ಬೂದಿಹಾಳ-ಪೀರಾಪುರ ಯೋಜನೆ ವಿಳಂಬ | ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ
ಮಾನವ ಸರಪಳಿ ನಿರ್ಮಿಸಿ ಆಕ್ರೋಶವಿಕ ಸುದ್ದಿಲೋಕ ತಾಳಿಕೋಟೆ
ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಯನ್ನು ತಕ್ಷಣ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ನೇತೃತ್ವದಲ್ಲಿರೈತರು ಪಟ್ಟಣದಲ್ಲಿಗುರುವಾರ ಪ್ರತಿಭಟನೆ ನಡೆಸಿದರು.
ರೈತರು ಡಾ.ಬಿ.ಆರ್ .ಅಂಬೇಡ್ಕರ್ ವೃತ್ತದಿಂದ ಆರಂಭಿಸಿದ ಮೆರವಣಿಗೆಗೆ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಚಾಲನೆ ನೀಡಿದರು. ಕತ್ರಿ ಬಜಾರ್ , ಶಿವಾಜಿ ಸರ್ಕಲ್ , ಮಹಾರಾಣಾ ಪ್ರತಾಪ್ ಸಿಂಹ ಸರ್ಕಲ್ ಹಾಗೂ ಬಸ್ ನಿಲ್ದಾಣ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ಸಾಗಿತು. ಬಸವೇಶ್ವರ ವೃತ್ತದಲ್ಲಿಮಾನವ ಸರಪಳಿ ನಿರ್ಮಿಸಿದ ರೈತರು ಕೆಲಕಾಲ ರಸ್ತೆ ತಡೆ ನಡೆಸಿ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯಲ್ಲಿಯಾದಗಿರಿ ಜಿಲ್ಲಾರೈತ ಸಂಘದ ಅಧ್ಯಕ್ಷ ಮಲ್ಲನಗೌಡ ಹಗರಟಗಿ ಮಾತನಾಡಿ, ‘‘ಅಂದಾಜು 935 ಕೋಟಿ ರೂ. ವೆಚ್ಚದ ಯೋಜನೆ ಪೂರ್ಣಗೊಳ್ಳಲು ಇನ್ನು 200 ಕೋಟಿ ರೂ. ಬೇಕಿದೆ. ಆದರೂ ಜನಪ್ರತಿನಿಧಿಗಳಿಂದ ಯಾವುದೇ ಇಚ್ಛಾಶಕ್ತಿ ಕಾಣುತ್ತಿಲ್ಲ. ಬೆಳೆ ವಿಮೆ ಪರಿಹಾರವೂ ರೈತರಿಗೆ ಸಿಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಉಗ್ರ ಹೋರಾಟ ಅನಿವಾರ್ಯ,’’ ಎಂದು ಎಚ್ಚರಿಸಿದರು.
ನಂತರ ರೈತರು ತಮ್ಮ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಡಾ.ವಿನಯಾ ಹೂಗಾರ ಮೂಲಕ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರಿಗೆ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ರಾಜುಗೌಡ ಅನಂತರೆಡ್ಡಿ, ಜಿಲ್ಲಾಉಪಾಧ್ಯಕ್ಷ ಬಸನಗೌಡ ಮಾಲಿಪಾಟೀಲ, ಶಾಂತಗೌಡ ಮಾಲಿಪಾಟೀಲ, ಸಂಗನಗೌಡ ಹೆಗರೆಡ್ಡಿ, ಸಿದ್ದು ಬುಳ್ಳಾ, ಮಲ್ಲನಗೌಡ ಪೊಲೀಸ್ ಪಾಟೀಲ, ರಾಜುಗೌಡ ಕೋಳೂರ, ಸುರೇಶಕುಮಾರ ಇಂಗಳಗಿ, ಪ್ರಭುಗೌಡ ನಾಡಗೌಡ ಸೇರಿದಂತೆ ರೈತರು ಭಾಗವಹಿಸಿದ್ದರು.
ಮುನ್ನೆಚ್ಚರಿಕಾ ಕ್ರಮವಾಗಿ ಸಿಪಿಐ ಮೊಹಮ್ಮದ್ ಫಸಿಯುದ್ದೀನ್ ಹಾಗೂ ಪಿಎಸ್ ಐ ಜ್ಯೋತಿ ಕೋತ್ ನೇತೃತ್ವದಲ್ಲಿಪೊಲೀಸ್ ಬಂದೋಬಸ್ ್ತ ಒದಗಿಸಲಾಗಿತ್ತು.
---
ಬಿಜೆಪಿ ಮುಖಂಡ ಮಾತನಾಡಿ
ತಾಂತ್ರಿಕ ಅಡಚಣೆಗಳ ಹೆಸರಿನಲ್ಲಿಕಾಮಗಾರಿ ಅನಗತ್ಯವಾಗಿ ವಿಳಂಬವಾಗುತ್ತಿದೆ. ಕೆಬಿಜೆಎನ್ ಎಲ್ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಯೋಜನೆಯನ್ನು ಪೂರ್ಣಗೊಳಿಸಬೇಕು.
-ಬಸನಗೌಡ ಪಾಟೀಲ ಎಡೆಯಾಪೂರ
ಬಿಜೆಪಿ ಮುಖಂಡ
-----
ನನ್ನ ಅವಧಿಯಲ್ಲಿಆರಂಭವಾದ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ರೈತರಿಗೆ ಭಾರಿ ನಷ್ಟ ಉಂಟಾಗಿದೆ. ಇನ್ನಷ್ಟು ವಿಳಂಬವಾದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು.
-ಸೋಮನಗೌಡ ಪಾಟೀಲ
ಮಾಜಿ ಶಾಸಕ
ಫೋಟೋ ಕ್ಯಾಪ್ಸಿನ್
ಟಿ ಎಲ್ ಕೆ-01 ಜುಲೈ16
ಬೂದಿಹಾಳ-ಪೀರಾಪುರ ನೀರಾವರಿ ಯೋಜನೆ ಪೂರ್ಣಗೊಳಿಸುವಂತೆ ಆಗ್ರಹಿಸಿ ತಾಳಿಕೋಟೆಯಲ್ಲಿರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಟಾಪ್ ಗೆ ಫೋಟೊ ಬಳಸಿ...
ಟಿ ಎಲ್ ಕೆ-01 ಜುಲೈ16ಎ
ಬೂದಿಹಾಳ-ಪೀರಾಪುರ ನೀರಾವರಿ ಯೋಜನೆ ಪೂರ್ಣಗೊಳಿಸುವಂತೆ ಆಗ್ರಹಿಸಿ ತಾಳಿಕೋಟೆಯಲ್ಲಿರೈತರು ತಹಸೀಲ್ದಾರ್ ಡಾ.ವಿನಯಾ ಹೂಗಾರ ಮೂಲಕ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರಿಗೆ ಮನವಿ ಸಲ್ಲಿಸಿದರು.