ಕುಂಬ್ಡಾಜೆ ಗ್ರಾಮ ಪಂಚಾಯಿತಿ, ಕುಟುಂಬ ಆರೋಗ್ಯ ಕೇಂದ್ರ , ಆಯುಷ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿಹೋಮಿಯೋಪಥಿ ಮತ್ತು ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆ, ವೈದ್ಯಕೀಯ ಶಿಬಿರವು ಮವ್ವಾರು ಶ್ರೀ ಷಡಾನನ ಗ್ರಂಥಾಲಯದಲ್ಲಿಮಂಗಳವಾರ ನಡೆಯಿತು.ಶಿಬಿರವನ್ನು ಉದ್ಘಾಟಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧಾ ಮಾತನಾಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ ಅಧ್ಯಕ್ಷತೆ ವಹಿಸಿದರು. ಗ್ರಾಮ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾಂಕ ಎ.ಸಿ. ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಶಿಬಿರದಲ್ಲಿಮುಳಿಯಾರು ಹೋಮಿಯೋಪಥಿ ವೈದ್ಯಾಧಿಕಾರಿ ಡಾ. ಅಶ್ವಿನಿ ಕೆ.ವಿ. ಅವರು ಹೋಮಿಯೋ ಔಷಧಗಳ ಬಗ್ಗೆ ತಿಳುವಳಿಕೆ ತರಗತಿ ನಡೆಸಿಕೊಟ್ಟರು. ಕುಂಬ್ಡಾಜೆ ಆಯುಷ್ ಆರೋಗ್ಯ ಕೇಂದ್ರದ ಹೆಲ್ತ್ ಇನ್ಸ್ ಪೆಕ್ಟರ್ ಸುರೇಶ್ ಕುಮಾರ್ ಸಾಂಕ್ರಾಮಿಕ ರೋಗಗಳ ಬಗ್ಗೆ ತರಗತಿ ನಡೆಸಿಕೊಟ್ಟರು. ಆರಂಭದಲ್ಲಿಕುಂಬ್ಡಾಜೆ ಹೋಮಿಯೋಪಥಿಕ್ ವೈದ್ಯಾಧಿಕಾರಿ ಡಾ. ಐಶ್ವರ್ಯ ಕೆ. ಸ್ವಾಗತಿಸಿದರು. ಆಶಾ ಕಾರ್ಯಕರ್ತೆ ಸುಲೋಚನಾ ವಂದಿಸಿದರು. ಶಿಬಿರದಲ್ಲಿಸುಮಾರು 60ಕ್ಕಿಂತಲೂ ಅಧಿಕ ಮಂದಿ ಆರೋಗ್ಯ ತಪಾಸಣೆ ಮಾಡಿಕೊಂಡರು.