಿರಿ.
ಕಾಯಿಚಟ್ನಿಯ ಜೊತೆ ಬಿಸಿಬಿಸಿಯಾಗಿ ಸವಿಯಿರಿ.
ಪಲ್ಯ
ಸಣ್ಣದಾಗಿ ಹೆಚ್ಚಿಕೊಂಡು ಮೂರರಿಂದ ನಾಲ್ಕು ದಿನಗಳ ಕಾಲ ನೀರು ಬದಲಾಯಿಸಿದ ಕಳಲೆಯನ್ನು ಸಂಪೂರ್ಣ ನೀರು ಬಸಿದು ಇಟ್ಟುಕೊಳ್ಳಿ. ಒಂದು ದಪ್ಪ ತಳದ ಕಡಾಯಿಗೆ ತೆಂಗಿನೆಣ್ಣೆ ಹಾಕಿ ಕಾಯಿಸಿ, ಸಾಸಿವೆ, ಉದ್ದಿನಬೇಳೆ, ಜೀರಿಗೆ, ಸೂಜಿಮೆಣಸಿನ ಪೇಸ್ವ್ , ಅರಿಶಿನಪುಡಿ, ಕರಿಬೇವು ಹಾಕಿ ಒಗ್ಗರಣೆ ಮಾಡಿ.ಈಗ ನೀರು ಬಸಿದಿಟ್ಟುಕೊಂಡ ಕಳಲೆ ಹಾಕಿ ಸ್ವಲ್ಪ ಉಪ್ಪು, ವಾಟೆಪುಡಿ/ಹುಣಸೆ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮುಚ್ಚಳ ಮುಚ್ಚಿ ಎಂಟರಿಂದ ಹತ್ತು ನಿಮಿಷಗಳ ಕಾಲ ಬೇಯಿಸಿ.
ಆಗಾಗ ಕೈ ಆಡಿಸುತ್ತಿರಿ. ಘಮ ಬರುವವರೆಗೆ ಕೈಯಾಡಿಸುತ್ತ ಹುರಿದು ಒಲೆ ಆರಿಸಿ. ಬಿಸಿ ಅನ್ನದೊಂದಿಗೆ ಅತ್ಯಂತ ರುಚಿಕರ ಕಳಲೆ ಪಲ್ಯ ತಿನ್ನಲು ಸಿದ್ಧ.