ಫುಟ್ಬಾಲ್ : ಚಾ.ನಗರ ಜೆಎನ್ ವಿ ತಂಡಕ್ಕೆ ಜಯ

Contributed byphalalochanaradhya.ks@timesofindia.com|Vijaya Karnataka
chamarajanagar jnv team achieves thrilling victory subroto cup football
ಫುಟ್ಬಾಲ್ : ಚಾ.ನಗರ ಜೆಎನ್ ವಿ ತಂಡಕ್ಕೆ ಜಯ

ವಿಕ ಸುದ್ದಿಲೋಕ ಚಾಮರಾಜನಗರ
ಹೈದರಾಬಾದ್ ನಲ್ಲಿನಡೆದ ಜೆಎನ್ ವಿ ಪ್ರಾದೇಶಿಕ ಸುಬ್ರೋಟೊ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿಚಾಮರಾಜನಗರ ಜೆಎನ್ ವಿ ತಂಡ ಪೆನಾಲ್ಟಿ ಶೂಟೌಟ್ ನಲ್ಲಿಜಯ ಗಳಿಸಿ ಪ್ರಶಸ್ತಿ ಎತ್ತಿ ಹಿಡಿಯಿತು.

ಜೆಎನ್ ವಿ ಕಾಸರಗೋಡು ತಂಡದ ವಿರುದ್ಧ ನಡೆದ ಅಂತಿಮ ಪಂದ್ಯದಲ್ಲಿ ಮೊದಲ ಪೂರ್ಣ ಸಮಯದಲ್ಲಿಎರಡು ತಂಡಗಳು 0-0 ಸಮಬಲ ಸಾಧಿಸಿದವು. ಹೆಚ್ಚುವರಿ ಸಮಯದಲ್ಲೂ 0-0 ಗೋಲ್ ಗಳಿಸಲು ಸಾಧ್ಯವಾಗದೇ ಸಮಬಲವೇ ಆಯಿತು. ಬಳಿಕ ನಡೆದ ಪೆನಾಲ್ಟಿ ಶೂಟೌಟ್ ನಲ್ಲಿಜೆಎನ್ ವಿ ಚಾಮರಾಜನಗರ ತಂಡ 5-4 ಅಂತರದಿಂದ ಜೆಎನ್ ವಿ ಕಾಸರಗೋಡು ತಂಡದ ವಿರುದ್ಧ ರೋಚಕ ಜಯ ಸಾಧಿಸಿತು.

ಪಂದ್ಯದಲ್ಲಿಉತ್ತಮ ಪ್ರದರ್ಶನ ತೋರಿದ ಗೋಲ್ ಕೀಪರ್ ಮೊಹಮ್ಮದ್ ಮನ್ಸೂರ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಜೆಎನ್ ವಿ ಚಾಮರಾಜನಗರ ತಂಡವು ಇಡೀ ಹೈದರಾಬಾದ್ ಪ್ರದೇಶವನ್ನು ಪ್ರತಿನಿಧಿಸುತ್ತಿದೆ ಎಂಬುದು ಗಮನಾರ್ಹ ಸಂಗತಿ.

ಪಂದ್ಯಾವಳಿಯ ಆರಂಭದಲ್ಲಿಜೆಎನ್ ವಿ ಚಾಮರಾಜನಗರ ತಂಡವು ತ್ರಿಶೂರ್ ವಿರುದ್ಧ ತನ್ನ ಮೊದಲ ಪಂದ್ಯವನ್ನು 2-1 ಅಂತರದಿಂದ ಗೆದ್ದಿತು. ಕೊಲ್ಲಂ ವಿರುದ್ಧ ನಡೆದ ಎರಡನೇ ಪಂದ್ಯ 0-0 ಅಂತರದಿಂದ ಡ್ರಾ ಆಗಿತ್ತು. ಮೂರನೇ ಪಂದ್ಯ ಸೆಮಿಫೈನಲ್ ನಲ್ಲಿಎರ್ನಾಕುಲಂ ವಿರುದ್ಧ 1-0 ಅಂತರದಿಂದ ಜಯ ಸಾಧಿಸಿ ಫೈನಲ್ ಪ್ರವೇಶಿಸಿತ್ತು. ತಂಡದ ಪ್ರಧಾನ ಉಸ್ತುವಾರಿಯಾಗಿ ಎಸ್ .ಎ.ರೆಹಮಾನ್ , ತರಬೇತುದಾರ ಮತ್ತು ಪಿ.ಇ.ಟಿ ಕೌಶಿಕ್ ಎಂ ಹಾಗೂ ತಂಡದ ವ್ಯವಸ್ಥಾಪಕರಾಗಿ ಹರಿ ರಾಘವನ್ ತಂಡದೊಂದಿಗೆ ಇದ್ದರು.

ಚಿತ್ರ: ಹೈದರಾಬಾದ್ ನಲ್ಲಿನಡೆದ ಪ್ರಾದೇಶಿಕ ಜೆಎನ್ ವಿ ತಂಡಗಳ ಫುಟ್ಬಾಲ್ ಪಂದ್ಯಾವಳಿಯಲ್ಲಿಜಯ ಸಾಧಿಸಿದ ಚಾ.ನಗರ ಜೆಎಚ್ ವಿ ತಂಡ ಪ್ರಶಸ್ತಿ ಸ್ವೀಕರಿಸಿತು.