ಎಸ್ ಐಆರ್ , ಬೂತ್ ಮಟ್ಟದ ಪ್ರತಿನಿಧಿಗಳ ಸಭೆ

Contributed byballekeremanju@gmail.com|Vijaya Karnataka
handloom development meeting of booth level leaders for regulations
ವಿಕ ಸುದ್ದಿಲೋಕ ಕೆ.ಆರ್ .ಪೇಟೆ

ಪಟ್ಟಣದಲ್ಲಿಬ್ಲಾಕ್ ಕಾಂಗ್ರೆಸ್ ವತಿಯಿಂದ ಎಸ್ ಐಆರ್ ಕಾರ್ಯಕ್ರಮದ ಬೂತ್ ಮಟ್ಟದ ಪ್ರತಿನಿಧಿಗಳ(ಬಿಎಲ್ ಎ2) ಸಭೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ನೇತೃತ್ವದಲ್ಲಿನಡೆಯಿತು.
ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಸಭೆ ಉದ್ಘಾಟಿಸಿ ಮಾತನಾಡಿ,‘‘ಎಸ್ ಐಆರ್ ಕಾರ್ಯಾಚರಣೆಯಲ್ಲಿಅರ್ಹ ಮತದಾರರ ಹೆಸರು ಕೈಬಿಟ್ಟು ಹೋಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪಕ್ಷದ ವತಿಯಿಂದ ನಿಯೋಜಿಸಲಾಗಿರುವ ಬಿಎಲ್ ಎ2 ಅವರದ್ದಾಗಿದೆ. ಇದುವರೆಗೂ ಶೇ.41ರಷ್ಟು ಮಾತ್ರ ಎನ್ಯುಮರೇಷನ್ ಫಾರಂಗಳನ್ನು ಭರ್ತಿಮಾಡಿ ಅಪ್ ಲೋಡ್ ಮಾಡಲಾಗಿದೆ. ಚುನಾವಣಾ ಆಯೋಗ ನಿಯೋಜನೆ ಮಾಡಿರುವ ಬಿಎಲ್ ಒ ಅಧಿಕಾರಿಗಳು ಮನೆ ಮನೆಗೆ ಹೋಗಿ ಎನ್ಯುಮರೇಷನ್ ಫಾರಂ ತಲುಪಿಸಿ ಭರ್ತಿ ಮಾಡಿ ವಾಪಸ್ ಪಡೆಯುತ್ತಿದ್ದಾರೆಯೆ ಎಂಬುದನ್ನು ಪರಿಶೀಲಿಸಬೇಕು,’’ ಎಂದು ತಿಳಿಸಿದರು.

ಕೈ ಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ , ಜಿಲ್ಲಾಕಾಂಗ್ರೆಸ್ ಎಸ್ ಐಆರ್ ಕಾರ್ಯಕ್ರಮ ಸಂಯೋಜಕ ಎಚ್ .ಎಂ.ಉದಯಕುಮಾರ್ , ತಾಲೂಕು ಎಸ್ ಐಆರ್ ಉಸ್ತುವಾರಿ ಬೀರವಳ್ಳಿ ಆಕಾಶ್ , ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್ , ಬ್ಲಾಕ್ ಕಾಂಗ್ರೆಸ್ ಎಸ್ .ಸಿ. ವಿಭಾಗದ ಅಧ್ಯಕ್ಷರಾದ ರಾಜಯ್ಯ, ಶಿವಣ್ಣ, ತಾಲೂಕು ಕೆ.ಡಿ.ಪಿ. ಸದಸ್ಯರಾದ ಇಲ್ಯಾಸ್ ಅಹಮದ್ , ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಶಿವಲಿಂಗಪ್ಪ, ನವೀದ್ ಅಹಮದ್ , ಬೊಪ್ಪನಹಳ್ಳಿ ರಮೇಶ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಬಿ.ಎಲ್ .ಎ 2 ಪ್ರತಿನಿಧಿಗಳು ಇದ್ದರು.

ಚಿತ್ರಶೀರ್ಷಿಕೆ:ಋಈ್ಗ19ಒಖಿಔಓ್ಕP2ಧಿ ಕೆ.ಆರ್ .ಪೇಟೆಯಲ್ಲಿಬ್ಲಾಕ್ ಕಾಂಗ್ರೆಸ್ ವತಿಯಿಂದ ಎಸ್ ಐಆರ್ ಕಾರ್ಯಕ್ರಮದ ಬೂತ್ ಮಟ್ಟದ ಪ್ರತಿನಿಧಿಗಳ(ಬಿಎಲ್ ಎ2) ಸಭೆಯಲ್ಲಿಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿದರು.