ಪುತ್ತೂರಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಎನ್ ಸಿಸಿ ನೌಕಾದಳ ವಿಭಾಗದ ಕೆಡೆಟ್ ಕ್ಯಾಪ್ಟನ್ ದಿಗಂತ್ ವಿ.ಎಸ್ .ಅವರು ಆಲ್ ಇಂಡಿಯಾ ನೌ ಸೈನಿಕ್ ಕ್ಯಾಂಪ್ -2026ರಲ್ಲಿ ಭಾಗವಹಿಸಿ 2 ಪದಕಗಳನ್ನು ಗೆದ್ದಿದ್ದಾರೆ.ಮಹಾರಾಷ್ಟ್ರದ ಲೋಣಾವಾಲಾದ ಐಎನ್ ಎಸ್ ಶಿವಾಜಿಯಲ್ಲಿ ಜುಲೈ 1ರಿಂದ 12ರವರೆಗೆ ನಡೆದ ರಾಷ್ಟ್ರೀಯ ಶಿಬಿರದಲ್ಲಿಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿದ ದಿಗಂತ್ , ದೇಶದ ನಾನಾ ರಾಜ್ಯಗಳ ಎನ್ ಸಿಸಿ ನೌಕಾದಳ ವಿಭಾಗದ ಕೆಡೆಟ್ ಗಳೊಂದಿಗೆ ಸ್ಪರ್ಧಿಸಿ, ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿಬೆಳ್ಳಿ ಪದಕ ಹಾಗೂ ಸರ್ವಿಸ್ ಸಬ್ಜೆಕ್ಟ್ ಪರೀಕ್ಷೆಯಲ್ಲಿಕಂಚಿನ ಪದಕ ಪಡೆದರು. ದಿಗಂತ್ ಅವರಿಗೆ ಎನ್ ಸಿಸಿ ನೌಕಾದಳ ವಿಭಾಗದ ಸಹಾಯಕ ಅಧಿಕಾರಿ ಸಬ್ ಲೆಫ್ಟಿನೆಂಟ್ ತೇಜಸ್ವಿ ಭಟ್ ಅವರು ಮಾರ್ಗದರ್ಶನ ಹಾಗೂ ತರಬೇತಿ ನೀಡಿದ್ದರು.